Advertisement
ನಿಕೋಲಸ್ ಪೂರಣ್ ಅವರ ಬ್ಯಾಟಿಂಗ್ ಅಬ್ಬರ ಹಾಗೂ ನಾಯಕ ಕೆ.ಎಲ್. ರಾಹುಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಮುಂಬೈ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಲಕ್ನೋ 6 ವಿಕೆಟಿಗೆ 214 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಮುಂಬೈ ರೋಹಿತ್ ಶರ್ಮ ಮತ್ತು ನಮನ್ ಧೀರ್ ಹೋರಾಡಿದರೂ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ 18 ರನ್ ಗಳ ಸೋಲು ಅನುಭವಿಸಿತು.
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮ38 ಎಸೆತಗಳಲ್ಲಿ 68 ರನ್ ಗಳಿಸಿ ಜವಾಬ್ದಾರಿಯುತ ಆಟವಾಡಿ ಔಟಾದರು. ರವಿ ಬಿಷ್ಣೋಯ್ ಎಸೆದ ಚೆಂಡನ್ನು ಮೊಹ್ಸಿನ್ ಖಾನ್ ಕೈಗೆ ನೀಡಿ ರೋಹಿತ್ ಗೆ ನಿರ್ಗಮಿಸಿದರು. ಇದು ಮುಂಬೈ ಇಂಡಿಯನ್ಸ್ ಪರ ರೋಹಿತ್ ಆಡಿರುವ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ. ರೋಹಿತ್ ಔಟಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ತೋರಿದರು.ವಾಂಖೆಡೆಯಲ್ಲಿ ಮುಂಬೈ ತಂಡದ ಅಭಿಮಾನಿಗಳು ಪುಳಕಿತರಾದರು. ನಮನ್ ಧೀರ್ ಕೊನೆಯಲ್ಲಿ ಹೋರಾಡಿದರು.28 ಎಸೆತಗಳಲ್ಲಿ 62 ರನ್ ಗಳಿಸಿದರು. ಬ್ರೆವಿಸ್ 23 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಗಟ್ಟಿ ಆಟವಾಡಲು ವಿಫಲರಾದರು.
Related Articles
Advertisement
ಪೂರಣ್, ರಾಹುಲ್ ಇಬ್ಬರೂ ಅರ್ಧ ಶತಕ ಬಾರಿಸುವ ಜತೆಗೆ 4ನೇ ವಿಕೆಟಿಗೆ 44 ಎಸೆತಗಳಿಂದ 109 ರನ್ ರಾಶಿ ಹಾಕಿದರು. ಇದರಲ್ಲಿ ಪೂರಣ್ ಗಳಿಕೆ 29 ಎಸೆತಗಳಿಂದ 75 ರನ್. ಸಿಡಿಸಿದ್ದು 8 ಸಿಕ್ಸರ್, 5 ಬೌಂಡರಿ. ರಾಹುಲ್ 41 ಎಸೆತಗಳಿಂದ 55 ರನ್ ಹೊಡೆದರು (3 ಬೌಂಡರಿ, 3 ಸಿಕ್ಸರ್).ಡಿ ಕಾಕ್ ಬದಲು ಆರಂಭಿಕನಾಗಿ ಇಳಿದ ದೇವದತ್ತ ಪಡಿಕ್ಕಲ್ ಅವರನ್ನು 3ನೇ ಎಸೆತದಲ್ಲೇ ಲೆಗ್ ಬಿಫೋರ್ ಮೂಲಕ ಔಟ್ ಮಾಡಿದ ನುವಾನ್ ತುಷಾರ ಲಕ್ನೋ ಮೇಲೆ ಒತ್ತಡ ಹೇರಿದರು. ಪಡಿಕ್ಕಲ್ ಅವರದು ಗೋಲ್ಡನ್ ಡಕ್ ಸಂಕಟವಾಗಿತ್ತು. ಇದರೊಂದಿಗೆ 2024ರ 7 ಪಂದ್ಯಗಳಲ್ಲಿ ಪಡಿಕ್ಕಲ್ ಗಳಿಕೆ 35 ರನ್ನಿಗೆ ನಿಂತಿತು. ವನ್‌ಡೌನ್‌ನಲ್ಲಿ ಬಂದ ಸ್ಟೋಯಿನಿಸ್ ಮುನ್ನುಗ್ಗಿ ಬೀಸತೊಡಗಿದರೂ ಪವರ್ ಪ್ಲೇ ಮುಗಿಯಿತು ಎನ್ನುವಾಗ ಚಾವ್ಲಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಸಂಕಟಕ್ಕೆ ಸಿಲುಕಿದರು. ಸ್ಟೋಯಿನಿಸ್ ಗಳಿಕೆ 22 ಎಸೆತಗಳಿಂದ 28 ರನ್ (5 ಬೌಂಡರಿ). 6 ಓವರ್ ಅಂತ್ಯಕ್ಕೆ ಲಕ್ನೋ 2 ವಿಕೆಟಿಗೆ 49 ರನ್ ಗಳಿಸಿತ್ತು. ದೀಪಕ್ ಹೂಡಾ (11) ಹೆಚ್ಚು ನಿಲ್ಲಲಿಲ್ಲ. ಅರ್ಧ ಹಾದಿ ಪೂರ್ತಿಗೊಳಿಸುವ ಹೊತ್ತಿಗೆ ಸರಿಯಾಗಿ ಪೆವಿಲಿಯನ್ ಸೇರಿಕೊಂಡರು. 10 ಓವರ್ ಅಂತ್ಯಕ್ಕೆ ಲಕ್ನೋ ಸ್ಕೋರ್ 3 ವಿಕೆಟಿಗೆ ಬರೀ 69 ರನ್. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ನಾಯಕ ಕೆ.ಎಲ್. ರಾಹುಲ್ ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಬೆಳೆಸತೊಡಗಿದರು. 4ನೇ ವಿಕೆಟಿಗೆ ಪೂರಣ್ ಜತೆಯಾದರು. ರನ್‌ಗತಿಯಲ್ಲಿ ಏರಿಕೆ ಕಂಡುಬಂತು. ಬುಮ್ರಾ ಬದಲು ತೆಂಡುಲ್ಕರ್
ಈ ಪಂದ್ಯಕ್ಕಾಗಿ ಮುಂಬೈ ಮಹತ್ತರ ಬದಲಾವಣೆಯೊಂದನ್ನು ಮಾಡಿಕೊಂಡಿತು. ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿ ಅರ್ಜುನ್ ತೆಂಡುಲ್ಕರ್ ಅವರನ್ನು ಆಡಿಸಿತು. ಗಾಯಾಳು ತಿಲಕ್ ವರ್ಮ ಬದಲು ಡಿವಾಲ್ಡ್ ಬ್ರೇವಿಸ್ ಅವಕಾಶ ಪಡೆದರು. ಲಕ್ನೋ ತಂಡದಲ್ಲಿ ಕ್ವಿಂಟನ್ ಡಿ ಕಾಕ್ ಬದಲು ದೇವದತ್ತ ಪಡಿಕ್ಕಲ್ ಆಡಲಿಳಿದರು.