ಮುಂಬಯಿ: ಹೆತ್ತವರು ಮಕ್ಕಳಿಗೆ ಅಸೋಸಿಯೇಶನ್‌ನ ಧ್ಯೇಯ- ಧೋರಣೆಯನ್ನು ತಿಳಿಸಿ, ಅವರನ್ನು ಮುಖ್ಯ ವಾಹಿನಿಗೆ ತಂದರೆ ಮುಂದೊಂದು ದಿನ ಬಿಲ್ಲವರ ಅಸೋಸಿಯೇಶನ್ ಇನ್ನಷ್ಟು ಬಲಿಷ್ಠಗೊಂಡು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. ಪದವಿಗೆ ವಿಶೇಷತೆ ನೀಡದೆ ಕೆಲಸ ಕಾರ್ಯವನ್ನು ನಿಸ್ವಾರ್ಥ ಸೇವೆಯಿಂದ ಮಾಡಬೇಕು ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅವರು ಅಭಿಪ್ರಾಯಿಸಿದರು.
ಆ. 24 ರಂದು ಭಿವಂಡಿಯ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಭಿವಂಡಿ ಸ್ಥಳೀಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಿವಂಡಿ ಕಾರ್ಯಕಾರಿ ಸಮಿತಿಯ ಯುವ ಶಕ್ತಿಯ ಚೇತನ ಎದ್ದು ಕಾಣುತ್ತಿದ್ದು, ನಮ್ಮ ಹಲವಾರು ಯೋಜನೆಗಳಿಗೆ ಸ್ಥಳೀಯರೊಂದಿಗೆ ಸ್ಪಂದಿಸಲು ಈ ಸಮಿತಿ ಬಲಿಷ್ಠವಾಗಿದೆ. ಬಲಿಷ್ಠ ಬಿಲ್ಲವ ಸಮಾಜದ ನಿರ್ಮಾಣಕ್ಕೆ ಎಲ್ಲರ ಕೊಡುಗೆ ಅನನ್ಯವಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಸಮಿತಿಯ ಅಚ್ಚುಕಟ್ಟಾತ ಕಾರ್ಯವೈಖರಿಯ ಬಗ್ಗೆ ಶ್ಲಾಘಿಸಿ ಸ್ಥಳೀಯ ಕಚೇರಿಯ ಸಂಸ್ಥೆಯ ಯೋಜನೆಯನ್ನು ಮನೆಮನೆಗೆ ತಲುಪಿಸಲು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ನುಡಿದರು.
ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅವರು ನಿರ್ಗಮನ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಎ. ಪೂಜಾರಿ ಮತ್ತು ಉಪ ಕಾರ್ಯಾಧ್ಯಕ್ಷ ವಿಶ್ವನಾಥ ಡಿ. ಪೂಜಾರಿ ಹಾಗೂ ನೂತನ ಕಾರ್ಯಾಧ್ಯಕ್ಷ ರತ್ನಾಕರ ಜಿ. ಪೂಜಾರಿ ಅವರನ್ನು ಅಭಿನಂದಿಸಿ ಗೌರವಿಸಿದರು. ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ದಯಾನಂದ ಆರ್. ಪೂಜಾರಿ, ಶ್ರೀನಿವಾಸ ಕರ್ಕೇರ, ಗೌರವ ಕಾರ್ಯದರ್ಶಿ ಧನಂಜಯ ಶಾಂತಿ, ಗೌರವ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ದೇವು ಎಸ್. ಪೂಜಾರಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸ್ಥಳೀಯ ಸಮಿತಿಯ ನೂತನ ಗೌರವ ಕಾರ್ಯದರ್ಶಿ ಉಮೇಶ್ ಆರ್. ಸುವರ್ಣ ವಂದಿಸಿದರು. ನೂತನ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾಗಿ ದೇವು ಎಸ್. ಪೂಜಾರಿ, ಕಾರ್ಯಾಧ್ಯಕ್ಷರಾಗಿ ರತ್ನಾಕರ ಜಿ. ಪೂಜಾರಿ, ಉಪ ಕಾರ್ಯಾಧ್ಯಕ್ಷರಾಗಿ ಜಯಂತ್ ಎಸ್. ಸಾಲ್ಯಾನ್, ಸಹಾಯಕ ಕಾರ್ಯದರ್ಶಿಯಾಗಿ ಸತೀಶ್ ಆರ್. ಪೂಜಾರಿ, ಗೌರವ ಕೋಶಾಧಿಕಾರಿಯಾಗಿ ಅಶೋಕ್ ಜೆ. ಸುವರ್ಣ, ಜತೆ ಕೋಶಾಧಿಕಾರಿಯಾಗಿ ಜೀವನ್ ಎಸ್. ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ವಾಸು ಎಸ್. ಪೂಜಾರಿ, ಉದಯ ಡಿ. ಸಾಲ್ಯಾನ್, ಪ್ರಶಾಂತ್ ಎನ್. ಪೂಜಾರಿ, ಪ್ರಶಾಂತ್ ಆರ್. ಪೂಜಾರಿ, ಸಂದೀಪ್ ಎಸ್. ಪೂಜಾರಿ, ಹರೀಶ್ ವಿ. ಪೂಜಾರಿ, ಸಚಿನ್ ಡಿ. ಪೂಜಾರಿ, ಹರಿಣಾಕ್ಷೀ ಪಿ. ಪೂಜಾರಿ, ಮಮತಾ ಬಿಲ್ಲವ ಆಯ್ಕೆಯಾದರು.
ಚಿತ್ರ-ವರದಿ : ರಮೇಶ್ ಉದ್ಯಾವರ