Advertisement
ಇದನ್ನೂ ಓದಿ:ಲಿಂಗಾಯತರ ವಿರುದ್ದ ಸಿ.ಟಿ.ರವಿ ಹೇಳಿಕೆ ಪೋಸ್ಟ್ ಪ್ರಕರಣ: ಮೂವರ ವಿರುದ್ದ ಎಫ್.ಐ.ಆರ್
Related Articles
Advertisement
2022ರಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ಈ ಘಟನೆಯಲ್ಲಿ ಗೇರ್ ಅವರ ದಿಢೀರ್ ನಡವಳಿಕೆಯಿಂದ ಶಿಲ್ಪಾ ಶೆಟ್ಟಿ ಬಲಿಪಶುವಾಗಿದ್ದಾರೆ ಎಂದು ತಿಳಿಸಿತ್ತು. ಅಲ್ಲದೇ ಗೇರ್ ಚುಂಬಿಸಿದಾಗ ಶಿಲ್ಪಾ ಶೆಟ್ಟಿ ಪ್ರತಿಭಟಿಸಲಿಲ್ಲ ಎಂಬ ಆರೋಪಕ್ಕೆ ಕೋರ್ಟ್, ಯಾವುದೇ ಕಲ್ಪನೆಯಿಂದ ಆಕೆಯನ್ನು ಸಂಚುಗಾರ್ತಿ ಅಥವಾ ಅಪರಾಧಿ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿ, ಶಿಲ್ಪಾ ಶೆಟ್ಟಿಯನ್ನು ಆರೋಪದಿಂದ ಮುಕ್ತಗೊಳಿಸಿತ್ತು.
ಏತನ್ಮಧ್ಯೆ ಪ್ರಾಸಿಕ್ಯೂಷನ್ ಸೆಷನ್ಸ್ ನ್ಯಾಯಾಲಯದಲ್ಲಿ ಮತ್ತೆ ಪರಿಷ್ಕೃತ ಅರ್ಜಿಯನ್ನು ಸಲ್ಲಿಸಿ, ಮ್ಯಾಜಿಸ್ಟ್ರೇಟ್ ಆರೋಪಿಯನ್ನು ಬಿಡುಗಡೆ ಮಾಡುವುದು ಕಾನೂನು ಬಾಹಿರವಾಗಲಿದೆ. ಇದು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾದದ್ದು ಎಂದು ವಾದಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಸೋಮವಾರ (ಎ.03) ಅರ್ಜಿಯನ್ನು ವಜಾಗೊಳಿಸಿದೆ.