Advertisement

ಪಬ್‌ನಲ್ಲಿ ಅಗ್ನಿ ಜ್ವಾಲೆ 

06:00 AM Dec 30, 2017 | |

ಮುಂಬೈ: ಮುಂಬೈನ ಕಮಲಾ ಮಿಲ್ಸ್‌ ಕಟ್ಟಡದಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದ ಅಗ್ನಿ ದುರಂತದಿಂದ 14 ಜನರು ಸಾವಿಗೀಡಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಬ್‌ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ಯುವತಿ ಹಾಗೂ ಆಕೆಯ ಹಲವು ಸ್ನೇಹಿತೆಯರೂ ದುರ್ಘ‌ಟನೆಯಲ್ಲಿ ಮೃತಪಟ್ಟಿದ್ದಾರೆ.

Advertisement

ಮಧ್ಯರಾತ್ರಿ 12.30 ರ ಸುಮಾರಿಗೆ ಕಮಲಾ ಮಿಲ್ಸ್‌ ಕಟ್ಟಡದ ಕೊನೆಯ ಅಂತಸ್ತಿನಲ್ಲಿರುವ “1 ಅಬೋವ್‌’ ಹೆಸರಿನ ಪಬ್‌ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಕೆಳ ಮಹಡಿಯಲ್ಲಿರುವ ಮೋಜೋ ಪಬ್‌ಗ ವ್ಯಾಪಿಸಿ, ನಂತರ ಇಡೀ ಕಟ್ಟಡಕ್ಕೂ ಆವರಿಸಿಕೊಂಡಿದೆ. ಈ ಕಟ್ಟಡದಲ್ಲಿ ಹೋಟೆಲ್‌ಗ‌ಳು, ಮಾಧ್ಯಮ ಕಚೇರಿಗಳೂ ಇದ್ದವು. ಘಟನೆ ಬಗ್ಗೆ ಪ್ರಧಾನಿ ಮೋದಿ, ಸಿಎಂ ದೇವೇಂದ್ರ ಫ‌ಡ್ನವೀಸ್‌ ಸೇರಿದಂತೆ ಅನೇಕ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.

ಪೇರಿ ಕಿತ್ತ ಮ್ಯಾನೇಜರ್‌, ಸಿಬ್ಬಂದಿ:
ಬೆಂಕಿ ತಗಲುತ್ತಿದ್ದಂತೆಯೇ ಪಬ್‌ನ ಮ್ಯಾನೇಜರ್‌ ಮತ್ತು ಸಿಬ್ಬಂದಿ ಜಾಗ ಖಾಲಿ ಮಾಡಿದ್ದಾರೆ. ಗ್ರಾಹಕರನ್ನು ರಕ್ಷಿಸುವ ಬದಲಿಗೆ ಸ್ಥಳದಿಂದ ಪರಾರಿಯಾಗಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗ್ರಾಹಕರು ಸುರಕ್ಷಿತವಾಗಿ ಹೊರಹೋಗುವುದಕ್ಕೆ ವ್ಯವಸ್ಥೆಗೂ ಸಿಬ್ಬಂದಿ ಹಾಗೂ ಮ್ಯಾನೇಜರ್‌ ಮುಂದಾಗಲಿಲ್ಲ. ಇದರಿಂದಾಗಿಯೇ 14 ಗ್ರಾಹಕರು ಸಾವನ್ನಪ್ಪುವಂತಾಯಿತು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಮ್ಯಾನೇಜರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಇನ್ನೊಂದೆಡೆ ಮುಂಬೈ ಪಾಲಿಕೆ ಅಧಿಕಾರಿಗಳು ಈಗಾಗಲೇ 3 ಬಾರಿ ಪಬ್‌ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಪಬ್‌ಗ 2016ರಲ್ಲಿ ಅನುಮತಿ ನೀಡಲಾಗಿತ್ತು. ಅದರ ನಿರ್ವಹಣೆ ಹೊಣೆ ಹೊತ್ತಿರುವ ಸಿ ಗ್ರೇಡ್‌ ಹಾಸ್ಪಿಟಾಲಿಟಿ ಕಂಪನಿಯ ಹೃತೇಶ್‌ ಸಾಂ Ì, ಜಿಗರ್‌ ಸಾಂ Ì ಮತ್ತು ಅಭಿಜೀತ್‌ ಮಂಕಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಐವರು ಪಾಲಿಕೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ನಿಯೋಜಿತ ಅಧಿಕಾರಿ, ಜೂನಿಯರ್‌ ಇಂಜಿನಿಯರ್‌, ಸಬ್‌ ಇಂಜಿನಿಯರ್‌, ವೈದ್ಯಕೀಯ ಅಧಿಕಾರಿ ಹಾಗೂ ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ನಿಯಮ ಉಲ್ಲಂಘಿಸಿದ ಪಬ್‌:
ಇಡೀ ಪಬ್‌ ಅನ್ನು ಬಿದಿರು ಬಳಸಿಯೇ ನಿರ್ಮಿಸಲಾಗಿದೆ. ಕಮಲಾ ಮಿಲ್ಸ್‌ನ ಕಟ್ಟಡದ ಛಾವಣಿಯಲ್ಲಿ ಈ ಪಬ್‌ ಇರುವುದರಿಂದ ಬೆಂಕಿ ಹೊತ್ತಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಆದರೂ, ಇಲ್ಲಿ ಯಾವುದೇ ಅಗ್ನಿಶಾಮಕ ಸಾಧನಗಳು ಇರಲಿಲ್ಲ. ಅಷ್ಟೇ ಅಲ್ಲ, ತುರ್ತು ನಿರ್ಗಮನ ಪ್ರದೇಶವನ್ನೂ ಸಾಮಗ್ರಿಗಳನ್ನಿಟ್ಟು ಮುಚ್ಚಲಾಗಿತ್ತು. ಹೀಗಾಗಿ ಅಗ್ನಿ ಅನಾಹುತ ಸಂಭವಿಸಿದಾಗ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆ ಇತ್ತು ಎಂದು ಪೊಲೀಸರು ವರದಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next