Advertisement

ಬೆಂಬಲ ಬೆಲೆ ಖರೀದಿ ನಿಯಮದಲ್ಲೇ ಗೊಂದಲ

01:53 PM Feb 13, 2020 | Naveen |

ಮುಳಗುಂದ: ಉತ್ಪನ್ನಗಳನ್ನು ಸರ್ಕಾರ ಸಹಕಾರಿ ಸಂಘಗಳ ಮೂಲಕ ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವಾಗ ಹಲವು ಲೋಪದೋಷಗಳು ಉಂಟಾಗಿ ಗೊಂದಲ ಮೂಡಿಸಿದೆ. ಹೀಗಾಗಿ ಇತ್ತ ಮಾರಲು ಆಗದೆ, ಅತ್ತ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಲು ಆಗದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಂಬಲ ಬೆಲೆ ಕೇಂದ್ರದಲ್ಲಿ ಮಾರಾಟ ಮಾಡಲು ರೈತರು ಬೆಳೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗಿದ್ದು, ಇದಕ್ಕೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿ ಪ್ರೂಟ್‌ ಆ್ಯಪ್‌ ಮೂಲಕ ರೈತರು ತಮ್ಮ ಬೆಳೆ ದೃಢೀಕರಣ ಪತ್ರ ಸಲ್ಲಿಸಬೇಕಾಗಿದ್ದು, ಆದರೆ ಹಲವು ರೈತರು ಜಮೀನುಗಳಲ್ಲಿ ಬೆಳೆ ದೃಢೀಕರಣ ಮಾಹಿತಿ ತಪ್ಪಾಗಿ ನಮೂದಾಗಿದೆ. ಶೇಂಗಾ, ಕಡಲೆ ಬದಲು ಹತ್ತಿ, ಮೆಣಸಿನಕಾಯಿ, ಇರುಳ್ಳಿ,ಗೋವಿನಜೋಳ ಎಂದು ನಮೂದಾಗಿದ್ದು, ದೃಢೀಕರಣ ಮಾಡುವವರ ಯಡವಟ್ಟಿನಿಂದಾಗಿ ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ನಿಯಮ ಅಡ್ಡಿಯಾಗಿದೆ.

ಬೆಂಬಲ ಬೆಲೆಯಲ್ಲಿ ಬಳ್ಳಿ ಶೇಂಗಾವನ್ನು ಪ್ರತಿಯೊಬ್ಬ ರೈತ 15 ಕ್ವಿಂಟಾಲ್‌ ಮಾತ್ರ ಮಾರಾಟ ಮಾಡಲು ಅವಕಾಶವಿದ್ದು, ಹೆಚ್ಚಿನ ಉತ್ಪನ್ನ ಬೆಳೆದ ರೈತರು ಬೆಂಬಲ ಬೆಲೆಯ ಲಾಭ ಪಡೆಯಲು ಅವಕಾಶವಿಲ್ಲದಂತಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶೇಂಗಾ ಹಾಗೂ ಹಿಂಗಾರು ಹಂಗಾಮಿನ ಕಡಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ರೈತರು ಸರ್ಕಾರದ ಈ ನಿಯಮಗಳಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next