Advertisement

Mumbai; 300 ಕೋಟಿ ರೂ. ಮೌಲ್ಯದ ಮೆಫೆಡ್ರೋನ್ ವಶ: 12 ಜನರ ಬಂಧನ

10:54 PM Oct 06, 2023 | Team Udayavani |

ಮುಂಬೈ: ಪೊಲೀಸರು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ 300 ಕೋಟಿ ರೂ. ಮೌಲ್ಯದ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿವಿಧ ಪ್ರದೇಶಗಳಿಂದ 12 ಜನರನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

Advertisement

ನಾಸಿಕ್ ಜಿಲ್ಲೆಯ ಎಂಐಡಿಸಿ ಶಿಂಧೆ ಗಾಂವ್‌ನಲ್ಲಿ ಕಾರ್ಖಾನೆಯ ಮೇಲೆ ದಾಳಿ ನಡೆಸಿ 300.26 ಕೋಟಿ ರೂಪಾಯಿ ಮೌಲ್ಯದ 151.305 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸಾಕಿ ನಾಕಾ ಪೊಲೀಸ್ ಠಾಣೆಯ ತಂಡವು ಮಹಾನಗರದ ವಿವಿಧ ಭಾಗಗಳಿಂದ ಹಾಗೂ ಹೈದರಾಬಾದ್‌ ಮತ್ತು ನಾಸಿಕ್‌ನ ಸಿಂಡಿಕೇಟ್‌ನ 12 ಸದಸ್ಯರನ್ನು ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದರು.

ಮೆಫೆಡ್ರೋನ್ ಉತ್ತೇಜಕ ಔಷಧವಾಗಿದ್ದು, ಮೆದುಳು ಮತ್ತು ದೇಹದ ನಡುವೆ ಚಲಿಸುವ ಸಂದೇಶಗಳನ್ನು ವೇಗಗೊಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next