Advertisement

ವರುಣಾರ್ಭಟಕ್ಕೆ 28 ಸಾವು

06:00 AM Jun 10, 2018 | Team Udayavani |

ಲಕ್ನೋ/ಮುಂಬೈ: ಮುಂಬೈ ಕರಾವಳಿಯಲ್ಲಿ ಮುಂಗಾರು ಪ್ರವೇಶ, ಉತ್ತರಪ್ರದೇಶದಲ್ಲಿ ಧೂಳು ಬಿರುಗಾಳಿಯ ಆರ್ಭಟ… ಶನಿವಾರ ಈ ಎರಡೂ ರಾಜ್ಯಗಳಲ್ಲಿ ನಡೆದ ಪ್ರಕೃತಿಯ ರುದ್ರನರ್ತನಕ್ಕೆ 28 ಮಂದಿಯ ಮರಣ.

Advertisement

ಉತ್ತರಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದೀಚೆಗೆ ಬೀಸಿದ ಧೂಳು ಬಿರುಗಾಳಿ, ಸಿಡಿಲಿನಬ್ಬರಕ್ಕೆ 11 ಜಿಲ್ಲೆಗಳ 26 ಮಂದಿ ಬಲಿಯಾಗಿದ್ದಾರೆ. ಇತ್ತೀಚೆಗಷ್ಟೇ ನೂರಾರು ಮಂದಿಯನ್ನು ಬಲಿತೆಗೆದುಕೊಂಡ ಧೂಳು ಬಿರುಗಾಳಿಯು ಯು.ಪಿ. ಜನರನ್ನು ಕಂಗೆಡಿಸಿದೆ. ಭಾನುವಾರವೂ ರಾಜ್ಯದ ಹಲವೆಡೆ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಎಚ್ಚರಿಕೆಯಲ್ಲಿರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನೊಂದೆಡೆ, ಮುಂಬೈ ಕರಾವಳಿಗೆ ಶನಿವಾರ ಮುಂಗಾರು ಪ್ರವೇಶಿಸಿದ್ದು, ಮಹಾರಾಷ್ಟ್ರದಾದ್ಯಂತ ಭಾರೀ ಮಳೆಯಾಗಿದೆ. ಮಳೆ ಸಂಬಂಧಿ ಘಟನೆಗಳಿಂದಾಗಿ ಇಬ್ಬರು ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಹಲವಾರು ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಲವು ರೈಲುಗಳ ಸಂಚಾರ ವಿಳಂಬವಾಗಿವೆ. ಮರಗಳು ಧರೆಗುರುಳಿವೆ. ಎರಡು ವಿಮಾನಗಳ ಮಾರ್ಗ ಬದಲಿಸಲಾಗಿದೆ. ಮಳೆ ಸಂಬಂಧಿ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿದ್ದು, ನೌಕಾಪಡೆಯ ಸಿಬ್ಬಂದಿಯೂ ಸನ್ನದ್ಧರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆವರಿಸಿದ ಕತ್ತಲು
ಶನಿವಾರ ಸಂಜೆ ಗಂಟೆಗೆ 70 ಕಿ.ಮೀ. ವೇಗದಲ್ಲಿ ಧೂಳು ಬಿರುಗಾಳಿಯು ದೆಹಲಿಯನ್ನು ಅಪ್ಪಳಿಸಿದೆ. ಸಂಜೆ ದಿಢೀರನೆ ಬೀಸಿದ ಗಾಳಿ ಹಾಗೂ ಮಳೆ ಯಿಂದಾಗಿ ಜನರು ತತ್ತರಿಸಿಹೋಗಿ ದ್ದಾರೆ. ಸಂಜೆ 5 ಗಂಟೆ ವೇಳೆಗೆ ಧೂಳು ಬಿರುಗಾಳಿ ಬೀಸಿದ ಕಾರಣ, ದೆಹಲಿಗೆ ದೆಹಲಿಯೇ ಕತ್ತಲಲ್ಲಿ ಮುಳುಗಿದಂತೆ ಕಂಡುಬಂತು. ಮೆಟ್ರೋ ರೈಲುಗಳ ಸಂಚಾರ ವ್ಯತ್ಯಯ ವಾಯಿತು. ಪ್ರತಿ ಕೂಲ ಹವಾಮಾನ ದಿಂದಾಗಿ 18 ವಿಮಾನಗಳ ಮಾರ್ಗ ಬದಲಿಸಲಾಯಿತು. 

26 ಉ.ಪ್ರ.ದಲ್ಲಿ ಸಿಡಿಲು, ಧೂಳು ಬಿರುಗಾಳಿಗೆ ಮೃತಪಟ್ಟವರ ಸಂಖ್ಯೆ
2ಮುಂಬೈನ ಮಳೆ ಸಂಬಂಧಿ ಘಟನೆಗಳಿಗೆ ಬಲಿಯಾದವರು
70 ಕಿ.ಮೀ. ದೆಹಲಿಯಲ್ಲಿ ಧೂಳು ಬಿರುಗಾಳಿಯ ವೇಗ (ಗಂಟೆಗೆ)
18 ವಿಮಾನಗಳ ಸಂಚಾರ ವ್ಯತ್ಯಯ

Advertisement
Advertisement

Udayavani is now on Telegram. Click here to join our channel and stay updated with the latest news.

Next