Advertisement

IPL 2020:  ಮುಂಬೈ, ಕೆಕೆಆರ್ ಸೆಣಸಾಟ: ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ ಜಯ

11:21 PM Oct 16, 2020 | mahesh |

ಅಬುಧಾಬಿ: ಆರಂಭಕಾರ ಕ್ವಿಂಟಾನ್‌ ಡಿ ಕಾಕ್‌ (78*) ಅಮೋಘ ಅರ್ಧಶತಕ ಹಾಗೂ ನಾಯಕ ರೋಹಿತ್‌ ಶರ್ಮ (35) ಜೋಡಿಯ ಭರ್ಜರಿ ಆಟದ ನೆರವು ಪಡೆದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಕೆಕೆಆರ್‌ ಒಡ್ಡಿದ 148 ರನ್‌ಗಳ ಸುಲಭ ಸವಾಲನ್ನು ಮೆಟ್ಟಿನಿಂತು ವಿಜಯ ಸಂಭ್ರಮ ಆಚರಿಸಿತು. ಈ ಜಯದೊಂದಿಗೆ ಸದ್ಯ ಮುಂಬೈ ಅಗ್ರ ಸ್ಥಾನದಲ್ಲಿದ್ದರೂ ಶನಿವಾರ ದಂದ್ಯದಲ್ಲಿ ಚೆನ್ನೈವಿರುದ್ಧ ಡೆಲ್ಲಿ ಗೆಲುವು ದಾಖಲಿಸಿದರೆ ಡೆಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ. ಆದ್ದರಿಂದ ಡೆಲ್ಲಿ ಮತ್ತು ಮುಂಬೈ ನಡುವೆ ಅಗ್ರ ಸ್ಥಾನಕ್ಕೆ ಮತ್ತೆ ಹಾವು-ಏಣಿ ಆಟ ಆರಂಭವಾಗಿದೆ.

Advertisement

ಟಾಸ್‌ ಜಯಿಸಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 148 ರನ್‌ ಪೇರಿಸಿತು. ಗುರಿ ಬೆನ್ನತ್ತಿದ ರೋಹಿತ್‌ ನೇತೃತ್ವದ ಮುಂಬೈ 16.5 ಓವರ್‌ಗಳಲ್ಲಿ 2 ವಿಕೆಟ್‌ನಷ್ಟಕ್ಕೆ 149 ರನ್‌ ಗಳಿಸುವಲ್ಲಿ ಯಶಸ್ವಿಯಾಯಿತು.

ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಪುಟಿದೇಳುವ ನಿರೀಕ್ಷೆಯಲ್ಲಿದ್ದ ಕೆಕೆಆರ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ರಾಹುಲ್‌ ತ್ರಿಪಾಠಿ 7 ರನ್ನಿಗೆ ವಿಕೆಟ್‌ ಒಪ್ಪಿಸಿದರು. ಉತ್ತಮ ಲಯದಲ್ಲಿರುವ ಕಿವೀಸ್‌ ವೇಗಿ ಟ್ರೆಂಟ್‌ ಬೌಲ್ಟ್ ಮಾರಕ ದಾಳಿಯ ಮರ್ಮವನ್ನರಿಯದೆ ಸೂರ್ಯಕುಮಾರ್‌ಗೆ ಕ್ಯಾಚಿತ್ತು ತ್ರಿಪಾಠಿ ನಿರಾಶೆಯೊಂದಿಗೆ ಪೆವಿಲಿಯನ್‌ ಸೇರಿಕೊಂಡರು.

