Advertisement

ರಂಜಿಸಿದ ಮುಂಬಯಿ ಪತ್ರಕರ್ತರ ಮಹಿಷ ಮರ್ದಿನಿ 

06:00 AM Aug 31, 2018 | Team Udayavani |

ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಸದಸ್ಯರು ಮುಂಬಯಿಯ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಆ. 22 ರಂದು ಮಹಿಷಾಸುರ ಮರ್ದಿನಿ ಪ್ರಸಂಗವನ್ನು ಪ್ರದರ್ಶಿಸಿ ಶಹಬ್ಟಾಸ್‌ಗಿರಿ ಪಡೆದರು.  ಪತ್ರಕರ್ತರ ಪೈಕಿ ಹೆಚ್ಚಿನವರು ಮೊದಲ ಬಾರಿಗೆ ರಂಗಸ್ಥಳಕ್ಕೆ ಇಳಿದವರು. ಇವರನ್ನೆಲ್ಲ ರೂಪುಗೊಳಿಸಿರುವುದು ಯಕ್ಷಗುರು ಬಾಲಕೃಷ್ಣ ಶೆಟ್ಟಿ ಅಜೆಕಾರು. ಪ್ರೇಕ್ಷಕರಿಗೆ ಎಲ್ಲೂ ನಿರಾಸೆ ಮಾಡಬಾರದು ಎಂದು ಎಲ್ಲಾ ಪಾತ್ರಧಾರಿಗಳು ಹಠ ತೊಟ್ಟಿದ್ದರೋ ಎಂಬಂತೆ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದು ಅಂದಿನ ವಿಶೇಷತೆ. ಅವರು ಮಹಿಷಾಸುರನಾಗಿ ರಂಗದುದ್ದಕ್ಕೂ ತನ್ನ ಹಾವಭಾವ ಅರ್ಥಗಳಿಂದ ಪ್ರೇಕ್ಷಕರಲ್ಲಿ ಬಯಲಾಟ ಮೇಳಗಳ ಪಾತ್ರಧಾರಿಗಳನ್ನು ನೆನಪಿಸುವಂತೆ ರಂಜಿಸಿದರು. ಶ್ರೀದೇವಿಯಾಗಿ ದಿನೇಶ್‌ ಶೆಟ್ಟಿ ರೆಂಜಾಳ ಗಂಭೀರ ವರ್ಚಸ್ಸಿನ ಅಭಿನಯದ ಮೂಲಕ ಗಮನ ಸೆಳೆದರು. 

Advertisement

 ದೇವೇಂದ್ರನಾಗಿ ಅಭಿನಯಿಸಿದ ಮುಂಬಯಿಯ ಬಡಗಿನ ಹವ್ಯಾಸಿ ಕಲಾವಿದ ರಮೇಶ್‌ ಬಿರ್ತಿಯವರು ಚೊಕ್ಕವಾಗಿ ಸಂಭಾಷಿಸಿ ಹಿರಿತನವನ್ನು ಮೆರೆದಿದ್ದಾರೆ.  ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ಎಲ್ಲರೂ ಹುಬ್ಬೇರಿಸುವಂತೆ ವಾಹ್‌… ವಾಹ್‌… ಎಂದು ಶ್ಲಾ ಸುವ ಅಭಿನಯ ನೀಡಿದವರೆಂದರೆ “ಮಾಲಿನಿ’ಯಾಗಿ ಅಭಿನಯಿಸಿದವರು ಹರೀಶ್‌ ಕಾರ್ನಾಡ್‌. “ವಿದ್ಯುನ್ಮಾಲಿ’ಯಾಗಿ ಅಭಿನಯಿಸಿದ ಏಳಿಂಜೆ ನಾಗೇಶ್‌ ಅಚ್ಚುಕಟ್ಟಾಗಿ ತನ್ನ ಪಾತ್ರ ನಿರ್ವಹಿಸಿದ್ದು ಏರು ಪದ್ಯಗಳಲ್ಲಿ ಮಿಂಚಿದರು. ಅದೇ ರೀತಿ ಯಕ್ಷನ ಪಾತ್ರಧಾರಿ ಜಯಂತ್‌ ಕಿಲೆಂಜೂರು, ಸುಪಾರ್ಶ್ವಕನಾಗಿ ನವೀನ್‌ ಶೆಟ್ಟಿ ಇನ್ನ ಬಾಳಿಕೆ ತಮ್ಮ ಪಾತ್ರಗಳಲ್ಲಿನ “ರೋಷ’ವನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.

