Advertisement
ಪಂದ್ಯಕ್ಕೂ ಮುನ್ನ 3ನೇ ಸ್ಥಾನದಲ್ಲಿದ್ದ ಮುಂಬೈ, ಈ ಜಯದೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆ ಇರಿಸಿತು. ಮುಂಬೈ ಸೇರಿದಂತೆ ಚೆನ್ನೈ, ಡೆಲ್ಲಿ ಕೂಡ 18 ಅಂಕ ಹೊಂದಿದ್ದವು. ಆದರೆ ರನ್‌ರೇಟ್‌ನಲ್ಲಿ ಮುಂಬೈ ಎಲ್ಲರಿಗಿಂತ ಮುಂದಿತ್ತು.
ಪ್ಲೆ ಆಫ್ ಪ್ರವೇಶಕ್ಕಾಗಿ ಕೆಕೆಆರ್‌ಗೆ ಇಲ್ಲಿ ಗೆಲುವು ಅನಿವಾರ್ಯವಾಗಿತ್ತು. ಇಲ್ಲವಾದರೆ ರನ್‌ರೇಟನ್ನಾದರೂ ಹೆಚ್ಚಿಸಿಕೊಳ್ಳಬೇಕಿತ್ತು. ಆದರೆ ಹೀನಾಯ ಸೋಲಿಗೆ ತುತ್ತಾದ ಕಾರ್ತಿಕ್ ಪಡೆ ಯಾವುದರಲ್ಲೂ ಯಶಸ್ವಿಯಾಗಲಿಲ್ಲ. ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟಿಗೆ ಕೇವಲ 133 ರನ್ ಮಾಡಿದರೆ, ಮುಂಬೈ 16.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 134 ರನ್ ಬಾರಿಸಿತು. ಕೆಕೆಆರ್‌ನ ಹೀನಾಯ ಪ್ರದರ್ಶನದಿಂದ ಲಾಭವಾದದ್ದು ಹೈದರಾಬಾದ್‌ಗೆ. 4ನೇ ಸ್ಥಾನಕ್ಕಾಗಿ ತಲಾ 12 ಅಂಕ ಹೊಂದಿರುವ 3 ತಂಡಗಳು ಸ್ಪರ್ಧೆಯಲ್ಲಿದ್ದವು (ಹೈದರಾಬಾದ್, ಕೆಕೆಆರ್, ಪಂಜಾಬ್). ಇವುಗಳಲ್ಲಿ ಸನ್‌ರೈಸರ್ ಹೈದರಾಬಾದ್‌ನ ರನ್‌ರೇಟ್ ಮೇಲ್ಮಟ್ಟದಲ್ಲಿತ್ತು.