ಈ ಆಘಾತದಿಂದ ಕೆಕೆಆರ್‌ ಹೊರಬರುವ ಮುನ್ನವೇ ಡೇಂಜರಸ್‌ ಬ್ಯಾಟ್ಸ್‌ಮನ್‌ ನಿತೀಶ್‌ ರಾಣ (5), ಭರವಸೆಯ ಆಟಗಾರ ಶುಭಮನ್‌ ಗಿಲ್‌ (21), ನಾಯಕತ್ವದಿಂದ ಕೆಳಗಿಳಿದ ದಿನೇಶ್‌ ಕಾರ್ತಿಕ್‌ (4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪೆರೇಡ್‌ ನಡೆಸಿದರು. ಪವರ್‌ ಪ್ಲೇ ಅವಧಿಯಲ್ಲಿ ತಂಡದ ಮೊತ್ತ 2 ವಿಕೆಟ್‌ ಕಳೆದುಕೊಂಡು 33 ರನ್‌ಗಳಿಸಿ ಒತ್ತಡಕ್ಕೆ ಸಿಲುಕಿತು. ಕಳೆದ ಪಂದ್ಯದಲ್ಲಿ ದುಬಾರಿ ಸ್ಪೆಲ್‌ ನಡೆಸಿದ ರಾಹುಲ್‌ ಚಹರ್‌ ಒಂದೇ ಓವರ್‌ನಲ್ಲಿ ಗಿಲ್‌ ಮತ್ತು ಕಾರ್ತಿಕ್‌ ವಿಕೆಟ್‌ ಬೇಟೆಯಾಡುವ ಮೂಲಕ ಕಳೆದ ಪಂದ್ಯದ ವೈಫ‌ಲ್ಯವನ್ನು ಬದಿಗೊತ್ತಿದರು. ಅವರು 4 ಓವರ್‌ಗಳಲ್ಲಿ ನೀಡಿದ್ದು ಬರೀ 18 ರನ್‌.

ರಸೆಲ್‌ ಮತ್ತೆ ವಿಫ‌ಲ
ಈ ಬಾರಿಯ ಐಪಿಎಲ್‌ ಕೂಟದ ಪ್ರತಿ ಪಂದ್ಯದಲ್ಲಿಯೂ ಬ್ಯಾಟಿಂಗ್‌ ಬರ ಅನುಭವಿಸುತಿದ್ದ ರಸೆಲ್‌ ಆರಂಭದಲ್ಲಿ ಸಿಕ್ಸರ್‌ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಬುಮ್ರಾ ಎಸೆದ ದ್ವಿತೀಯ ಓವರ್‌ನಲ್ಲಿ ಡಿ ಕಾಕ್‌ಗೆ ಕ್ಯಾಚ್‌ ನೀಡಿ ಔಟಾದರು. ಹೀಗೆ ರಸೆಲ್‌ ಬ್ಯಾಟಿಂಗ್‌ ವೈಫ‌ಲ್ಯ ಮತ್ತೆ ಮುಂದುವರಿಯಿತು.

Advertisement

ತೀವ್ರ ಸಂಕಷ್ಟಕ್ಕೆ ಸಿಲುಕಿ 61ಕ್ಕೆ 5 ವಿಕೆಟ್‌ ಕಳೆದುಕೊಂಡು ನೂರರ ಗಡಿ ದಾಟಲು ಪರಡಾಡುತಿದ್ದ ತಂಡಕ್ಕೆ ಆಸರೆಯಾದದ್ದು ನೂತನವಾಗಿ ಆಯ್ಕೆಯಾದ ನಾಯಕ ಇಯಾನ್‌ ಮಾರ್ಗನ್‌ ಮತ್ತು ಆಸೀಸ್‌ ವೇಗಿ ಪ್ಯಾಟ್‌ ಕಮಿನ್ಸ್‌. ಇವರಿಬ್ಬರು ಎಚ್ಚರಿಕೆಯ ಆಟವಾಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರು. ಮಾರ್ಗನ್‌ಗಿಂತ ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದ ಕಮಿನ್ಸ್‌ಗೆ ಡಿ’ ಕಾಕ್‌ ಒಂದು ಜೀವದಾನ ನೀಡಿದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಂಡ ಅವರು 35 ಎಸೆತಗಳಿಂದ ಅರ್ಧಶತಕ ಪೂರೈಸಿದರು. ಇದು ಕಮಿನ್ಸ್‌ ಅವರ ಚೊಚ್ಚಲ ಐಪಿಎಲ್‌ ಅರ್ಧಶತಕವಾಗಿದೆ. ಈ ಜೋಡಿಯಿಂದ ಮುರಿಯದ ವಿಕೆಟಿಗೆ 87 ರನ್‌ ಒಟ್ಟುಗೂಡಿತು. ಮಾರ್ಗನ್‌ 29 ಎಸೆತಗಳಿಂದ ಅಜೇಯ 39 (2 ಬೌಂಡರಿ, 2 ಸಿಕ್ಸರ್‌), ಕಮಿನ್ಸ್‌ ಅಜೇಯ 53 (5 ಬೌಂಡರಿ, 2 ಸಿಕ್ಸರ್‌) ರನ್‌ ಸಿಡಿಸಿದರು.

