Advertisement

ಶೀಘ್ರ ಮತ್ತೆ ಮೂರು ಎಸಿ ಲೋಕಲ್‌ ಸೇವೆಗೆ ಲಭ್ಯ

01:21 PM Dec 14, 2020 | Suhan S |

ಮುಂಬಯಿ, ಡಿ. 13: ಕೋವಿಡ್ ಕಾಲಾವಧಿಯಲ್ಲಿ ವಿವಿಧ ಹಂತಗಳಲ್ಲಿ ಪಶ್ವಿ‌ಮ ಉಪನಗರ ರೈಲ್ವೇಯ ಮೂರು ಹೊಸ ಹವಾನಿಯಂತ್ರಿತ ಲೋಕಲ್‌ ರೈಲುಗಳು ಶೀಘ್ರದಲ್ಲೇ ಪ್ರಯಾಣಿಕರ ಸೇವೆಗಳಿಗೆ ಹಾಜರಾಗಲಿದೆ ಎಂದು ಪಶ್ಚಿಮ ರೈಲ್ವೇ ಇಲಾಖೆ ತಿಳಿಸಿದೆ.

Advertisement

ಪ್ರಸ್ತುತ ಅಗತ್ಯ ಸೇವೆಯಲ್ಲಿರುವವರಿಗೆ ಮತ್ತು ಮಹಿಳೆಯರಿಗೆ ಮಾತ್ರ ಲೋಕಲ್‌ನಲ್ಲಿ ಪ್ರಯಾಣಿಸಲು ಅನುಮತಿ ನೀಡಿದ್ದು, ಹೊಸ ವರ್ಷದಲ್ಲಿ ಪ್ರಯಾಣಿಕರ ಸೇವೆಯಲ್ಲಿ ಲಭ್ಯವಾಗಲಿದೆ ಎಂದು ರೈಲ್ವೇ ಆಡಳಿತ ತಿಳಿಸಿದೆ.

ಪಶ್ಚಿಮ ಮಾರ್ಗಗಳಲ್ಲಿ ಈಗಾಗಲೇ ನಾಲ್ಕು ಹವಾ ನಿಯಂತ್ರಿತ ಸ್ಥಳೀಯ ರೈಲುಗಳು ಸೇವೆಯ ಲ್ಲಿದ್ದರೆ, ಕೋವಿಡ್ ಅವಧಿಯಲ್ಲಿ ಇನ್ನೂ ಮೂರು ಹವಾ ನಿ ಯಂತ್ರಿತ ರೈಲುಗಳು ಪಶ್ಚಿಮ ರೈಲ್ವೇಗೆ ಸೇರಿ ಕೊಂಡಿವೆ. ಮಾರ್ಚ್‌ನಲ್ಲಿ ಐದನೇ ಹವಾನಿ ಯಂತ್ರಿತ ಲೋಕಲ್‌ ಅನ್ನು, ಸೆಪ್ಟಂಬರ್‌ನಲ್ಲಿ ಆರನೇ ಮತ್ತು ಡಿಸೆಂಬರ್‌ನಲ್ಲಿ ಏಳನೆಯ ಲೋಕಲ್‌ ರೈಲ್ವೇ ಆಡಳಿತದ ವಶಕ್ಕೆ ನೀಡಲಾಯಿತು ಎಂದು ಪಶ್ಚಿಮ ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿ ಸುಮಿತ್‌ ಠಾಕೂರ್‌ ಹೇಳಿದ್ದಾರೆ.

