ಗುಜರಾತ್: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತವಾಗಿರುವ ಕಳ್ಳನ ಹಿನ್ನೆಲೆಯನ್ನು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಗುಜರಾತ್ ಪೊಲೀಸರು ಇತ್ತೀಚೆಗೆ ವಾಪಿಯಲ್ಲಿ ನಡೆದ 1 ಲಕ್ಷ ರೂಪಾಯಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರೋಹಿತ್ ಕನುಭಾಯಿ ಸೋಲಂಕಿ ಎಂಬ ಕಳ್ಳನನ್ನು ಬಂಧಿಸಿದ್ದರು. ಕಳ್ಳತನ ವಿಚಾರದ ಬಗ್ಗೆ ತನಿಖೆ ನಡೆಸಿದಾಗ ಬೆಳಕಿಗೆ ಬಂದ ಮಾಹಿತಿಯನ್ನು ಕೇಳಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಅಂತಿಂಥ ಕಳ್ಳ ಇವನಲ್ಲ..: ಪೊಲೀಸರು ರೋಹಿತ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಈತನ ಬಗ್ಗೆ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. ರೋಹಿತ್ ಇದುವರೆಗೆ 19 ದರೋಡೆಗಳನ್ನು ಮಾಡಿದ್ದಾನೆ. ಐಷಾರಾಮಿ ಜೀವನಶೈಲಿಯನ್ನು ಹೊಂದಿದ್ದಾನೆ. ಇದಲ್ಲದೆ ಈತ ಮುಂಬೈನ ಮುಂಬ್ರಾ ಪ್ರದೇಶದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅದ್ದೂರಿ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ. ಈತ ದುಬಾರಿ ಆಡಿ ಕಾರನ್ನು ಓಡಿಸುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
19 ದರೋಡೆ ಪ್ರಕರಣದಲ್ಲಿ ವಲ್ಸಾದ್‌ನಲ್ಲಿ ಮೂರು, ಸೂರತ್‌ನಲ್ಲಿ ಒಂದು, ಪೋರಬಂದರ್‌ನಲ್ಲಿ ಒಂದು, ಸೆಲ್ವಾಲ್‌ನಲ್ಲಿ ಒಂದು, ತೆಲಂಗಾಣದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಒಂದು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಲಂಚದ ಮೂಲಕ ಇನ್ನೂ ಆರು ಕಳ್ಳತನ ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮುಸ್ಲಿಂ ಯುವತಿಯನ್ನು ಮದುವೆಯಾಗಲು ಈತ ತನ್ನ ಹೆಸರನ್ನು ಹೆಸರನ್ನು ಅರ್ಹಾನ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕಳ್ಳತನ ಮಾಡಲು ಸೋಲಂಕಿ ಅವರು ಕಳ್ಳತನ ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಿದ್ದ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಹಗಲಿನಲ್ಲಿ ಹೋಟೆಲ್ ಕ್ಯಾಬ್‌ಗಳನ್ನು ಬುಕ್ ಮಾಡುತ್ತಿದ್ದ. ಕಳ್ಳತನವನ್ನು ಯೋಜಿಸಲು ಹಗಲಿನಲ್ಲಿ ತಿರುಗಾಡಿ ಸ್ಥಳವನ್ನು ಗುರುತು ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮುಂಬೈನ ಡ್ಯಾನ್ಸ್ ಬಾರ್ ಮತ್ತು ನೈಟ್‌ಕ್ಲಬ್‌ಗಳಲ್ಲಿ ಪಾರ್ಟಿ ಮಾಡುತ್ತಿದ್ದ. ಈತ ಮಾದಕ ವ್ಯಸನಿಯೂ ಆಗಿದ್ದು, ಅದಕ್ಕಾಗಿ ತಿಂಗಳಿಗೆ 1.50 ಲಕ್ಷ ರೂ. ವ್ಯಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.