Advertisement

ಮುಂಬೈನ ಶೇ. 57% ಕೊಳಗೇರಿ ನಿವಾಸಿಗಳಲ್ಲಿ ಕೋವಿಡ್ ಸೋಂಕು: ಮಹಿಳೆಯರಲ್ಲೇ ಹೆಚ್ಚು: ಸಮೀಕ್ಷೆ

10:00 AM Jul 29, 2020 | Mithun PG |

ಮುಂಬೈ: ಸೆರೋಲಾಜಿಕಲ್ ಸಮೀಕ್ಷೆಯ ಪ್ರಕಾರ ಮುಂಬೈ ನಗರದ 57% ರಷ್ಟು ಕೊಳೆಗೇರಿ ನಿವಾಸಿಗಳು ಮತ್ತು 16 ಪ್ರತಿಶತದಷ್ಟು ವಸತಿ ಸಮುಚ್ಛಯಗಳಲ್ಲಿ ವಾಸಿಸುವವರು ಕೋವಿಡ್ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ರೋಗಲಕ್ಷಣವಿಲ್ಲದ ಕಾರಣ ಪರೀಕ್ಷಿಸಲಾಗಿಲ್ಲ ಎಂದು ತಿಳಿಸಲಾಗಿದೆ.

Advertisement

ಸಿರೊ-ಸಮೀಕ್ಷೆಯ ಪ್ರಕಾರ  ಮಹಿಳೆಯರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.  ಮುಂಬೈ ನಾಗರಿಕ ಸಂಸ್ಥೆ, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ಮತ್ತು ನೀತಿ ಆಯೋಗ ಜೊತೆಗೆ ಸೇರಿಕೊಂಡು ಸೆರೋಲಾಜಿಕಲ್ ಸಮೀಕ್ಷೆಯನ್ನು ನಡೆಸಿತು.

6,936 ಜನರನ್ನು ಗುರಿಯಾಗಿಸಿಕೊಂಡು 8,870 ಜನರ ಸಮೀಕ್ಷೆ ನಡೆಸಲಾಗಿದ್ದು, ಕೊಳೆಗೇರಿಗಳಲ್ಲಿ ವಾಸಿಸದ ಹಲವರು ಸಮೀಕ್ಷೆಯಲ್ಲಿ ಭಾಗಿಯಾಗಲು ಹಿಂಜರಿದರು ಎಂದು ವರದಿ ತಿಳಿಸಿದೆ.  ಸಾಮಾನ್ಯ ಜನಸಂಖ್ಯೆ ಹೊಂದಿರುವ ಮುಂಬೈನ ಮೂರು ವಾರ್ಡ್‌ಗಳಾದ ದಹಿಸಾರ್, ಚೆಂಬೂರ್ ಮತ್ತು ಮಾಟುಂಗಾದಲ್ಲಿ  ಕೂಡ ಸಮೀಕ್ಷೆ ನಡೆಸಲಾಗಿದ್ದು ಇದರಲ್ಲಿ 57% ಕೊಳಗೆರಿ ನಿವಾಸಿಗಳು ಮತ್ತು 16% ಕೊಳಗೇರಿಯಲ್ಲಿ ವಾಸಿಸದ ನಿವಾಸಿಗಳು ಕೋವಿಡ್ ಹೊಂದಿದ್ದಾರೆಂದು ಅಂದಾಜಿಸಲಾಗಿದೆ.

ಮುಂಬೈ ನಗರದಲ್ಲಿ ಶೇ 40% ಜನರು ಕೊಳಗೇರಿಯಲ್ಲಿ ವಾಸಿಸುತ್ತಿದ್ದು, ಇದುವರೆಗೂ 1,11,000 ಪ್ರಕರಣಗಳು ಮತ್ತು 6 ಸಾವಿರಕ್ಕೂ ಅಧಿಕ ಸಾವುಗಳು ವರದಿಯಾಗಿವೆ. ಸುಮಾರು 2 ಕೊಟಿ ಜನರಿರುವ ಮುಂಬೈ ಮಹಾನಗರದ ಧಾರವಿ ಒಂದರಲ್ಲೆ 10 ಲಕ್ಷ ಜನರು ವಾಸಿಸುತ್ತಿದ್ದಾರೆ. ಆದಾಗ್ಯ ಕೊಳಗೇರಿಯಲ್ಲಿ ಹೆಚ್ಚಿನ ಸಾವುಗಳು ವರದಿಯಾಗಿಲ್ಲ. ಸೋಂಕು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದೇ ಕಾರಣ ಎನ್ನಲಾಗಿದೆ.

Advertisement

ಕೊಳೆಗೇರಿಗಳಲ್ಲಿ ಕೋವಿಡ್ -19 ಹರಡಲು ಜನಸಂಖ್ಯಾ ಪ್ರಮಾಣ ಮತ್ತು ಸಮುದಾಯವಾಗಿ ಬಳಸಲ್ಪಡುವ ಶೌಚಾಲಯ ಮತ್ತು ನೀರಿನ ಬಳಕೆ ಕಾರಣವಾಗಿದೆ. ಆದರೆ ಸಮೀಕ್ಷೆಯ ಅಂಕಿ ಅಂಶಗಳು ಹೊಸ ಅನುಮಾನ ಮೂಡಿಸಿದ್ದು ಭಾರತದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳುತ್ತಿರುವ ಕೋವಿಡ್ ಪ್ರಕರಣದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಪರೀಕ್ಷೆಯ ಕೊರತೆಯಿಂದಾಗಿ ನಿಜವಾದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲವೆಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next