Advertisement

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

11:36 PM Apr 17, 2021 | Team Udayavani |

ಚೆನ್ನೈ : ಮುಂಬೈ ಇಂಡಿಯನ್ಸ್‌ ನಿಗದಿಪಡಿಸಿದ 151 ರನ್ನುಗಳ ಸಾಮಾನ್ಯ ಗುರಿಯನ್ನು ತಲಪುವಲ್ಲಿ ವಿಫಲವಾದ ಸನ್‌ರೈಸರ್ ಹೈದರಾಬಾದ್‌ ಹ್ಯಾಟ್ರಿಕ್‌ ಸೋಲಿಗೆ ತುತ್ತಾಗಿದೆ. ಶನಿವಾರ ರಾತ್ರಿಯ ಪಂದ್ಯವನ್ನು ವಾರ್ನರ್‌ ಪಡೆ 13 ರನ್ನುಗಳಿಂದ ಕಳೆದುಕೊಂಡಿತು. ಮುಂಬೈ ಸತತ ಎರಡನೇ ಗೆಲುವು ಸಾಧಿಸಿತು.

Advertisement

ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಗಳಿಸಿದ್ದು 5 ವಿಕೆಟಿಗೆ 150 ರನ್‌ ಮಾತ್ರ. ಆದರೆ ವಾರ್ನರ್‌-ಬೇರ್‌ಸ್ಟೊ ಜೋಡಿಯ ಉತ್ತಮ ಆರಂಭದ ಹೊರತಾಗಿಯೂ ಹೈದರಾಬಾದ್‌ 19.4 ಓವರ್‌ಗಳಲ್ಲಿ 137ಕ್ಕೆ ಆಲೌಟ್‌ ಆಯಿತು. ಮೊದಲ ವಿಕೆಟಿಗೆ 7.2 ಓವರ್‌ಗಳಿಂದ 67 ರನ್‌ ಒಟ್ಟುಗೂಡಿತ್ತು. ಬಳಿಕ ರಾಹುಲ್‌ ಚಹರ್‌, ಬೌಲ್ಟ್, ಬುಮ್ರಾ ಬಿಗಿಯಾದ ಬೌಲಿಂಗ್‌ ದಾಳಿ ಸಂಘಟಿಸಿ ಮುಂಬೈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೈದರಾಬಾದ್‌ ಬೌಲಿಂಗ್‌ ಕೂಡ ಅತ್ಯಂತ ಘಾತಕವಾಗಿಯೇ ಇತ್ತು. ಮುಂಬೈ ಬ್ಯಾಟಿಂಗ್‌ ಮಿಂಚಿದ್ದು ಪವರ್‌ ಪ್ಲೇ ಅವಧಿಯಲ್ಲಿ ಮಾತ್ರ. ಆಗ ವಿಕೆಟ್‌ ನಷ್ಟವಿಲ್ಲದೆ 53 ರನ್‌ ಆಗಿತ್ತು.

ಪವರ್‌ ಪ್ಲೇ ಮುಗಿದ ಕೂಡಲೇ ವಿಜಯ್‌ ಶಂಕರ್‌ ಮುಂಬೈಗೆ ಅವಳಿ ಆಘಾತವಿಕ್ಕಿದರು. ಮೊದಲು ರೋಹಿತ್‌ ಶರ್ಮ ಅವರಿಗೆ ಪೆವಿಲಿಯನ್‌ ಹಾದಿ ತೋರಿದರು. ಮುಂಬೈ ಕಪ್ತಾನನ ಗಳಿಕೆ 25 ಎಸೆತಗಳಿಂದ 32 ರನ್‌ (2 ಫೋರ್‌, 2 ಸಿಕ್ಸರ್‌). ತಮ್ಮ ಮುಂದಿನ ಓವರಿನಲ್ಲಿ ಅಪಾಯಕಾರಿ ಸೂರ್ಯಕುಮಾರ್‌ ಯಾದವ್‌ ವಿಕೆಟ್‌ ಹಾರಿಸಿದರು. ಸೂರ್ಯಕುಮಾರ್‌ ಗಳಿಕೆ ಕೇವಲ 10 ರನ್‌.

ಈ ನಡುವೆ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದ ಕ್ವಿಂಟನ್‌ ಡಿ ಕಾಕ್‌ 14ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದರು. ಆದರೆ ಇವರ ಆಟದಲ್ಲಿ ಯಾವುದೇ ಬಿರುಸು ಇರಲಿಲ್ಲ. 40 ರನ್ನಿಗೆ 39 ಎಸೆತ ತೆಗೆದುಕೊಂಡರು. ಹೊಡೆದದ್ದು 5 ಫೋರ್‌. ಈ ವಿಕೆಟ್‌ ಮುಜೀಬ್‌ ಪಾಲಾಯಿತು. 15 ಓವರ್‌ ಅಂತ್ಯಕ್ಕೆ ಮುಂಬೈ 3 ವಿಕೆಟಿಗೆ ಕೇವಲ 103 ರನ್‌ ಮಾಡಿತ್ತು.

