Advertisement

ಮುಂಬಯಿ: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ

08:50 PM Apr 21, 2022 | Team Udayavani |

ಮುಂಬಯಿ: ಮುಂಬಯಿ ನಗರದಲ್ಲಿ  ಪ್ರತಿನಿತ್ಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದೆ 357 ಸಕ್ರಿಯ ಸೋಂಕಿತರಿದ್ದರೆ ಇದೀಗ  ಇದು 415ಕ್ಕೆ  ಏರಿಕೆಯಾಗಿದೆ.

Advertisement

ನಗರದ ಮಲಬಾರ್‌ ಹಿಲ್‌, ತಾಡೇìವ್‌, ಬಾಂದ್ರಾ ಪಶ್ಚಿಮ ಮತ್ತು  ಅಂಧೇರಿ  ಪಶ್ಚಿಮ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ.  ಬುಧವಾರದಂದು ನಗರದಲ್ಲಿ 98 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳಿನಲ್ಲಿ  ಪ್ರತಿನಿತ್ಯ 30 ರಿಂದ 40 ಕೋವಿಡ್‌ ಸೋಂಕು ಪ್ರಕರಣಗಳಷ್ಟೇ ಪತ್ತೆಯಾಗಿದ್ದವು.  ಮಂಗಳವಾರ ಏಕಾಏಕಿ ಕೋವಿಡ್‌ ಸೋಂಕಿನ 83 ಪ್ರಕರಣಗಳು  ಪತ್ತೆಯಾಗಿವೆ.

ಕೋವಿಡ್‌ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಅವುಗಳಲ್ಲಿ ಶೇ.99ರಷ್ಟು ಲಕ್ಷಣ ರಹಿತವಾಗಿವೆ. ಇಂಥವರು ಆಸ್ಪತ್ರೆಗೆ ದಾಖಲಾಗುವ ಆವಶ್ಯಕತೆಯಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next