Advertisement

ಮಧ್ಯ ರೈಲ್ವೇಯಿಂದ ಡಿಜಿ ಲಾಕರ್‌ ಸೌಲಭ್ಯ

02:34 PM Aug 20, 2021 | Team Udayavani |

ಮುಂಬಯಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೇ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ (ಸಿಎಸ್‌ಎಂಟಿ) ನಿಲ್ದಾಣದಲ್ಲಿ “ಡಿಜಿ’ ಲಾಕರ್‌ ಸೌಲಭ್ಯವನ್ನು ಆರಂಭಿಸಿದೆ.

Advertisement

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದ ದೇಶದ ಮೊದಲ ಡಿಜಿ ಲಾಕರ್‌ ಸೌಲಭ್ಯ ಇದಾಗಿದ್ದು, ಈ ಸೌಲಭ್ಯವನ್ನು ದಾದರ್‌ ಮತ್ತು ಲೋಕಮಾನ್ಯ ತಿಲಕ್‌ ಟರ್ಮಿನಸ್‌ನಲ್ಲಿಯೂ ಶೀಘ್ರ ಆರಂಭಿಸಲಾಗುವುದು ಎಂದು ಮಧ್ಯ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಹೆಸರು, ಮೊಬೈಲ್‌ ಸಂಖ್ಯೆ, ಪಿಎನ್‌ಆರ್‌ ಸಂಖ್ಯೆ ಮತ್ತು ಇ-ಮೇಲ್‌ ಐಡಿ ತುಂಬಿದ ಬಳಿಕ ಬಯಸಿದ ಗಾತ್ರದ ಲಾಕರ್‌ ಅನ್ನು ಕಾಯ್ದಿರಿ ಸಬಹುದು. ಬಳಿಕ ಪ್ರಯಾಣಿಕರು ಈ ಲಾಕರ್‌ ಅನ್ನು ಚೀಲದ ವಿವರಗಳನ್ನು ತುಂಬುವ ಮೂಲಕ ಮತ್ತು ಅದನ್ನು ಎಷ್ಟು ಗಂಟೆ ಬಳಸುತ್ತಾರೆ ಎಂಬುದನ್ನು ಬಳಸಬಹುದು.

ಇದನ್ನೂ ಓದಿ:OPPO A15 ಈಗ ಮತ್ತಷ್ಟು ಅಗ್ಗ : ಜಿಯೋ ಬಳಕೆದಾರರಿಗೆ ಸಿಗುತ್ತಿದೆ ಬಾರಿ ರಿಯಾಯಿತಿ..!

ಲಾಕರ್‌ ಸವಲತ್ತಿನಿಂದ ಆದಾಯ
ಲ್ಯಾಡರ್‌-2 ರೈಸ್‌ ಪ್ರೈ. ಲಿ. ಕಂಪೆನಿಯನ್ನು ಲಾಕರ್‌ ನೋಡಿ ಕೊಳ್ಳಲು ನಿಯೋಜಿಸಲಾಗಿದ್ದು, 24 ಗಂಟೆಗಳ ಕಾಲ ಡಿಜಿ ಲಾಕ್‌ ಸಿಬಂದಿಯನ್ನು ಹೊಂದಿರುತ್ತದೆ. ಈ ಲಾಕರ್‌ ಬಳಸುವಾಗ, ಪ್ರಯಾಣಿಕರಿಗೆ ವಿಶಿಷ್ಟ ಬಾರ್‌ಕೋಡ್‌ನೊಂದಿಗೆ ರಸೀದಿ ಒದಗಿಸಲಾಗುವುದು. ಬ್ಯಾಗ್‌ ಹಿಂದಕ್ಕೆ ಪಡೆಯುವಾಗ ಈ ಬಾರ್‌ಕೋಡ್‌ ರಸೀದಿ ತೋರಿಸಬೇಕು. ಈ ಲಾಕರ್‌ಗಳನ್ನು ಅಳವಡಿಸುವ ಮತ್ತು ನಿರ್ವಹಿಸುವ ವೆಚ್ಚವನ್ನು ಕಂಪೆನಿ ಮುಂದಿನ ಐದು ವರ್ಷಗಳವರೆಗೆ ಭರಿಸುತ್ತದೆ. ರೈಲ್ವೇಗೆ ಈ ಸೌಲಭ್ಯದಿಂದ ಐದು ವರ್ಷಗಳಿಗೆ 79.65 ಲಕ್ಷ ರೂ. ಆದಾಯ ದೊರೆಯಲಿದೆ.

ಸುಧಾರಿತ ಲಾಕರ್‌ ಸೌಲಭ್ಯ
ಪ್ರಯಾಣಿಕರಿಗೆ ಸುರಕ್ಷಿತ ಲಾಕರ್‌ಗಳು, ಡಿಜಿಟಲ್‌ ಪಾವತಿ ಸೌಲಭ್ಯ, ಆರ್‌ಎಫ್‌ಐಡಿ ಟ್ಯಾಗ್‌ಗಳ ಬಳಕೆ ಮತ್ತು ಆನ್‌ಲೈನ್‌ ಸ್ವೀಕೃತಿಯಂತಹ ಸುಧಾರಿತ ಲಾಕರ್‌ ರೂಂ ಸೇವೆಗಳನ್ನು ಒದಗಿಸಲಾಗುವುದು.
– ಅನಿಲ್‌ ಕುಮಾರ್‌ ಲಾಹೋಟಿ ಪ್ರಧಾನ ವ್ಯವಸ್ಥಾಪಕರು, ಮಧ್ಯ ರೈಲ್ವೇ

Advertisement
Advertisement

Udayavani is now on Telegram. Click here to join our channel and stay updated with the latest news.

Next