ಮುಂಬಯಿ/ಇಡುಕ್ಕಿ: ಕಳೆದೊಂದು ವಾರದಿಂದ ವರುಣನ ಅಬ್ಬರಕ್ಕೆ ನಲುಗಿ ಹೋಗಿ, ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ವಾಣಿಜ್ಯ ನಗರಿಗೆ ಮತ್ತೆ ಆಘಾತ ಕಾದಿದೆ. ಇನ್ನೇನು ಮಳೆಯ ತೀವ್ರತೆ ಕಡಿಮೆಯಾಯಿತು ಎಂದುಕೊಳ್ಳುವಷ್ಟರಲ್ಲಿ ಮುಂದಿನ ವಾರವೂ ವರುಣ ಅಬ್ಬರಿಸಲಿದ್ದಾನೆ ಎಂಬ ಸುದ್ದಿ ಮುಂಬಯಿಗರನ್ನು ಚಿಂತೆಗೀಡು ಮಾಡಿದೆ.
ಆ.10ರಂದು ಮಹಾರಾಷ್ಟ್ರ ಕರಾವಳಿಯಲ್ಲಿ ನೈಋತ್ಯ ಮುಂಗಾರು ಮತ್ತೂಮ್ಮೆ ಚುರುಕಾಗಲಿದ್ದು, ಮುಂದಿನ 7 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇದೇ ವೇಳೆ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಢ, ದಿಲ್ಲಿ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲೂ ರವಿವಾರ ಮತ್ತು ಸೋಮವಾರ ಮಳೆಯ ತೀವ್ರತೆ ಅಧಿಕವಾಗಿರಲಿದೆ ಎಂದೂ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ವಾಯುಭಾರ ಕುಸಿತ:
ರವಿವಾರದ ವೇಳೆಗೆ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಇದರ ಪರಿಣಾಮವಾಗಿ ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.