ಮುಂಬೈ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿ ಐಪಿಎಲ್ ನಲ್ಲಿ ಮುನ್ನಡೆಸಲು ಹಾರ್ದಿಕ್ ಪಾಂಡ್ಯ ಸಿದ್ದರಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಬದಲು ಹಾರ್ದಿಕ್ ಗೆ ಜವಾಬ್ದಾರಿ ನೀಡಲಾಗಿದೆ. ರೋಹಿತ್ ನೇತೃತ್ವದ ಮುಂಬೈ ಈ ಹಿಂದೆ ಐದು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ, ಐಪಿಎಲ್ 2024 ರಲ್ಲಿ ಅವರು ಹಾರ್ದಿಕ್ ನಾಯಕತ್ವದಲ್ಲಿ ಆಡಬೇಕಿದೆ ಎಂಬುದು ಗಮನಿಸಬೇಕಾದ ಸಂಗತಿ. ಇಬ್ಬರು ಆಟಗಾರರ ನಡುವಿನ ಯಾವುದೇ ಅಹಂ ಘರ್ಷಣೆಯ (Ego clash) ನಡೆಯಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಮಾತನಾಡಿದ್ದು, “ಆಟಗಾರರು ಒಟ್ಟಿಗೆ ಆಡಿದಾಗ ಈ ವಿಷಯಗಳು ಸಂಭವಿಸುತ್ತವೆ. ಅವರಿಗೆ ಸಮಸ್ಯೆಯಿದ್ದರೆ ಅವರು ಖಂಡಿತವಾಗಿಯೂ ಕುಳಿತು ಅದರ ಬಗ್ಗೆ ಮಾತನಾಡಬೇಕು.” ಎಂದಿದ್ದಾರೆ.
“ಹಾರ್ದಿಕ್ ಪಾಂಡ್ಯ ಮುಂಬೈ ಪರವಾಗಿ ಆಡುತ್ತಿದ್ದಾಗ ಅವರಿಂದ ಉತ್ತಮ ಆಟ ತೆಗೆಯುವ ಬಗ್ಗೆ ರೋಹಿತ್ ತಿಳಿದಿದ್ದರು. ಅದರಲ್ಲಿಯೂ ಬೌಲಿಂಗ್ ವರ್ಕ್ ಲೋಡ್ ಮ್ಯಾನೇಜ್ ಮಾಡಲು ತಿಳಿದಿತ್ತು” ಎಂದಿದ್ದಾರೆ.
ಇದನ್ನೂ ಓದಿ:Bharat Jodo Nyay Yatra; ಇಂಫಾಲ್ ಗೆ ತೆರಳಬೇಕಿದ್ದ ರಾಹುಲ್ ಗಾಂಧಿ ವಿಮಾನ ವಿಳಂಬ
ಮುಂಬೈನಲ್ಲಿ ಹಾರ್ದಿಕ್ ಅಂತಿಮ ಓವರ್ ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ. ಆದರೆ ಗುಜರಾತ್ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಪರಿಪೂರ್ಣ ಬ್ಯಾಟರ್ ನಂತೆ ಬ್ಯಾಟಿಂಗ್ ಮಾಡಿದ್ದಾನೆ” ಎಂದರು.
ಎರಡು ಸೀಸನ್ ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಅಚ್ಚರಿಯ ರೀತಿಯಲ್ಲಿ ಮುಂಬೈಗೆ ವಾಪಾಸಾಗಿದ್ದರು. ಅಲ್ಲದೆ ಮುಂಬೈ ಫ್ರಾಂಚೈಸಯು ಅವರಿಗೆ ನಾಯಕತ್ವ ನೀಡಿ ಮತ್ತಷ್ಟು ಅಚ್ಚರಿಗೆ ಕಾರಣವಾಗಿತ್ತು.