ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ಬಹುತೇಕ ವಿದೇಶಿ ಆಟಗಾರರು ಹಾಗೂ ಸಹಾಯಕ ಸಿಬಂದಿ ರವಿವಾರ ಸುರಕ್ಷಿತವಾಗಿ ತಾಯ್ನಾಡು ಸೇರಿಕೊಂಡರು ಎಂಬುದಾಗಿ ಫ್ರಾಂಚೈಸಿ ತಿಳಿಸಿದೆ.
ಮುಂಬೈ ತಂಡದಲ್ಲಿ ಒಟ್ಟು 14 ಮಂದಿ ವಿದೇಶಿ ಆಟಗಾರರು ಹಾಗೂ ಸಹಾಯಕ ಸಿಬಂದಿ ಇದ್ದರು.
ಇವರಲ್ಲಿ ಕೈರನ್ ಪೊಲಾರ್ಡ್ ಯಾವುದೇ ತೊಂದರೆ ಇಲ್ಲದೆ ಟ್ರಿನಿಡಾಡ್ ತಲುಪಿದರು. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮತ್ತು ಮಾರ್ಕೊ ಜೆನ್ಸೆನ್ ಜೊಹಾನ್ಸ್‌ಬರ್ಗ್ ಮುಟ್ಟಿದರು.
ನ್ಯೂಜಿಲ್ಯಾಂಡಿನ ಆ್ಯಡಂ ಮಿಲ್ನೆ, ಜಿಮ್ಮಿ ನೀಶಮ್, ಟ್ರೆಂಟ್ ಬೌಲ್ಟ್ ಮೊದಲಾದವರು ಚಾರ್ಟರ್ ಫ್ಲೈಟ್ ಮೂಲಕ ಆಕ್ಲೆಂಡ್‌ಗೆ ಬಂದಿಳಿದಿದ್ದಾರೆ.
ಆಸ್ಟ್ರೇಲಿಯನ್ ಕ್ರಿಕೆಟಿಗರಾದ ಕ್ರಿಸ್ ಲಿನ್, ನಥನ್ ಕೋಲ್ಟರ್ ನೈಲ್; ಕೋಚ್ ಮಾಹೇಲ ಜಯವರ್ಧನೆ ಮಾತ್ರ ವಿಶೇಷ ವಿಮಾನದ ಮೂಲಕ ಮಾಲ್ಡೀವ್ಸ್ ತಲುಪಿದ್ದು, ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ತವರಿಗೆ ಪ್ರಯಾಣಿಸಲಿದ್ದಾರೆ.