Advertisement
ಶಿಬಿರದ ಮಕ್ಕಳ ಭಜನೆ, ಶಾರದಾ ಪೂಜೆ, ಗಣಪತಿ ಸ್ತುತಿಯೊಂದಿಗೆ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕಭಾಷಣ, ಭಾವಗೀತೆ, ಜಾನಪದ ಗೀತೆ, ಏಕಪಾತ್ರಾಭಿನಯ, ಛದ್ಮ ವೇಷ, ಪಾಲಕರಿಗೆ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಹೊಟೇಲ್ ಉದ್ಯಮಿ ಅರುಣೋದಯ ರೈ ಉದ್ಘಾಟಿಸಿ, ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆಯಿಂದ ತಿಳಿಯು
ವಂಥದ್ದು ಬಹಳಷ್ಟಿದೆ. ಶಿಬಿರದ ಪ್ರಯೋಜನ ವನ್ನು ಇನ್ನಷ್ಟು ತುಳು – ಕನ್ನಡಿಗರಿಗೆ ಸಿಗುವಂತೆ ಪ್ರಯತ್ನಿಸೋಣ ಎಂದರು.
ಸಂಸ್ಕಾರ ಕಲಿತ ವ್ಯಕ್ತಿ ಯಾವತ್ತೂ ಕೆಟ್ಟವನಾಗಲಾರ. ಮಕ್ಕಳನ್ನು ಶಿಕ್ಷಿಸದೆ, ಪ್ರೀತಿ-ತಾಳ್ಮೆಯಿಂದ ನೋಡಿಕೊಳ್ಳಬೇಕು. ಮಕ್ಕಳನ್ನು ಪೋಷಿಸುವ ಕೆಲಸ ಪಾಲಕರದ್ದಾದರೂ ಚಿಣ್ಣರ ಬಿಂಬ ಈ ಕೆಲಸ ಮಾಡುತ್ತಿದೆ ಎಂದರು. ಉದ್ಯಮಿ ವಿಜಯ್ ಬಾಲಕೃಷ್ಣ ರಾವ್ ಮಾತನಾಡಿ, ಮಕ್ಕಳನ್ನು ತಿದ್ದಿ, ತೀಡಿ ಸಂಸ್ಕಾರ, ಸಂಸ್ಕೃತಿ ಕೊಟ್ಟು ಸಲಹಿದ ಎಲ್ಲ ಶಿಕ್ಷಕರಿಗೂ ಪಾಲಕರಿಗೂ ಹಾಗೂ ಚಿಣ್ಣರ ಬಿಂಬ ಸಂಸ್ಥೆಗೂ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಮಹಾಮಂಡಲ ಮೀರಾ-
ಭಾಯಂದರ್ ಸ್ಥಾಪಕ ಚಂದ್ರಶೇಖರ ವಿ. ಶೆಟ್ಟಿ ಮಾತನಾಡಿ, ಯಾವುದೇ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಮಾಡುವ ವ್ಯಕ್ತಿಗಳನ್ನು ಯಾವತ್ತೂ ಮರೆಯಬಾರದು. ಪಾಲಕರಿಗೆ ಅವಕಾಶ ಕೊಡುವಂತಹ ಏಕೈಕ ಸಂಸ್ಥೆ ಚಿಣ್ಣರ ಬಿಂಬವಾಗಿದೆ ಎಂದರು.
Related Articles
ಪ್ರಕಾಶಣ್ಣನ ಚಿಂತನೆ ಬಹಳ ಒಳ್ಳೆಯದು. ಈ ಸಂಸ್ಥೆಯ ಮಕ್ಕಳು ಮುಂದೆ ಒಂದು ದಿನ ಉತ್ತಮ ಪ್ರಜೆಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಕಲಿಸುವ ಶಿಕ್ಷಕರು ಹಾಗೂ ಪಾಲಕರಿಗೆ ವಂದನೆಗಳು ಎಂದರು.
Advertisement
ಅತಿಥಿಯಾಗಿದ್ದ ಉದ್ಯಮಿ ಅರುಣ್ ಟಿ. ಪಕ್ಕಳ, ಮಾಟುಂಗ ಲಯನ್ಸ್ ಪಯೋನಿಯರ್ ಇಂಗ್ಲಿಷ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಸುಮತಿ ಎಸ್. ಶೆಟ್ಟಿ, ಅಯ್ಯಪ್ಪ ಭಕ್ತವೃಂದ ಶಿರ್ಡಿ ನಗರ ಭಾಯಂದರ್ ಈಸ್ಟ್ ಅಧ್ಯಕ್ಷಸತೀಶ್ ಜೆ. ಪೂಜಾರಿ ಶುಭ ಹಾರೈಸಿದರು. ಪ್ರಾದೇಶಿಕ ಮುಖ್ಯಸ್ಥೆ ವಿನಯಾ ಶೆಟ್ಟಿ, ವಲಯ ಮುಖ್ಯಸ್ಥೆ ಆಶಾಲತಾ ಕೊಠಾರಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿದ್ದ
ಸುಜಾತಾ ಶೆಟ್ಟಿ, ಅಕ್ಷತಾ ದೇಶಪಾಂಡೆ ಮಕ್ಕಳಿಗೆ ಶುಭ ಹಾರೈಸಿದರು. ಶಿಬಿರದ ಚಿಣ್ಣರು ಜಾನಪದ ನೃತ್ಯ ಪ್ರದರ್ಶನ ನೀಡಿದರು. ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪ್ರತಿಭಾವಂತ ಮಕ್ಕಳನ್ನು, ಶಿಬಿರ ಮಾಜಿ ಮುಖ್ಯಸ್ಥೆ ಅಮಿತಾ ಶೆಟ್ಟಿ, ಸಾಂಸ್ಕೃತಿಕ
ಮುಖ್ಯಸ್ಥೆ ಕುಶಲಾ ಪೂಜಾರಿ ಅವರನ್ನು ಗೌರವಿಸಲಾಯಿತು. ಶಿಬಿರದ ಮುಖ್ಯಸ್ಥೆ ಜಯಲಕ್ಷ್ಮೀ ಪಿ. ಶೆಟ್ಟಿ ಸ್ವಾಗತಿಸಿದರು. ಕೇಂದ್ರ ಸಮಿತಿಯ ಸದಸ್ಯೆ ವಿಶಾಲಾಕ್ಷಿ ಶೆಟ್ಟಿ ಪ್ರಾಸ್ತಾವಿಸಿದರು.
