Advertisement
ಅದೆಷ್ಟೋ ಜೀವಗಳನ್ನು ಬಲಿ ತೆಗೆದು ಕೊಂಡು, ದುರಂತಗಳಿಗೆ ಸಾಕ್ಷಿಯಾಗಿದ್ದ ಈ ಸೇತುವೆ ಮಳೆಗಾಲದಲ್ಲಿ ಶಾಲಾ ಮಕ್ಕಳಿಗೆ ಹೆಚ್ಚು ರಜೆಗೆ ಕಾರಣವಾದ “ಹೆಗ್ಗಳಿಕೆ’ಯನ್ನೂ ಹೊಂದಿತ್ತು.
Related Articles
Advertisement
ಹೊಸಮಠ ಸೇತುವೆಯ ಇತಿಹಾಸ ಕೆದಕಿ ದರೆ ಹಲವು ದುರಂತ ಘಟನೆಗಳು ಎದುರಾ ಗುತ್ತವೆ. ಸೇತುವೆಯಲ್ಲಿ ನೆರೆ ನೀರು ನಿಂತಾಗ ದಾಟುವ ದುಸ್ಸಾಹಸಕ್ಕೆ ಇಳಿದವರನ್ನು ನೆರೆನೀರು ತನ್ನ ಒಡಲೊಳಗೆ ಸೇರಿಸಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಸೇತುವೆ ನಿರ್ಮಾಣವಾಗಿ ಐದೇ ವರ್ಷದಲ್ಲಿ ಆ ರಸ್ತೆಯಲ್ಲಿ ಓಡಾಡುತ್ತಿದ್ದ ಖಾಸಗಿ ಬಸ್ ನೆರೆ ಸಂದರ್ಭದಲ್ಲಿ ಸೇತುವೆ ದಾಟಲು ಹೋಗಿ ನೀರು ಪಾಲಾಗಿ ಒಬ್ಬ ಬಲಿಯಾಗಿದ್ದರು. ಅದಾದ ಕೆಲವು ವರ್ಷ ಬಳಿಕ ಸುಬ್ರಹ್ಮಣ್ಯಕ್ಕೆ ಬಂದಿದ್ದ ತಮಿಳುನಾಡಿನ ಯಾತ್ರಾರ್ಥಿಗಳು ಸೇತುವೆ ದಾಟಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿದ್ದರೆ ಅಡಿಕೆ ಸಸಿ ಸಾಗಿಸುತ್ತಿದ್ದ ಲಾರಿಯೊಂದು ನೀರುಪಾಲಾಗಿ ಕೃಷಿಕರೊಬ್ಬರು ಮೃತಪಟ್ಟಿದ್ದರು. 2006ರಲ್ಲಿ ಕಡಬಕ್ಕೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಸೇತುವೆಯಿಂದ ಕೆಳಕ್ಕೆ ಬಿದ್ದು, ನಾಲ್ವರು ನೀರುಪಾಲಾಗಿ ಪ್ರಾಣ ಕಳೆದುಕೊಂಡಿದ್ದರು. ಅಂತೆಯೇ ಅದೆಷ್ಟೋ ಜನ ವಾಹನಗಳು ಆಯ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವುದು ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿಲ್ಲ. ಅನೇಕರು ಇಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದರು. ಅನೇಕರು ಆತ್ಮಹತ್ಯೆಗೆ ಯತ್ನಿಸಿ ಸಾರ್ವಜನಿಕರ ಸಕಾಲಿಕ ಕ್ರಮದಿಂದ ಪಾರಾದ ಘಟನೆಗಳೂ ಇವೆ.