ಮುಂಬೈ: ಒಬ್ಬ ವ್ಯಕ್ತಿ ಏಳು ಮಕ್ಕಳೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿರುವುದು ಮುಂಬೈನಲ್ಲಿ ಕಂಡುಬಂದಿದೆ. ತೆಂಗಿನಕಾಯಿ ಅಂಗಡಿ ನಡೆಸುತ್ತಿರುವ ಮುನವ್ವರ್ ಷಾ ಎಂಬಾತ ಈ ಸಾಹಸಮಯ ರೈಡ್ ಮಾಡುವ ವಿಡಿಯೋ ವೈರಲ್ ಆದ ನಂತರ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವೀಡಿಯೊದಲ್ಲಿ, ಮುನವ್ವರ್ ಷಾ ತನ್ನ ಸ್ಕೂಟರ್ ಇಬ್ಬರು ಮಕ್ಕಳನ್ನು ಮುಂದೆ ನಿಲ್ಲಿಸಿ, ಮೂವರು ಮಕ್ಕಳು ಹಿಂದೆ ಕುಳಿದಿದ್ದರು. ಅಲ್ಲದೆ ಇಬ್ಬರು ವಾಹನದ ಕ್ರ್ಯಾಶ್ ಗಾರ್ಡ್ ಮೇಲೆ ನಿಂತಿದ್ದರು.
ಇದನ್ನೂ ಓದಿ:Rajasthan: ಎರಡು ಲಾರಿಗಳ ಮಧ್ಯೆ ಅಪಘಾತ; 2 ಗಂಟೆಗಳ ಕಾಲ ಬಾನೆಟ್ನಲ್ಲಿ ಸಿಲುಕಿದ್ದ ಚಾಲಕ
ಈ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿಕೊಂಡಿದ್ದು, ಅವರು ಟ್ವಿಟರ್ ನಲ್ಲಿ ಹಂಚಿಕೊಂಡು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಸವಾರನನ್ನು ಬಂಧಿಸಿದ್ದಾರೆ.
ವೀಡಿಯೊದಲ್ಲಿ ಕಂಡುಬರುವ ಏಳು ಮಂದಿಯಲ್ಲಿ ನಾಲ್ವರು ಮುನವ್ವರ್ ಶಾ ಅವರ ಮಕ್ಕಳಾಗಿದ್ದರೆ, ಉಳಿದವರು ನೆರೆಹೊರೆಯವರ ಮಕ್ಕಳು.