ಮುಂಬಯಿ: ನಗರದ ಪ್ರತಿಷ್ಠಿತ ಸಂಸ್ಥೆ ಬೃಹನ್ಮುಂಬಯಿ ಕಸ್ಟಮ್ ಬ್ರೋಕರ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಪೊಯಿಸಾರ್ ಜಿಮ್ಖಾನದ ಅಧ್ಯಕ್ಷ, ಸಮಾಜ ಸೇವಕ ಕರುಣಾಕರ ಶೆಟ್ಟಿ ಇವರು ಆಯ್ಕೆಯಾಗಿದ್ದು, ಪದಗ್ರಹಣ ಸಮಾರಂಭವು ಜೂ. 29 ರಂದು ಪರೇಲ್‌ನ ಹೊಟೇಲ್ ಐಟಿಸಿ ಗ್ರಾÂಂಡ್ ಸೆಂಟ್ರಲ್ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.
ಇದೇ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ಆಶೀಶ್ ಪೆಡೆ°àಕರ್ ಅವರಿಂದ ನೂತನ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು. ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಆಶೀಶ್ ಪೆಡೆ°àಕರ್ ನುಡಿದು ಪುಷ್ಪಗುತ್ಛವನ್ನಿತ್ತು ಶುಭ ಹಾರೈಸಿದರು.
ಸಮಾರಂಭದಲ್ಲಿ ಕಸ್ಟಮ್ ಬ್ರೋಕರ್ ಅಸೋಸಿಯೇಶನ್‌ನ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಅಧ್ಯಕ್ಷ ಕರುಣಾಕರ ಶೆಟ್ಟಿ ಅವರನ್ನು ಅಭಿನಂದಿಸಿ ಶುಭಹಾರೈಸಿದರು. ಬೊರಿವಲಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರ ನಿಕಟ ಬಂಧುವಾಗಿರುವ ಇವರು ಸಮಾಜಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿ, ಪ್ರಸ್ತುತ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಇವರ ಸಂಘಟನ ಚಾತುರ್ಯಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಹಲವು ಸಂಘಟನೆಗಳ ಸದಸ್ಯರಾಗಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾರಂಗದಲ್ಲೂ ಬಹಳಷ್ಟು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿದ ಹಿರಿಮೆಯನ್ನು ಹೊಂದಿದ್ದಾರೆ.
ಮೂಲತಃ ಪಡುಬಿದ್ರಿ ಸಮೀಪದ ಸಾಂತೂರಿನವರಾದ ಇವರು ಸಂಪೂರ್ಣ ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ ಪೂರೈಸಿ ಪಾಟ್ಕರ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ 1982 ರಲ್ಲಿ ಡಿ. ಎಚ್. ಪಾಟ್ಕರ್ ಆ್ಯಂಡ್ ಕಂಪೆನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತನ್ನ ಕಾಯಕವನ್ನು ಆರಂಭಿಸಿದರು. ಕಠಿನ ಪರಿಶ್ರಮದ ಮೂಲಕ ಲಾಜಿಸ್ಟಿಕ್ ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತನ್ನ ಏಳು ವರ್ಷಗಳ ಅನುಭವನದಲ್ಲಿಯೇ ಅಂದರೆ 1989ರಲ್ಲಿ ತನ್ನದೇ ಆದ ಶಿಪ್ ಏರ್ ಕ್ಲಿಯರಿಂಗ್ ಏಜೆನ್ಸಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
ಇಂದು ಈ ಸಂಸ್ಥೆ ಶಿಪ್ ಏರ್ ಫಾರ್ವರ್ಡರ್ ಪ್ರೈವೇಟ್ ಲಿಮಿಟೆಡ್ ಆಗಿ ಮರುನಾಮಕರಣಗೊಂಡಿದೆ. ಲಾಜಿಸ್ಟಿಕ್ ಉದ್ಯಮದೊಂದಿಗೆ ವ್ಯಾಪಾರಿ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದ ಇವರು ಸುಮಾರು 1600 ಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಶಿಪ್ಪಿಂಗ್ ಲಾಜಿಸ್ಟಿಕ್ ವ್ಯವಹಾರದ ಕಂಪೆನಿಗಳು ಸದಸ್ಯರಾಗಿರುವ ಬಾಂಬೇ ಕಸ್ಟಮ್ಸ್ ಬ್ರೋಕರ್ ಅಸೋಸಿಯೇಶನ್ ಸಂಸ್ಥೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಚಿತ್ರ-ವರದಿ : ರಮೇಶ್ ಉದ್ಯಾವರ