Advertisement
ಸೆ. 19ರಂದು ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೊರೇಟ್ ಪಾರ್ಕ್ ಕ್ಲಬ್ ಹೌಸ್‌ನ ದಿ| ಆನಂದ ಕೆ. ಪೂಜಾರಿ ಪಾಲಡ್ಕ ಸಭಾಗೃಹದ ಅಪ್ಪಿ ಕೃಷ್ಣ ಶೆಟ್ಟಿ ಕಂಬಿಹಳ್ಳಿ-ಚಿಕ್ಕಮಗಳೂರು ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕೆ. ಟಿ. ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2021 ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡಿಗ ಪತ್ರಕರ್ತರ ಸಂಘವು ಇಷ್ಟೊಂದು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿ ಹಿರಿಯ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅಭಿನಂದನೀಯ. ನಿಮ್ಮ ಎಲ್ಲ ಕಾರ್ಯಕ್ರಮಗಳಿಗೆ ಸಂಸದನಾಗಿ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದರು.
Related Articles
Advertisement
ಸಮಾರಂಭದಲ್ಲಿ ಶಿವಾಸ್ ಸಂಸ್ಥೆಯ ಡಾ| ಶಿವರಾಮ ಕೃಷ್ಣ ಭಂಡಾರಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಎಸ್. ಪೂಜಾರಿ, ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಬ್ಯಾಂಕ್‌ನ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ, ಎನ್‌ಸಿಪಿ ಪಕ್ಷದ ಮುಂಬಯಿ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ. ಪೂಜಾರಿ ಚಿತ್ರಾಪು, ಯುವ ನೇತಾರ ನಿರಂಜನ್ ಎಲ್. ಪೂಜಾರಿ, ಸಮಾಜ ಸೇವಕ ರಮಾನಂದ್ ಸಾಲ್ಯಾನ್ ಅಳಿಯೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಘಟಕದ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಪ್ರಧಾನ ಕಾರ್ಯದರ್ಶಿ ಕೆ. ಗಂಗಾಧರ ಯಾದವ್, ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸಲಹಾ ಸಮಿತಿಯ ಸದಸ್ಯರಾದ ಸಿಎ ಐ. ಆರ್. ಶೆಟ್ಟಿ, ಗ್ರೇಗೊರಿ ಡಿ’ಅಲ್ಮೇಡಾ, ಸುರೇಂದ್ರ ಎ. ಪೂಜಾರಿ, ಕಡಂದಲೆ ಸುರೇಶ್ ಎಸ್. ಭಂಡಾರಿ, ಪಂಡಿತ್ ನವೀನ್‌ಚಂದ್ರ ಆರ್. ಸನಿಲ್, ಸುಧಾಕರ್ ಉಚ್ಚಿಲ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾಗರಾಜ್ ಕೆ. ದೇವಾಡಿಗ, ಅನಿತಾ ಪಿ. ಪೂಜಾರಿ ತಾಕೋಡೆ, ಅಶೋಕ್ ಆರ್. ದೇವಾಡಿಗ, ವಿಶೇಷ ಆಮಂತ್ರಿತ ಸದಸ್ಯರಾದ ಸಾ. ದಯಾ, ಗೋಪಾಲ್ ತ್ರಾಸಿ, ಸದಾನಂದ ಕೆ. ಸಫಲಿಗ ಶಿರ್ವ, ಕರುಣಾಕರ್ ವಿ. ಶೆಟ್ಟಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸವಿತಾ ಸುರೇಶ್ ಶೆಟ್ಟಿ ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಎಸ್. ಸುವರ್ಣ ಸ್ವಾಗತಿಸಿದರು. ಪತ್ರಕರ್ತರ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಸ್ತಾವನೆಗೈದರು. ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ಪೂಜಾರಿ ನಿಡ್ಡೋಡಿ ಕಾರ್ಯಕ್ರಮ ನಿರ್ವಹಿಸಿದರು. ಎ. ಆರ್. ಸುಬ್ಬಯ್ಯಕಟ್ಟೆ, ಅಭಿನಂದನ ನುಡಿಗಳನ್ನಾಡಿದರು. ಜತೆ ಕೋಶಾಧಿಕಾರಿ ಡಾ| ಜಿ. ಪಿ. ಕುಸುಮಾ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಜಯಂತ್ ಕೆ. ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಆರ್. ಶೆಟ್ಟಿ ತಾಳಿಪಾಡಿ ವಂದಿಸಿದರು.
