Advertisement

ಮುಂಬೈಗೆ 46 ರನ್‌ ಜಯ

09:06 AM Apr 28, 2019 | Team Udayavani |

ಚೆನ್ನೈ,: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ ಕೂಟದ ಶುಕ್ರವಾರದ ಬಿಗ್‌ ಫೈಟ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 46 ರನ್ನುಗಳಿಂದ ಸೋಲಿಸಿದೆ.

Advertisement

ಗೆಲ್ಲಲು 156 ರನ್‌ ಗಳಿಸುವ ಸುಲಭ ಸವಾಲು ಪಡೆದ ಚೆನ್ನೈ ತಂಡವು ಲಸಿತ ಮಾಲಿಂಗ ಮತ್ತು ಕೃಣಾಲ್‌ ಪಾಂಡ್ಯ ದಾಳಿಗೆ ತತ್ತರಿಸಿ ಹೋಯಿತು. 66 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ತಂಡಕ್ಕೆ ಯಾರು ಕೂಡ ಆಸರೆಯಾಗಿ ನಿಲ್ಲಲಿಲ್ಲ. ಅಂತಿಮವಾಗಿ 17.4 ಓವರ್‌ಗಳಲ್ಲಿ 109 ರನ್ನಿಗೆ ಆಲೌಟಾಯಿತು. 38 ರನ್‌ ಗಳಿಸಿದ್ದ ಮುರಳಿ ವಿಜಯ್‌ ತಂಡದ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.  ಧೋನಿ ಅನುಪಸ್ಥಿತಿಯಲ್ಲಿ ಆಡಿದ ಚೆನ್ನೈ ತಂಡವು ತವರಿನಲ್ಲಿ ಮೊದಲ ಸೋಲು ಕಂಡಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ತಂಡವು ಚೆನ್ನೈ ನೆಲದಲ್ಲಿಯೂ ಗೆಲುವು ದಾಖಲಿಸುವ ಉತ್ಸಾಹದಿಂದಲೇ ಆಟ ಆರಂಭಿಸಿತ್ತು. ಕ್ವಿಂಟನ್‌ ಡಿ ಕಾಕ್‌ 15 ರನ್‌ ಗಳಿಸಿ ನಿರ್ಗಮಿಸಿದಾಗ ತಂಡ 24 ರನ್‌ ಪೇರಿಸಿತ್ತು. ಆದರೆ ಆಬಳಿಕ ರೋಹಿತ್‌ ಮತ್ತು ಎವಿನ್‌ ಲೂವಿಸ್‌ ನಿಧಾನಗತಿಯಲ್ಲಿ ಆಡಿದರು. ಇಬ್ಬರೂ ಅಬ್ಬರದ ಬ್ಯಾಟಿಂಗ್‌ಗೆ ಮುಂದಾಗಲಿಲ್ಲ. ದ್ವಿತೀಯ ವಿಕೆಟಿಗೆ ಅವರಿಬ್ಬರು 75 ರನ್ನುಗಳ ಜತೆಯಾಟ ನಡೆಸಿದ್ದರೂ ಆಗಲೇ 12 ಓವರ್‌ ಮುಗಿದಿತ್ತು. ತಂಡದ ಮೊತ್ತ 99 ರನ್‌ ತಲುಪಿದಾಗ ಲೂವಿಸ್‌ ಔಟಾದರು. ಇನ್ನೆರಡು ರನ್‌ ಪೇರಿಸುವಷ್ಟರಲ್ಲಿ ಕೃಣಾಲ್‌ ಪಾಂಡ್ಯ ಕೂಡ ಔಟಾದರು. ಹಾರ್ದಿಕ್‌ ಪಾಂಡ್ಯ ಕೊನೆ ಹಂತದಲ್ಲಿ ಬಿರುಸಿನ ಆಟವಾಡಿ 18 ಎಸೆತಗಳಿಂದ 23 ರನ್‌ ಗಳಿಸಿದರು.

ವಿಕೆಟ್‌ನ ಒಂದು ಕಡೆ ಗಟ್ಟಿಯಾಗಿ ನಿಂತು ಭರ್ಜರಿ ಆಟವಾಡಿದ ರೋಹಿತ್‌ ಒಟ್ಟಾರೆ 48 ಎಸೆತ ಎದುರಿಸಿ 67 ರನ್‌ ಗಳಿಸಿ ವಿಜಯ್‌ ಶಂಕರ್‌ಗೆ ವಿಕೆಟ್‌ ಒಪ್ಪಿಸಿದರು. 6 ಬೌಂಡರಿ ಬಾರಿಸಿದ ಅವರು 3 ಸಿಕ್ಸರ್‌ ಸಿಡಿಸಿದರು.

