ಮುಂಬಯಿ: ಪ್ರಸಕ್ತ ಸಾಲಿನಲ್ಲಿ ಮುಂಬಯಿ ವ್ಯಾಪ್ತಿಯಲ್ಲಿ ಸುಮಾರು 499 ಕಟ್ಟಡಗಳು ಅಪಾಯಕಾರಿಯಾಗಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಅಪಾಯಕಾರಿ ಕಟ್ಟಡಗಳ ಬಗ್ಗೆ ಆಡಿಟ್‌ಮಾಡಲಾಗುತ್ತದೆ.
ಕಳೆದ ವರ್ಷ ಮುಂಬಯಿಯಲ್ಲಿ 619 ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬಂದಿದ್ದವು. ಮುಂಬಯಿ ಮಹಾನಗರ ಪಾಲಿಕೆಯ ಪಶ್ಚಿಮ ವಾರ್ಡ್ ಅಂದರೆ ಅಂಧೇರಿ, ವಿಲೇಪಾರ್ಲೆ ಪರಿಸರದಲ್ಲಿ ಎಲ್ಲಕ್ಕಿಂತ ಅಧಿಕ ಸುಮಾರು 57 ಅಪಾಯಕಾರಿ ಕಟ್ಟಡಗಳು ಕಂಡುಬಂದಿದೆ.
ಟಿ ವಾರ್ಡ್ ವ್ಯಾಪ್ತಿಯ ಮುಲುಂಡ್, ಭಾಂಡುಪ್ ಪ್ರದೇಶಗಳಲ್ಲಿ 47ಅಪಾಯಕಾರಿ ಕಟ್ಟಡಗಳು, ಬಿ ವಾರ್ಡ್ ವ್ಯಾಪ್ತಿಯಲ್ಲಿ ಕೇವಲ ಒಂದು ಕಟ್ಟಡ ಮಾತ್ರ ಅಪಾಯಕಾರಿ ಯಾಗಿರುವುದು ಕಂಡುಬಂದಿದೆ. ಅನೇಕ ಕಟ್ಟಡಗಳು ನ್ಯಾಯಾಲಯದ ವಿಚಾರಣೆ ಮತ್ತು ಇತರ ಕಾರಣಗಳಿಂದಾಗಿ ಬಹುತೇಕ ಅಪಾಯಕಾರಿ ಕಟ್ಟಡಗಳನ್ನು ಖಾಲಿ ಮಾಲು ಸಾಧ್ಯವಾಗಿಲ್ಲ.
ಪ್ರತಿವರ್ಷ ಮಳೆಗಾಲದ ವೇಳೆ ಮನಪಾ ವ್ಯಾಪ್ತಿಯಲ್ಲಿ ಬರುವ ಸುಮಾರು 30 ವರ್ಷಗಳ ಅಥವಾ ಅದಕ್ಕಿಂತ ಹೆಚ್ಚಿನ ಕಟ್ಟಡಗಳ ಆಡಿಟ್ ಮನಪಾ ಆಡಳಿತ ವಿಭಾಗ ನಡೆಸುತ್ತದೆ. ಮಳೆಗಾಲದಲ್ಲಿ ಯಾವುದೇ ರೀತಿಯ ಸಾವುನೋವುಗಳನ್ನು ತಪ್ಪಿಸಲು ಕಾಳಜಿಯನ್ನು ತೆಗೆದುಕೊಳ್ಳುತ್ತದೆ.