ಸ್ಕೋರ್‌ ಪಟ್ಟಿ
ಕೆಕೆಆರ್‌
ತ್ರಿಪಾಠಿ ಸಿ ಸೂರ್ಯಕುಮಾರ್‌ ಬಿ ಬೌಲ್ಟ್ 7
ಶುಭಮನ್‌ ಸಿ ಪೊಲಾರ್ಡ್‌ ಬಿ ಚಹರ್‌ 21
ರಾಣ ಸಿ ಡಿ ಕಾಕ್‌ ಬಿ ಕೋಲ್ಟರ್‌ನೆçಲ್‌ 5
ದಿನೇಶ್‌ ಕಾರ್ತಿಕ್‌ ಬಿ ಚಹರ್‌ 4
ಮಾರ್ಗನ್‌ ಔಟಾಗದೆ 39
ರಸೆಲ್‌ ಸಿ ಡಿ ಕಾಕ್‌ ಬಿ ಬುಮ್ರಾ 12
ಪ್ಯಾಟ್‌ ಕಮಿನ್ಸ್‌ ಔಟಾಗದೆ 53

ಇತರ 7
ಒಟ್ಟು (20 ಓವರ್‌ಗಗಳಲ್ಲಿ 5 ವಿಕೆಟಿಗೆ) 148
ವಿಕೆಟ್‌ ಪತನ: 1-18, 2-33, 3-42, 4-42, 5-61, 6-

ಬೌಲಿಂಗ್‌;
ಟ್ರೆಂಟ್‌ ಬೌಲ್ಟ್ 4-0-32-1
ನಥನ್‌ ಕೋಲ್ಟರ್‌ನೆçಲ್‌ 4-0-51-1
ಜಸ್‌ಪ್ರೀತ್‌ ಬುಮ್ರಾ 4-0-22-1
ಕೃಣಾಲ್‌ ಪಾಂಡ್ಯ 4-0-23-0
ರಾಹುಲ್‌ ಚಹರ್‌ 4-0-18-2

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಕಾರ್ತಿಕ್‌ ಬಿ ಮಾವಿ 35
ಡಿ ಕಾಕ್‌ ಔಟಾಗದೆ 78
ಸೂರ್ಯಕುಮಾರ್‌ ಬಿ ಚಕ್ರವರ್ತಿ 10
ಹಾರ್ದಿಕ್‌ ಔಟಾಗದೆ 21

ಇತರ 5
ಒಟ್ಟು( 16.5 ಓವರ್‌ಗಳಲ್ಲಿ 2 ವಿಕೆಟಿಗೆ) 149
ವಿಕೆಟ್‌ ಪತನ: 1-94, 2-111.

ಬೌಲಿಂಗ್‌:
ಕ್ರಿಸ್‌ ಗ್ರೀನ್‌ 2.5-0-24-0
ಪ್ಯಾಟ್‌ ಕಮಿನ್ಸ್‌ 3-0-28-0
ಪ್ರಸಿದ್ಧ ಕೃಷ್ಣ 2-0-30-0
ರಸೆಲ್‌ 2-0-15-0
ವರುಣ್‌ ಚಕ್ರವರ್ತಿ 4-0-23-1
ಶಿವಂ ಮಾವಿ 3-0-24-1

Advertisement

Udayavani is now on Telegram. Click here to join our channel and stay updated with the latest news.

Next