Advertisement

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

07:51 PM Jan 27, 2022 | Team Udayavani |

ಮುಂಬಯಿ: ನಕಲಿ ನೋಟು ಮುದ್ರಣ ಮತ್ತು ಹಂಚುವಿಕೆ ಪ್ರಕರಣದ ಜಾಲ ಭೇದಿಸುವಲ್ಲಿ ಮುಂಬಯಿ ಪೊಲೀಸ್‌ ಕ್ರೈಂ ಬ್ರಾಂಚ್‌ ತಂಡ ಯಶಸ್ವಿಯಾಗಿದೆ.

Advertisement

ದಹಿಸರ್‌ ನಾಕಾ ಬಳಿ ನಕಲಿ ನೋಟು ತಯಾರಿಕೆಯಲ್ಲಿ ತೊಡಗಿದ್ದ ತಂಡದ 7 ಮಂದಿ ಸದಸ್ಯರನ್ನು ಬಂಧಿಸಿದ ಪೊಲೀಸರು ಅವರಿಂದ 2,000 ರೂ. ಮೌಲ್ಯದ ಸುಮಾರು 7 ಕೋಟಿ ರೂ. ನಕಲಿ ಭಾರತೀಯ ಕರೆನ್ಸಿಗಳನ್ನು ವಶಕ್ಕೆ ತೆಗೆದುಕೊಂಡಿದೆ

ಮುಂಬಯಿಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಪ್ರತೀದಿನ ಚಲಾವಣೆಗೆ ತರಲಾಗುತ್ತಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಈ ವೇಳೆ 2,000 ಮೌಲ್ಯದ ನಕಲಿ ನೋಟುಗಳನ್ನು ಮಾರಾಟ ಮಾಡಲು ನಾಲ್ವರು ದಹಿಸರ್‌ಗೆ ಬರುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು. ಅವರ ವಾಹನವನ್ನು ತಪಾಸಣೆ ನಡೆಸಿದಾಗ 2,000 ರೂ. ನೋಟುಗಳ 250 ಬಂಡಲ್‌ಗ‌ಳು ಪತ್ತೆಯಾಗಿವೆ.

ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಇದರ ಹಿಂದೆ ದೊಡ್ಡ ಗ್ಯಾಂಗ್‌ ಇರುವುದು ತಿಳಿಯಿತು. ಎಲ್ಲರನ್ನು ಬಂಧಿಸಿದ ಪೊಲೀಸರು ಆರೋಪಿಗಳ ಬಳಿಯಿಂದ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಚಾಲನಾ ಪರವಾನಿಗೆ, ಚುನಾವಣಾ ಆಯೋಗದ ಗುರುತಿನ ಚೀಟಿ ಹಾಗೂ ವಿವಿಧ ಕಂಪೆನಿಗಳ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next