ಚಿಣ್ಣರಾದ ಗೆಹನಾ ಶೆಟ್ಟಿ, ಸಾಕ್ಷಿ ಶೆಟ್ಟಿ, ಸಾಗರ್ ಪೂಜಾರಿ, ವಂಶಿ ಶೆಟ್ಟಿ, ತನ್ವಿ ಶೆಟ್ಟಿ, ಖುಶಿ ಶೆಟ್ಟಿ, ಪ್ರಜ್ಯೋತ್ ಶೆಟ್ಟಿ, ನಿಹಾಲ್ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ರಕ್ಷಿತ್ ಶೆಟ್ಟಿ, ಪ್ರಾಚಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಹುಮಾನ ವಿತರಣ ಕಾರ್ಯಕ್ರಮವನ್ನು ಕಾಂದಿವಲಿ ಶಿಬಿರದ ಆಶಾ ಮೊಗವೀರ, ಆಶಾ ಚೇವಾರ್ ಹಾಗೂ ಮೀರಾರೋಡ್
ಶಿಬಿರದ ಶರ್ಮಿಳಾ ಶೆಟ್ಟಿ ನಡೆಸಿಕೊಟ್ಟರು. ಸಾಂಸ್ಕೃತಿಕ ಮುಖ್ಯಸ್ಥೆ ಸುಚಿತ್ರಾ ಎಚ್. ಪೂಜಾರಿ ವಂದಿಸಿದರು. ಶಿಬಿರದ ಪಾಲಕರು,
ಮಕ್ಕಳು, ಶಿಕ್ಷಕರು, ಸ್ವಯಂಸೇವಕರು, ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಬಹುಮಾನ ವಿಜೇತರು
ಜೂನಿಯರ್ ವಿಭಾಗದ ಮಕ್ಕಳ ಪ್ರತಿಭಾ ಸ್ಪರ್ಧೆಯಲ್ಲಿ ಪ್ರಥಮ ಸಾನ್ವಿ ಎಸ್. ಶೆಟ್ಟಿ, ದ್ವಿತೀಯ ಆರೋಹಿ ಶೆಟ್ಟಿ, ತೃತೀಯ ಮನ್ವಿತ್ ಪೂಜಾರಿ, ಸೀನಿಯರ್ ವಿಭಾಗದ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಆರಾಧ್ಯಾ ಶೆಟ್ಟಿ, ದ್ವಿತೀಯ ನಮನ್ ಶೆಟ್ಟಿ, ತೃತೀಯ ಸಾನ್ವಿ ಎಸ್. ಶೆಟ್ಟಿ, ಜೂನಿಯರ್ ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಮನ್ವಿತ್ ಪೂಜಾರಿ, ದ್ವಿತೀಯ ಆರೋಹಿ ಶೆಟ್ಟಿ, ತೃತೀಯ ವಿಖ್ಯಾತ್ ಶೆಟ್ಟಿ, ಸೀನಿಯರ್ ವಿಭಾಗದ ಭಾವಗೀತೆಯಲ್ಲಿ ಪ್ರಥಮ ಆರಾಧ್ಯಾ ಶೆಟ್ಟಿ, ದ್ವಿತೀಯ ಸಾನ್ವಿ ಶೆಟ್ಟಿ, ತೃತೀಯ ನಮನ್ ಶೆಟ್ಟಿ ಬಹುಮಾನ ಗಳಿಸಿದರು. ಏಕಪಾತ್ರಾಭಿನಯ ಸೀನಿಯರ್ ವಿಭಾಗ ದಲ್ಲಿ ಪ್ರಥಮ ಸಾನ್ವಿ ಎಸ್. ಶೆಟ್ಟಿ, ದ್ವಿತೀಯ ಚಿರಶ್ರೀ ಬಂಜನ್, ತೃತೀಯ ಆರಾಧ್ಯಾ ಶೆಟ್ಟಿ, ಛದ್ಮವೇಷ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಪ್ರಥಮ ಆರೋಹಿ ಶೆಟ್ಟಿ, ದ್ವಿತೀಯ ಸಾನ್ವಿ ಶೆಟ್ಟಿ, ತೃತೀಯ ಸ್ವರ್ಣಿಕ್ ಗೌಡ, ಪಾಲಕರ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಜಯಲಕ್ಷ್ಮೀ ಶೆಟ್ಟಿ, ದ್ವಿತೀಯ ದಿವ್ಯಾ ಶೆಟ್ಟಿ, ತೃತೀಯ ಪ್ರಿಯಾಂಕಾ ಶೆಟ್ಟಿ ಬಹುಮಾನ ಪಡೆದರು.