Advertisement
ಆ. 6ರಂದು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ನಡೆದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಇದರ 18ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಗುರುವಂದನೆ ಸ್ವೀಕರಿಸಿ, ಬಳಗ ಯುವ ವಿಭಾಗಕ್ಕೆ ಚಾಲನೆ ನೀಡಿ ಆಶೀರ್ವದಿಸಿದ ಶ್ರೀಗಳು, ಮಹಾರಾಷ್ಟ್ರದ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರವು ಒಡಿಯೂರು ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ. ಒಡಿಯೂರಿನ ಪ್ರಗತಿಯಲ್ಲಿ ಮುಂಬಯಿಯ ಬಳಗ ಮತ್ತು ಕೇಂದ್ರದ ಹಾಗೂ ಇಲ್ಲಿನ ತುಳು-ಕನ್ನಡಿಗರು, ಭಕ್ತರ ಪಾಲು ಅಪಾರವಾಗಿದೆ. ಬದುಕು ಸುಂದರವಾಗಲು ಬದಲಾವಣೆಯ ಅಗತ್ಯವಿದೆ. ಇಂದು ಚಾಲನೆಗೊಂಡ ಯುವ ವಿಭಾಗವು ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲಿ ಎಂದು ಶುಭ ಹಾರೈಸಿದರು.
Related Articles
Advertisement
ಬಳಗದ ಉಪಾಧ್ಯಕ್ಷ ಬೋಲಾ°ಡುಗುತ್ತು ಚಂದ್ರಹಾಸ್ ಎಂ. ರೈ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷ ರೇವತಿ ವಾಮಯ್ಯ ಶೆಟ್ಟಿ, ಉದ್ಯಮಿ ಜಯಂತ್ ಶೆಟ್ಟಿ, ಸಾಧ್ವಿ ಮಾತಾನಂದಮಯಿ ಉಪಸ್ಥಿತರಿದ್ದರು. ಉದ್ಯಮಿ ಸತೀಶ್ ಶೆಟ್ಟಿ ಮತ್ತು ಸುಚಿತ್ರಾ ಎಸ್. ಶೆಟ್ಟಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಸಾಧ್ವಿ ಮಾತಾನಂದಮಯಿ ಸ್ತೋತ್ರ ಪಠಿಸಿದರು. ಕವಿತಾ ಪ್ರಕಾಶ್ ಶೆಟ್ಟಿ ಶ್ರೀಗಳ ಬಗ್ಗೆ ಕವಿತೆ ಪ್ರಸ್ತುತಪಡಿಸಿದರು. ಪ್ರಕಾಶ್ ಶೆಟ್ಟಿ ನೆರೂಲ್, ಡಾ| ಅದೀಪ್ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಯುವ ವಿಭಾಗಕ್ಕೆ ಚಾಲನೆ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ರೀಗಳು ಗೌರವಿಸಿದರು. ಪ್ರಾರಂಭದಲ್ಲಿ ಕಲ್ಲಡ್ಕ ವಿಠಲ ನಾಯಕ್ ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು. ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಉದ್ಯಮಿ ದಾಮೋದರ ಶೆಟ್ಟಿ ನೆರೂಲ್, ಸಂತೋಷ್ ರಾಘು ಶೆಟ್ಟಿ ಅವರ ಸೇವಾರ್ಥವಾಗಿ ಅನ್ನಪ್ರಸಾದ ನಡೆಯಿತು. ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ನಮ್ಮನ್ನು ಹೆಚ್ಚಾಗಿ ಸೆಳೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಶ್ರೀಗಳಿಂದ ಧರ್ಮದ ಪ್ರಚಾರ ನಡೆಯುತ್ತಿರುವುದು ಸಂತೋಷದ ಸಂಗತಿ. ಜನಪರ ಕಾರ್ಯಕ್ರಮಗಳು ನಡೆದಾಗ ದೇಶದ ಪ್ರಗತಿಯಾಗುತ್ತದೆ -ಖಾಂದೇಶ್ ಭಾಸ್ಕರ್ ಶೆಟ್ಟಿ, ಕಾರ್ಯಾಧ್ಯಕ್ಷರು
ಬಂಟರ ಸಂಘ ನವಿಮುಂಬಯಿ ಸಮಿತಿ. ಸ್ವಾಮೀಜಿ ಅವರ ಈ ಧಾರ್ಮಿಕ ಕಾರ್ಯಕ್ರಮವನ್ನು ಕಂಡು ಬಹಳ ಸಂತೋಷವಾಗುತ್ತಿದೆ. ಹಿರಿಯರ ಉತ್ತಮ ಮಾರ್ಗದರ್ಶನದೊಂದಿಗೆ ಯುವ ಪೀಳಿಗೆ ಮುಂದುವರಿದರೆ ಪ್ರಗತಿ ಸಾಧ್ಯವಾಗುತ್ತದೆ
– ಡಾ| ಶ್ರೀಕಾಂತ್ ಶಿಂಧೆ ಸಂಸದರು. ಗುರುವಿನಿಂದ ಅಜ್ಞಾನ ದೂರವಾಗುತ್ತದೆ. ಮನುಷ್ಯ ಎಷ್ಟೇ ದೊಡ್ಡವನಾಗಿರಲಿ, ನಯ, ವಿನಯವನ್ನು ಗುರುವಿನಿಂದ ಕಲಿಯಬೇಕು. ಯುವ ವಿಭಾಗವನ್ನು ಪ್ರಾರಂಭಿಸಿ ಬಳಗವು ಉತ್ತಮ ಕೆಲಸವನ್ನು ಮಾಡಿದೆ. ಒಡಿಯೂರಿನ ಜನಪರ ಕಾರ್ಯಗಳಿಗೆ ಎಲ್ಲರ ಸಹಕಾರವಿರಲಿ.
– ಲತಾ ಜೆ. ಶೆಟ್ಟಿ ,ಕಾರ್ಯಾಧ್ಯಕ್ಷೆ
ಬಂಟರ ಸಂಘ ಮಹಿಳಾ ವಿಭಾಗ. ಗುರುಸೇವೆಯಿಂದ ಪರಮಾತ್ಮನ ಸಾನ್ನಿಧ್ಯ ಪ್ರಾಪ್ತಿಯಾಗುತ್ತದೆ. ಒಡಿಯೂರಿಗೆ ಹೋದಾಗ ನನಗೆ ಸಾಕ್ಷಾತ್ ಭಗವಂತನನ್ನು ಕಂಡ ಅನುಭೂತಿಯಾಗಿದೆ. ನಾನು, ನನ್ನದು, ನನ್ನಿಂದಲೇ ಎಂಬ ಮಾತುಗಳು ಶೂನ್ಯ. ಗುರುವಿನ ಆರಾಧನೆಯಿಂದ ನಮ್ಮ ದೇಹ ಸತ್ತರೂ ಸದ್ಗತಿ ಪ್ರಾಪ್ತಿಯಾಗುತ್ತದೆ. ಬಳಗದ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ .
– ನ್ಯಾಯವಾದಿ ಕೃಷ್ಣ ಎಲ್. ಶೆಟ್ಟಿ ಅಧ್ಯಕ್ಷರು,
ಗುರುದೇವ ಸೇವಾ ಬಳಗ ಮುಂಬಯಿ.