Advertisement

ಬಹು ಉಪಯೋಗಿ ಸಿಹಿಕುಂಬಳ

05:54 PM Feb 18, 2020 | Team Udayavani |

ಕುಂಬಳಕಾಯಿಯಲ್ಲಿ ಸಿಹಿಕುಂಬಳ, ಬೂದು ಕುಂಬಳ ಎಂಬ ಎರಡು ವಿಧಗಳಿವೆ. ಅದರಲ್ಲಿ ಚೀನಿಕಾಯಿ ಎಂದು ಕರೆಯಲ್ಪಡುವ ಸಿಹಿಗುಂಬಳವನ್ನು ತರಕಾರಿಯಾಗಷ್ಟೇ ಅಲ್ಲದೆ, ಮನೆ ಮದ್ದಾಗಿ, ತ್ವಚೆಯ ಕಾಂತಿ ಹೆಚ್ಚಿಸುವುದಕ್ಕಾಗಿಯೂ ಬಳಸಲಾಗುತ್ತದೆ.

Advertisement

-ಸಿಹಿಕುಂಬಳದ ತಿರುಳಿಗೆ ಸಕ್ಕರೆ, ಜೇನು ತುಪ್ಪ, ಮೊಸರು ಹಾಕಿ ಪೇಸ್ಟ್‌ ತಯಾರಿಸಿ, ಮುಖಕ್ಕೆ ಹಚ್ಚಿದರೆ ಚರ್ಮ ಕಾಂತಿಯುತವಾಗುತ್ತದೆ.
-ಸಿಹಿಕುಂಬಳದ ಬೀಜಗಳನ್ನು ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆ¿åಲ್ಲಿ ಸೇವಿಸಿದರೆ, ಜಂತುಹುಳು ಕಡಿಮೆಯಾಗುವುದಲ್ಲದೆ, ದೇಹದ ಉಷ್ಣತೆ ತಗ್ಗುತ್ತದೆ.
-ಸಿಹಿ ಕುಂಬಳದ ತಿರುಳಿಗೆ ಜೇನುತುಪ್ಪ, ಕೊಬ್ಬರಿ ಎಣ್ಣೆ ಬೆರೆಸಿ ಹಚ್ಚಿದರೆ, ತುಟಿಗಳಿಗೆ ಗುಲಾಬಿ ರಂಗು ಸಿಗುತ್ತದೆ.
– ಸಿಹಿಕುಂಬಳದ ಬೀಜವನ್ನು ಹಾಲಿನಲ್ಲಿ ತೇಯ್ದು ರಾತ್ರಿ ಮಲಗುವ ಸಮಯದಲ್ಲಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
-ಪ್ರತಿನಿತ್ಯ ಬೆಳಿಗ್ಗೆ ಹುರಿದ ಕುಂಬಳ ಬೀಜವನ್ನು ಸೇವಿಸುವುದರಿಂದ ಬೇಡದ ಕೊಬ್ಬು ಕರಗುತ್ತದೆ.
-ಸಿಹಿಕುಂಬಳದೊಂದಿಗೆ ಬೆಟ್ಟದ ನೆಲ್ಲಿ ಕಾಯಿ¿åನ್ನು ಬೆರೆಸಿ ಸೇವಿಸುತ್ತಾ ಬಂದರೆ ಋತುಚಕ್ರದ ಅತಿ ರಕ್ತಸ್ರಾವವನ್ನು ನಿಯಂತ್ರಿಸಬಹುದು.
– ಸಿಹಿಕುಂಬಳದಲ್ಲಿ ವಿಟಮಿನ್‌ ಎ ಜೀವಸತ್ವ ಹೆಚ್ಚಿರುವುದರಿಂದ, ಅದನ್ನು ಸೇವಿಸಿದರೆ ಕಣ್ಣಿನ ಆರೋಗ್ಯ ವರ್ಧಿಸುತ್ತದೆ.

-ಭಾಗ್ಯ ಆರ್‌.ಗುರುಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next