Advertisement

ಮುಂಬೈ: ಘಾಟ್ಕೋಪರ್ ಅಗ್ನಿಅನಾಹುತ, ಮಹಿಳೆ ಸೇರಿದಂತೆ ಇಬ್ಬರು ಸಾವು, ಓರ್ವ ನಾಪತ್ತೆ

09:51 AM Dec 29, 2019 | Team Udayavani |

ಮುಂಬೈ: ಘಾಟ್ಕೋಪರ್ ಪ್ರದೇಶದ ಕಾರ್ಖಾನೆಯಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಮುಂಬೈ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಘಾಟ್ಕೋಪರ್ ಪ್ರದೇಶದಲ್ಲಿದ್ದ ಕಾರ್ಖಾನೆಯ 4ನೇ ಹಂತದ ಕಟ್ಟಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ 15 ಅಗ್ನಿಶಾಮಕವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಅದಾಗ್ಯೂ ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಮೃತಪಟ್ಟಿದ್ದು , ಒಬ್ಬರು ನಾಪತ್ತೆ ಯಾಗಿದ್ದಾರೆ ಎಂದು ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ವಿಜಯಕುಮಾರ್ ಪಾನಿಗ್ರಾಹಿ ಹೇಳಿದ್ದಾರೆ.

ಬೆಂಕಿ ತಗುಲಿದ ಕಾರಣವನ್ನು ಇನ್ನೂ  ಪತ್ತೆಹಚ್ಚಬೇಕಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಅವರು ಇದೆ ವೇಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next