ಪ್ರಸ್ತುತ ಪಶ್ಚಿಮ ಮಾರ್ಗಗಳಲ್ಲಿ ನಾಲ್ಕು ಹವಾನಿ ಯಂತ್ರಿತ ಸ್ಥಳೀಯ ರೈಲುಗಳು ಸೇವೆಯಲ್ಲಿವೆ. ಮತ್ತೆ ಮೂರು ಹವಾ ನಿಯಂತ್ರಿತ ಲೋಕಲ್‌ಗ‌ಳನ್ನು ಹೇಗೆ ಚಲಾಯಿಸಬೇಕು ಎಂಬುದರ ಕುರಿತು ಯೋಜನೆ ನಡೆಯುತ್ತಿದೆ. ಈ ಮೂರು ಹವಾನಿಯಂತ್ರಿತ ಲೋಕಲ್‌ ಪೈಕಿ ಎರಡು ರೈಲುಗಳು 2021ರ ಮಾರ್ಚ್‌ ವೇಳೆಗೆ ಸೇವೆಗೆ ಹಾಜರಾಗಲಿದ್ದು, ಬಾಕಿ ಒಂದನ್ನು ಮಾರ್ಚ್‌ ಬಳಿಕ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ರೈಲ್ವೇಯ ಹವಾನಿಯಂತ್ರಿತ ಲೋಕಲ್‌ ಗಳನ್ನು ಏಳು ತಿಂಗಳಿಗಿಂತ ಹೆಚ್ಚು ಕಾಲ ಮುಚ್ಚಲಾಯಿತು. ಹವಾನಿಯಂತ್ರಿತ ಲೋಕಲ್‌ ಸೇವೆಯು ಅ. 15ರಿಂದ ಪ್ರಾರಂಭವಾಯಿತು. ಈ ರೈಲು ದಿನಕ್ಕೆ 12 ಸುತ್ತುಗಳ ಸೇವೆ ಸಲ್ಲಿಸುತ್ತವೆ. ಪ್ರಸ್ತುತ ಹವಾನಿಯಂತ್ರಿತ ಸ್ಥಳೀಯ ರೈಲುಗಳಿಗೆ ಕಡಿಮೆ ಪ್ರತಿಕ್ರಿಯೆ ಇದೆ. ನವೆಂಬರ್‌ವರೆಗೆ 1,023 ಟಿಕೆಟ್‌ಗಳು ಮತ್ತು 667 ಪಾಸ್‌ಗಳನ್ನು ಮಾರಾಟ ಮಾಡಲಾಗಿದೆ. ಪಶ್ಚಿಮ ರೈಲ್ವೇ ಪ್ರಕಾರ ಡಿಸೆಂಬರ್‌ನಲ್ಲಿ 331 ಟಿಕೆಟ್‌ಗಳು ಮತ್ತು 223 ಪಾಸ್‌ಗಳನ್ನು ಮಾರಾಟ ಮಾಡಲಾಗಿದೆ. ಹವಾ ನಿಯಂತ್ರಿತ ಲೋಕಲ್ ‌ಗ‌ಳಲ್ಲಿ 5,964 ಪ್ರಯಾ ಣಿಕರ ಸಾಮರ್ಥ್ಯವಿದೆ ಆದರೆ ಕೊರೊನಾ ಅವಧಿ ಯಲ್ಲಿ 700 ಪ್ರಯಾಣಿಕರಿಗೆ ಮಾತ್ರ ಪ್ರಯಾ ಣಿಸಲು ಅವಕಾಶ ನೀಡಲು ರೈಲ್ವೇ ಆಡಳಿತ ನಿರ್ಧರಿಸಿದೆ. ಆದರೆ ಅದಕ್ಕಿಂತ ಕಡಿಮೆ ಪ್ರತಿ ಕ್ರಿಯೆ ದೊರೆಯುತ್ತಿದೆ. ಮಧ್ಯ ರೈಲ್ವೇಯಲ್ಲಿ ಥಾಣೆ ಯಿಂದ ಪನ್ವೆಲ್‌ವರೆಗೆ ಹವಾನಿಯಂತ್ರಿತ ಒಂದು ಲೋಕಲ್‌ ಇದ್ದು, ಕೊರೊನಾ ಹಿನ್ನೆಲೆಯಲ್ಲಿ ಇದನ್ನು ಕೆಲವು ಸಮಯದಿಂದ ಮುಚ್ಚಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next