ಬ್ರಹ್ಮನಾಗಿ ಸಾ. ದಯಾ ಅಭಿನಯದ ಗತ್ತುಗಾರಿಕೆಯನ್ನು ಅಭಿವ್ಯ ಕ್ತಿಸಿದರೆ, ವಿಶ್ವನಾಥ್‌ ಅವಿೂನ್‌ ನಿಡ್ಡೋಡಿ ಅವರು ವಿಷ್ಣು ಪಾತ್ರ ದಲ್ಲಿ ನಿರರ್ಗಳವಾದ ಮಾತಿನ ವೈಖರಿ, ಅದನ್ನು ಅಭಿವ್ಯಕ್ತಿಸಿದ ಪರಿ ಆಕರ್ಷ ಕವಾಗಿತ್ತು. ಈಶ್ವರನ ಪಾತ್ರಧಾರಿ ಸುರೇಶ್‌ ಶೆಟ್ಟಿ ಯೆಯ್ನಾಡಿ ಮಾತಿಗಿಂತ ಅಭಿನಯವೇ ಲೇಸು ಎಂಬಂತೆ ಪಾತ್ರ ನಿರ್ವಹಿಸಿದಂತೆ ಕಂಡಿತು.

ಶಂಕಾಸುರನಾಗಿ  ಪ್ರೀತಮ್‌ ದೇವಾಡಿಗ, ಬಿಡಲಾಸುರನಾಗಿ ಭಾರತಿ ಉಮೇಶ್‌ ಕೋಟ್ಯಾನ್‌, ಚಕ್ಷಾಸುರನಾಗಿ ಗಣಪತಿ ಮೊಗವೀರ, ದುರ್ಗಾಸುರನಾಗಿ ಜಯರಾಮ್‌ ನಾಯಕ್‌ ಪಾತ್ರಗಳ ಔಚಿತ್ಯ ವಿೂರದಂತೆ ಚೊಕ್ಕವಾಗಿ ಅಭಿನಯಿಸಿದರು.

ಮಾಲಿನಿಯ ದೂತನಾಗಿ  ಕರುಣಾಕರ್‌ ಶೆಟ್ಟಿ ಎದ್ದು ಕಾಣುವ ಮುಖವರ್ಣಿಕೆಯಲ್ಲದೆ, ಕುಣಿತ – ಹಾಸ್ಯ ಮಿಶ್ರಿತ ಸಂಭಾಷಣೆಯಿಂದಲೂ ಛಾಪು ಒತ್ತಿದರು.ದೇವೇಂದ್ರನ ಬಲಗಳಲ್ಲಿ ದೀಪಾ ಪಾಲೆತ್ತಾಡಿ, ಶ್ರಾವ್ಯ, ಶ್ರೇಯಸ್‌Õ, ತ್ರಿಶಾ ಈ ಪುಟಾಣಿಗಳು ತಮ್ಮ ವಯಸ್ಸಿಗೂ ಮೀರಿದ ಕುಣಿತ ಮತ್ತು ಸಂಭಾಷಣೆಯಿಂದ ಮನಗೆದ್ದರು. ಹವ್ಯಾಸಿ ಭಾಗವತ ಮೋಹನ್‌ದಾಸ್‌ ರೈ, ಕಟೀಲು ಮೇಳದ ದೇವಿಪ್ರ ಸಾದ್‌ ಆಳ್ವ ತಲಪಾಡಿ, ಮದ್ದಳೆಯಲ್ಲಿ ಮುಂಬಯಿಯ ಆನಂದ್‌ ಶೆಟ್ಟಿ ಇನ್ನ, ಚೆಂಡೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು ಮತ್ತು ಚಕ್ರತಾಳದಲ್ಲಿ ಅವಕಾಶ್‌ ಕೆರ್ವಾಸೆ ಇವರ ಸಹಕಾರವೂ ಮರೆಯುವಂಥದ್ದಲ್ಲ.

Advertisement

ಈ ಪ್ರದರ್ಶನದಲ್ಲಿ ಕೆಲವು ವಿಶೇಷತೆಗಳನ್ನು ಗುರುತಿಸಬಹುದಿತ್ತು. ಬಡಗುತಿಟ್ಟಿನ ಹವ್ಯಾಸಿ ರಮೇಶ್‌ ಬಿರ್ತಿ ಅಂದು ತೆಂಕು ತಿಟ್ಟಿನ ಹೆಜ್ಜೆ ಗಾರಿಕೆ ಕಾಣಿಸಿದರು. ಸಮಕಾಲೀನ ಅರ್ಥದಾರಿಗಳನ್ನು ನೆನಪಿ ಸುವಂತೆ ನಿರರ್ಗಳವಾಗಿ ಅಭಿನಯಿಸಿದವರಲ್ಲಿ ಅಶೋಕ್‌ ಪಕ್ಕಳ, ರಮೇಶ್‌ ಬಿರ್ತಿ ಮತ್ತು ಮಾಲಿನಿ ಹರೀಶ್‌ ಕಾರ್ನಾಡ್‌ ಎದ್ದು ಕಂಡರು.

ಶ್ರೀನಿವಾಸ ಜೆ. 

Advertisement

Udayavani is now on Telegram. Click here to join our channel and stay updated with the latest news.

Next