ಯೋಗ್ಯ ವ್ಯಕ್ತಿಗೆ ಪ್ರಶಸ್ತಿಪತ್ರಕರ್ತ ನಿರ್ಭೀತನಾಗಿರಬೇಕು. ಒಬ್ಬ ಪತ್ರಕರ್ತನಲ್ಲಿರುವ ನಿರ್ಭೀತಿ ಸಾಹಿತಿಗೆ ಇರುವುದಿಲ್ಲ. ಭಯವಿಲ್ಲದ ವೃತ್ತಿ ಎಂದರೆ ಅದು ಪತ್ರಕರ್ತನ ವೃತ್ತಿ. ಸಾಹಿತಿಗೆ ಅಂಜಿಕೆ, ದಾಕ್ಷಿಣ್ಯ ಇರುತ್ತದೆ, ಆದರೆ ಪತ್ರಕರ್ತನಿಗಿಲ್ಲ. ಇದನ್ನೇ ಕೆ. ಟಿ. ವೇಣುಗೋಪಾಲ್ ರೂಢಿಸಿಕೊಂಡಿದ್ದರು. ಯೋಗ್ಯ ವ್ಯಕ್ತಿಗೆ ಪ್ರಶಸ್ತಿ ಲಭಿಸಿದೆ. ಚೇವಾರ್ ಪತ್ರಿಕೋದ್ಯಮದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
-ಡಾ| ಸುನೀತಾ ಎಂ. ಶೆಟ್ಟಿ, ಹಿರಿಯ ಸಾಹಿತಿ ಸದಸ್ಯರಿಗೆ ಸಹಕಾರಿಯಾಗಲಿ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇಲ್ಲಿನ ಕನ್ನಡಿಗ ಪತ್ರಕರ್ತರಿಗೆ ಶ್ರೀರಕ್ಷೆಯಾಗಿದೆ. ಸಂಘವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿ ಸದಸ್ಯರಿಗೆ ಸಹಕಾರಿಯಾಗಲಿ. ನಮ್ಮದೇ ಸಂಸ್ಥೆ ಎಂಬ ಹೆಮ್ಮೆಯಿಂದ ಬಂದಿದ್ದೇನೆ. ನನ್ನ ಸಹಾಯ, ಸಹಕಾರ ಸಂಸ್ಥೆಗೆ ಸದಾಯಿದೆ. ಎಲ್ಲರೂ ಒಂದಾಗಿ ಸಂಸ್ಥೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸಿ.
-ಜಯರಾಮ ಬಿ. ಶೆಟ್ಟಿ,
ಪ್ರವರ್ತಕರು, ಅಜಂತಾ ಕ್ಯಾಟರರ್ ಮುಂಬಯಿ ಸಂಘಟನೆ ಅಭಿವೃದ್ಧಿಯತ್ತ
ಹೊರನಾಡ ಮತ್ತು ಗಡಿನಾಡ ಪತ್ರಕರ್ತರ ಶಕ್ತಿ ಪ್ರದರ್ಶನದ ಸಂಕೇತ ಈ ಕಾರ್ಯಕ್ರಮವಾಗಿದೆ. ನಾವೆಲ್ಲರೂ ಸಾಂಘಿಕವಾಗಿದ್ದರೆ ಸಂಘದ ಮೂಲಕ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು. ಒಗ್ಗಟ್ಟಿನಿಂದ ಸಂಘಟನೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ.
-ರೋನ್ಸ್ ಬಂಟ್ವಾಳ್
ಅಧ್ಯಕ್ಷರು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