Advertisement

ಡೆತ್‌ ಓವರ್‌ಗಳಲ್ಲಿ ಪೊಲಾರ್ಡ್‌-ಇಶಾನ್‌ ಒಟ್ಟು ಗೂಡಿದ ಬಳಿಕ ಮುಂಬೈ ರನ್‌ ಮಳೆ ಹರಿಸೀತು ಎಂಬ ನಿರೀಕ್ಷೆ ಇತ್ತು. ಆದರೆ ಇದು ಹುಸಿಯಾಯಿತು. 16ನೇ ಓವರ್‌ನಲ್ಲಿ ರಶೀದ್‌ ಕೇವಲ 6 ರನ್‌ ಬಿಟ್ಟುಕ್ಟೊರು. ಬಳಿಕ ಮುಜೀಬ್‌ ಹೈದರಾಬಾದ್‌ಗೆ ಮತ್ತೂಂದು ಯಶಸ್ಸು ತಂದಿತ್ತರು. ಇಶಾನ್‌ ಕಿಶನ್‌ ಅವರನ್ನು ಕೀಪರ್‌ ಬೇರ್‌ಸ್ಟೊ ಕೈಗೆ ಕ್ಯಾಚ್‌ ಕೊಡಿಸಿದರು. 21 ಎಸೆತ ಎದುರಿಸಿದ ಇಶಾನ್‌ ಕೇವಲ 12 ರನ್‌ ಮಾಡಿದ್ದು ಅಚ್ಚರಿ ಮೂಡಿಸಿತು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ಸುಚಿತ್‌ ಬಿ ಮುಜೀಬ್‌ 40
ರೋಹಿತ್‌ ಶರ್ಮ ಸಿ ವಿರಾಟ್‌ ಬಿ ಶಂಕರ್‌ 32
ಸೂರ್ಯಕುಮಾರ್‌ ಸಿ ಮತ್ತು ಬಿ ಶಂಕರ್‌ 10
ಇಶಾನ್‌ ಕಿಶನ್‌ ಸಿ ಬೇರ್‌ಸ್ಟೊ ಬಿ ಮುಜೀಬ್‌ 12
ಕೈರನ್‌ ಪೊಲಾರ್ಡ್‌ ಔಟಾಗದೆ 35
ಹಾರ್ದಿಕ್‌ ಪಾಂಡ್ಯ ಸಿ ವಿರಾಟ್‌ ಬಿ ಖಲೀಲ್‌ 7
ಕೃಣಾಲ್‌ ಪಾಂಡ್ಯ ಔಟಾಗದೆ 3
ಇತರ 11
ಒಟ್ಟು(5 ವಿಕೆಟಿಗೆ) 150
ವಿಕೆಟ್‌ ಪತನ: 1-55, 2-71, 3-98, 4-114, 5-131.
ಬೌಲಿಂಗ್‌; ಭುನೇಶ್ವರ್‌ ಕುಮಾರ್‌ 4-0-45-0
ಖಲೀಲ್‌ ಅಹ್ಮದ್‌ 4-0-24-1
ಮುಜೀಬ್‌ ಉರ್‌ ರೆಹಮಾನ್‌ 4-0-29-2
ಅಭಿಷೇಕ್‌ ಶರ್ಮ 1-0-5-0
ವಿಜಯ್‌ ಶಂಕರ್‌ 3-0-19-2
ರಶೀದ್‌ ಖಾನ್‌ 4-0-22-0

ಹೈದರಾಬಾದ್‌
ಡೇವಿಡ್‌ ವಾರ್ನರ್‌ ರನೌಟ್‌ 36
ಜಾನಿ ಬೇರ್‌ಸ್ಟೊ ಹಿಟ್‌ವಿಕೆಟ್‌ ಬಿ ಕೃಣಾಲ್‌ 43
ಮನೀಷ್‌ ಪಾಂಡೆ ಸಿ ಪೊಲಾರ್ಡ್‌ ಬಿ ಚಹರ್‌ 2
ವಿರಾಟ್‌ ಸಿಂಗ್‌ ಸಿ ಸೂರ್ಯಕುಮಾರ್‌ ಬಿ ಚಹರ್‌ 11
ಶಂಕರ್‌ ಸಿ ಸೂರ್ಯಕುಮಾರ್‌ ಬಿ ಬುಮ್ರಾ 28
ಅಭಿಷೇಕ್‌ ಶರ್ಮ ಸಿ ಮಿಲೆ° ಬಿ ಚಹರ್‌ 2
ಅಬ್ದುಲ್‌ ಸಮದ್‌ ರನೌಟ್‌ 7
ರಶೀದ್‌ ಖಾನ್‌ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 0
ಭುವನೇಶ್ವರ್‌ ಬಿ ಬೌಲ್ಟ್ 1
ಮುಜೀಬ್‌ ಉರ್‌ ರೆಹಮಾನ್‌ ಔಟಾಗದೆ 1
ಖಲೀಲ್‌ ಅಹ್ಮದ್‌ ಬಿ ಬೌಲ್ಟ್ 1
ಇತರ 5
ಒಟ್ಟು (ಆಲೌಟ್‌) 137
ವಿಕೆಟ್‌ ಪತನ: 1-67, 2-71, 3-90, 4-102, 5-104, 6-129, 7-130, 8-134, 9-135.
ಬೌಲಿಂಗ್‌; ಟ್ರೆಂಟ್‌ ಬೌಲ್ಟ್ 3.4-0-28-3
ಜಸ್‌ಪ್ರೀತ್‌ ಬುಮ್ರಾ 4-0-14-1
ಆ್ಯಡಂ ಮಿಲೆ° 3-0-33-0
ಕೃಣಾಲ್‌ ಪಾಂಡ್ಯ 3-0-30-1
ರಾಹುಲ್‌ ಚಹರ್‌ 4-0-19-3
ಕೈರನ್‌ ಪೊಲಾರ್ಡ್‌ 2-0-10-0

Advertisement

Udayavani is now on Telegram. Click here to join our channel and stay updated with the latest news.

Next