Advertisement

Mumbai: ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಗೋಕುಲ: ಶ್ರೀ ಗಣೇಶ ಚತುರ್ಥಿ ಆಚರಣೆ

06:39 PM Sep 27, 2023 | Team Udayavani |

ಮುಂಬಯಿ: ಗೋಪಾಲ ಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಗೋಕುಲ ಮತ್ತು ಬಿ.ಎಸ್‌.ಕೆ.ಬಿ. ಅಸೋಸಿಯೇಶನ್‌ ಸಹಯೋಗದೊಂದಿಗೆ ಮೂರು ದಿನಗಳ ಶ್ರೀ ಗಣೇಶೋತ್ಸವಕ್ಕೆ ಸೆ. 19ರಂದು ವಾಮನ್‌ ಹೊಳ್ಳ, ಜಯಲಕ್ಷ್ಮೀ ಹೊಳ್ಳ ದಂಪತಿಯ ಯಜಮಾನತ್ವದಲ್ಲಿ ವೇ| ಮೂ| ಗಣೇಶ್‌ ಭಟ್‌ ಅವರ ಪ್ರಧಾನ ಪೌರೋಹಿತ್ಯದಲ್ಲಿ ಗಣಪತಿ ಹೋಮ ಮೂಲಕ ಚಾಲನೆ ನೀಡಿತು.

Advertisement

ಸೆ. 18ರಂದು ವೈಭವದ ಮೆರವಣಿಗೆಯಲ್ಲಿ ಪರಿಸರ ಪ್ರೇಮಿ ಗಣೇಶ ಮೂರ್ತಿಯನ್ನು ತಂದು ಗೋ ಕುಲ ಸಭಾಗೃಹದಲ್ಲಿ ಅಲಂಕೃತ ಮಂಟ ಪದಲ್ಲಿರಿಸಿ ಸೆ. 19ರಂದು ವೇ| ಮೂ| ಗಣೇಶ್‌ ಭಟ್‌ ಅವರು ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆಗೈದು
ಮಂಗಳಾರತಿ ಬೆಳಗಿದರು. ಅನಂತರ ಅವಿನಾಶ್‌ ಶಾಸ್ತ್ರಿ, ಶ್ಯಾಮಲಾ ಶಾಸ್ತ್ರಿ ಹಾಗೂ ಲಕ್ಷ್ಮೀನಾರಾಯಣ ಶಿವತ್ತಾಯ, ನಿರ್ಮಲಾ ಶಿವತ್ತಾಯ ದಂಪತಿ ಯಜಮಾನತ್ವದಲ್ಲಿ ಗಣಪತಿ ಹೋಮ ನೆರವೇರಿತು. ಪ್ರತಿದಿನ ಶ್ರೀ ಗಣೇಶ ಮೂರ್ತಿಗೆ ಅರ್ಚಕ ವರ್ಗದವರು ಮಂಗಳಾ ರತಿ ಬೆಳಗಿದ ಬಳಿಕ ಯುವ ವಿಭಾಗದವರ ನೇತೃತ್ವದಲ್ಲಿ ಸಾರ್ವಜನಿಕ ಆರತಿ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನ ಮಂಡಳಿ, ಗೋಪಾಲಕೃಷ್ಣ ಭಜನ ಮಂಡಳಿ, ವಿಟಲ ಭಜನ ಮಂಡಳಿ, ಮದ್ವೇಷ ಭಜನ ಮಂಡಳಿ ಮತ್ತು ಹರಿಕೃಷ್ಣ ಭಜನ ಮಂಡಳಿಯವ ರಿಂದ ಭಜನೆ, ಸೂರಜ್‌ ಅವರಿಂದ ಮ್ಯಾಜಿಕ್‌ ಪ್ರದರ್ಶನ, ವಿದುಷಿ ರೇವತಿ ಶ್ರೀನಿವಾಸನ್‌ ಅವರ ಶಿಷ್ಯ ವೃಂದದವರಿಂದ ಭರತನಾಟ್ಯ, ರಂಜನ್‌ ದೇಬನಾಥ್‌ ಅವರಿಂದ ಭಕ್ತಿ ಗಾನ, ರೇಶ್ಮಾ ಶೆಟ್ಟಿಯವರಿಂದ ಭರತನಾಟ್ಯ, ವಿದ್ವಾನ್‌ ಪ್ರಾದೇಶ್‌ ಆಚಾರ್ಯ, ಹರೀಶ್‌ ಪೂಜಾರಿ, ವೆಂಕಟೇಶ್‌ ಮತ್ತು ಪದ್ಮರಾಜ್‌ ಉಪಾಧ್ಯಾಯ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಯೋಗೇಶ್‌ ಅವರಿಂದ ತೊಗಲು ಗೊಂಬೆಯಾಟ ಪ್ರದರ್ಶನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಿದವು. 6ರಿಂದ 15 ವರ್ಷದವರೆಗಿನ ಮಕ್ಕಳಿಗಾಗಿ ಯುವ ವಿಭಾಗದ
ವತಿಯಿಂದ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಸುಮಾರು 40ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿದ್ದು, ವಿಜೇತ ಮಕ್ಕಳಿಗೆ ಸಂಘದ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಬಹುಮಾನ ವಿತರಿಸಿದರು.

ಸೆ. 21ರಂದು ಸಂಜೆಯ ಆರತಿಯಾದ ಬಳಿಕ ಅತ್ಯಂತ ವೈಭವದ ಮೆರವಣಿಗೆ ಮೂಲಕ ಶ್ರೀ ಗಣೇಶ ಮೂರ್ತಿಯನ್ನು ಗೋಕುಲ ವಠಾರದಲ್ಲಿ ವಿಸರ್ಜಿಸಲಾಯಿತು. ಮೂರು ದಿನಗಳಲ್ಲಿ ದೇವರ ದರ್ಶನಕ್ಕೆ ಆಗಮಿಸಿದ ಸರ್ವ ಭಕ್ತರಿಗೆ ತೀರ್ಥ ಹಾಗೂ ಲಡ್ಡು ಪ್ರಸಾದ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next