Advertisement

ಸಂತ್ರಸ್ತರ ಖಾತೆಗೆ ನೇರ ಪರಿಹಾರ ಹಣ ಜಮಾ

01:30 PM Aug 15, 2019 | Naveen |

ಮುಳಗುಂದ: ಗದಗ ಕ್ಷೇತ್ರಕ್ಕೆ 2.70 ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದ್ದು, ಹಾನಿಯಾದ ಪ್ರಮಾಣಕ್ಕನುಗುಣವಾಗಿ ಎಲ್ಲರಿಗೂ ನೇರವಾಗಿ ಬ್ಯಾಂಕ್‌ ಖಾತೆಗೆ ಹಣ ಜಮಾವಣೆ ಮಾಡಲಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

Advertisement

ಸಮೀಪದ ನೀಲಗುಂದ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿ ಹಾಗೂ ನೆರೆ ಹಾನಿಯಿಂದ ಗದಗ ತಾಲೂಕಿನಾದ್ಯಂತ 769 ಮನೆಗಳು ಹಾನಿಗೀಡಾಗಿದ್ದು, ಕೆಲವು ಗ್ರಾಮಗಳಲ್ಲಿ ಗೋಡೆ ಕುಸಿತದಿಂದ ಜಾನುವಾರು ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ.

ಈವರೆಗೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನರು ಮಣ್ಣಿನ ಮಳೆಗಳನ್ನು ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಜವಾಬ್ದಾರಿಯುತ ನಾಗರಿಕರು ಸಂಕಷ್ಟದಲ್ಲಿರುವವರ ರಕ್ಷಣೆಗೆ ಮುಂದಾಗಬೇಕು ಎಂದರು.

ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಮನೆಗಳಿದ್ದು, ಇಂತಹ ಸಂದರ್ಭದಲ್ಲಿ ಅಪಾಯ ಉಂಟಾಗುತ್ತವೆ. ಕೂಡಲೇ ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಳಲು 4 ಲಕ್ಷ ರೂ. ಗಳಷ್ಟು ಸಹಾಯಧನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗದಗ ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗುರಣ್ಣ ಬಳಗಾನೂರ, ಹನಮಂತಪ್ಪ ಪೂಜಾರ, ಅಪ್ಪಣ್ಣ ಇನಾಮತಿ, ಪ್ರಭು ಬುರಬುರೆ, ಎಚ್.ಎಸ್‌. ಜಿನಗಿ , ಎನ್‌.ಬಿ. ದೊಡ್ಡಮನಿ, ಜಯಪ್ರಕಾಶ ಭಜಂತ್ರಿ,ನವೀನ ಬಂಗಾರಿ, ಸುನೀಲ ಬಂಗಾರಿ, ಪ್ರಭು ಅಂಗಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next