ಬಿಗು ದಾಳಿ ಸಂಘಟಿಸಿದ ಮಿಚೆಲ್‌ ಸ್ಯಾಂಟ್ನರ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 13 ರನ್‌ ನೀಡಿ 2 ವಿಕೆಟ್‌ ಕಿತ್ತರು. ತಾಹಿರ್‌ ಮತ್ತು ಚಾಹರ್‌ ತಲಾ ಒಂದು ವಿಕೆಟ್‌ ಪಡೆದರು. ಚೆನ್ನೈಯಲ್ಲಿ ಅಜೇಯ ಸಾಧನೆ ಮಾಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಮಹೇಂದ್ರ ಸಿಂಗ್‌ ಧೋನಿ ಅವರ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಎದುರಿಸಿತ್ತು. ಸುರೇಶ್‌ ರೈನಾ ತಂಡವನ್ನು ಮುನ್ನಡೆಸಿದ್ದರು.

Advertisement

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ವಿಜಯ್‌ ಬಿ ಸ್ಯಾಂಟರ್‌ 67
ಕ್ವಿಂಟನ್‌ ಡಿ ಕಾಕ್‌ ಸಿ ರಾಯುಡು ಬಿ ಚಹರ್‌ 15
ಇವಿನ್‌ ಲೇವಿಸ್‌ ಸಿ ಬ್ರಾವೊ ಬಿ ಸ್ಯಾಂಟ್ನರ್‌ 32
ಕೃಣಾಲ್‌ ಪಾಂಡ್ಯ ಸಿ ಸ್ಯಾಂಟ್ನರ್‌ ಬಿ ತಾಹಿರ್‌ 1
ಹಾರ್ದಿಕ್‌ ಪಾಂಡ್ಯ ಔಟಾಗದೆ 23
ಕೈರನ್‌ ಪೋರ್ಲಾಡ್‌ ಔಟಾಗದೆ 13
ಇತರ 4
ಒಟ್ಟು (4 ವಿಕೆಟಿಗೆ) 155
ವಿಕೆಟ್‌ ಪತನ- 1-24, 2-99, 3-103, 4-122
ಬೌಲಿಂಗ್‌ ದೀಪಕ್‌ ಚಹರ್‌ 4-0-46-1
ಹರ್ಭಜನ್‌ ಸಿಂಗ್‌ 4-0-23-0
ಇಮ್ರಾನ್‌ ತಾಹಿರ್‌ 4-0-37-1
ಡ್ವೆನ್‌ ಬ್ರಾವೊ 4-0-35-0
ಮಿಚೆಲ್‌ ಸ್ಯಾಂಟ್ನರ್‌ 4-0-13-2

ಚೆನ್ನೈ ಸೂಪರ್‌ ಕಿಂಗ್ಸ್‌
ಮುರಳಿ ವಿಜಯ್‌ ಸಿ ಯಾದವ್‌ ಬಿ ಬುಮ್ರಾ 38
ಶೇನ್‌ ವಾಟ್ಸನ್‌ ಸಿ ಚಹರ್‌ ಬಿ ಮಾಲಿಂಗ 8
ಸುರೇಶ್‌ ರೈನಾ ಸಿ ಯಾದವ್‌ ಬಿ ಹಾರ್ದಿಕ್‌ 2
ಅಂಬಾಟಿ ರಾಯುಡು ಕೃಣಾಲ್‌ 0
ಕೇದಾರ್‌ ಜಾಧವ್‌ ಬಿ ಕೃಣಾಲ್‌ 6
ಧ್ರುವ್‌ ಶೋರೆ ಸಿ ಚಹರ್‌ ಬಿ ರಾಯ್‌ 5
ಡ್ವೇಯ್ನ ಬ್ರಾವೊ ಬಿ ಮತ್ತು ಬಿ ಮಾಲಿಂಗ 20
ಮಿಚೆಲ್‌ ಸ್ಯಾಂಟ್ನರ್‌ ಸಿ ಪೋಲಾರ್ಡ್‌ ಬಿ ಮಾಲಿಂಗ 22
ದೀಪಕ್‌ ಚಹರ್‌ ಸಿ ಕೃಣಾಲ್‌ ಬಿ ಬುಮ್ರಾ 0
ಹರ್ಭಜನ್‌ ಸಿಂಗ್‌ ಸಿ ಹಾರ್ದಿಕ್‌ ಬಿ ಮಾಲಿಂಗ 1
ಇಮ್ರಾನ್‌ ತಾಹಿರ್‌ ಔಟಾಗದೆ 0
ಇತರ: 7
ಒಟ್ಟು (17.4 ಓವರ್‌ಗಳಲ್ಲಿ ಆಲೌಟ್‌) 109
ವಿಕೆಟ್‌ ಪತನ: 1-9, 2-22. 3-34, 4-46, 5-60, 6-66, 7-99, 8-101, 9-103
ಬೌಲಿಂಗ್‌: ಲಸಿತ ಮಾಲಿಂಗ 3.4-0-37-4
ಕೃಣಾಲ್‌ ಪಾಂಡ್ಯ 3-0-7-2
ಹಾರ್ದಿಕ್‌ ಪಾಂಡ್ಯ 2-0-22-1
ಜಸ್‌ಪ್ರೀತ್‌ ಬುಮ್ರಾ 3-0-10-2
ರಾಹುಲ್‌ ಚಹರ್‌ 4-0-21-0
ಅಂಕುಲ್‌ ರಾಯ್‌ 2-0-11-1

Advertisement

Udayavani is now on Telegram. Click here to join our channel and stay updated with the latest news.

Next