Advertisement
ಮುಂಬಯಿನ ವಡಾಲಾದಲ್ಲಿರುವ ಆ್ಯಂಟುಪ್ ಹಿಲ್ ಪ್ರದೇಶದಲ್ಲಿ ಗಗನ ಚುಂಬಿ ಅಪಾರ್ಟ್‌ಮೆಂಟ್ ಸನಿಹದಲ್ಲಿ ಭೂಕುಸಿತ ಉಂಟಾಗಿ 15 ಕಾರುಗಳು ಮಣ್ಣಿನಲ್ಲಿ ಹೂತು ಹೋಗಿವೆ. ಅಲ್ಲಿರುವ 260ಕ್ಕೂ ಹೆಚ್ಚು ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಪಾರ್ಟ್‌ಮೆಂಟ್ ಬಿಲ್ಡರ್ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಭಾರೀ ಮಳೆಯಿಂದಾಗಿ ಪಶ್ಚಿಮ ರೈಲ್ವೇ ವಿಭಾಗದಿಂದ ಹೊರಡುವ ಎಲ್ಲ ರೈಲುಗಳು ವಿಳಂಬವಾಗಿವೆ. ಸ್ಥಳೀಯ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಪೊವೈ ಕೆರೆ ತುಂಬಿ ಹೋಗಿದೆ.
ಮುಂಬಯಿನ ಗೋಲ್ ಮಸ್ಜಿದ್ ಪರಿಸರದಲ್ಲಿ ಮಳೆ, ಪ್ರವಾಹದ ರಭಸಕ್ಕೆ ರಸ್ತೆಯ ನಡುಭಾಗವೇ ಕುಸಿದು ಹೋಗಿದೆ. ಇದರ ಜತೆಗೆ ಮರೀನ್ ಲೈನ್ಸ್ ನಲ್ಲಿಯೂ ಮಳೆಯಬ್ಬರಕ್ಕೆ ರಸ್ತೆ ಕುಸಿದು ಹೋಗಿದೆ. ಬೃಹನ್ಮುಂಬಯಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಬೆಸ್ಟ್ ಬಸ್‌ಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ರವಿವಾರ ಸಂಜೆ ದಕ್ಷಿಣ ಮುಂಬಯಿನ ಮೆಟ್ರೋ ಸಿನೆಮಾ ಪಕ್ಕದಲ್ಲಿ ಮರ ಬಿದ್ದ ಕಾರಣ ಇಬ್ಬರು ಅಸುನೀಗಿದ್ದಾರೆ. ಪ. ಬಂಗಾಲ
ಪಶ್ಚಿಮ ಬಂಗಾಲದಲ್ಲೂ ಧಾರಾಕಾರ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಮಳೆ ಪ್ರಕೋಪಕ್ಕೆ ಒಟ್ಟು ಐವರು ಅಸು ನೀಗಿದ್ದಾರೆ.
Related Articles
ಗುಜರಾತ್‌ನಲ್ಲಿ ಧಾರಾಕಾರ ಮಳೆಯಾಗಿದೆ. ವಲ್ಸಾಡ್, ಸೂರತ್ ಮತ್ತು ನವ್‌ಸಾರಿ ಜಿಲ್ಲೆಗಳಲ್ಲಿ 2 ದಿನಗಳಿಂದ ಮಳೆಯಾಗುತ್ತಿದೆ.
Advertisement
ಇನ್ನೂ 3 ದಿನ ಭಾರೀ ಮಳೆಯ ಎಚ್ಚರಿಕೆಅತ್ಯಂತ ಹೆಚ್ಚಿನ ಮಳೆ
24 ಗಂಟೆಗಳಲ್ಲಿ ಮುಂಬಯಿನಲ್ಲಿ 231.4 ಮಿ.ಮೀ. ಮಳೆ ದಾಖಲಾಗಿದೆ. ಇದು ಪ್ರಸಕ್ತ ಋತುವಿನಲ್ಲಿ ದೇಶದ ವಾಣಿಜ್ಯ ನಗರಿಯಲ್ಲಿ ದಾಖಲಾಗಿರುವ ಮೊದಲ ಅತ್ಯಧಿಕ ಮಳೆ ಆಗಿದೆ.