Advertisement

ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ದಾರುಣ ಘಟನೆ: ಹಲವರಿಗೆ ಇರಿತ, ಕಾರಣ ನಿಗೂಢ !

01:23 PM Sep 06, 2020 | Mithun PG |

ಲಂಡನ್: ಇಂದು ಮುಂಜಾನೆ ಇಂಗ್ಲೆಂಡ್ ನ ಎರಡನೇ ಪ್ರಮುಖ ನಗರ   ಬರ್ಮಿಂಗ್ ಹ್ಯಾಮ್ ನ ಹಲವೆಡೆ ಜನರು ಸಾಮೂಹಿಕ ಇರಿತಕ್ಕೊಳಗಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅದಾಗ್ಯೂ ಬ್ರಿಟೀಷ್ ಪೊಲೀಸರು ಇದೊಂದು ದಾರುಣ ಘಟನೆ  ಎಂದು ಬಣ್ಣಿಸಿದ್ದಾರೆ.

Advertisement

ಸ್ಥಳೀಯ ಕಾಲಾಮಾನ 12:30 AMಗೆ  ಬರ್ಮಿಂಗ್ ಹ್ಯಾಮ್ ಸಿಟಿ ಸೆಂಟರ್ ಬಳಿ ಹಲವರನ್ನು ಸಾಮೂಹಿಕವಾಗಿ ಇರಿಯಲಾಗಿದೆ ಎಂದು ವರದಿ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತೆರಳಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಹಲವರು ಇರಿತಕ್ಕೊಳಗಾಗಿದ್ದು ಅದಾಗ್ಯೂ ಎಷ್ಟು ಮಂದಿ ಗಂಭಿರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ತುರ್ತು ಸೇವಾ ಆಧಿಕಾರಿಗಳು ದೌಡಾಯಿಸಿದ್ದು, ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಸಿಟಿ ಸೆಂಟರ್ ನ ಪ್ರಮುಖ ಸ್ಥಳಗಳನ್ನು ಪೊಲೀಸರು ಸುತ್ತುವರೆದಿದ್ದು, ಘಟನೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ ಎಂದು ವರದಿಯಾಗಿದೆ.

ಬಿರ್ಮಿಂಗ್ ಹ್ಯಾಮ್ ಹಲವೆಡೆ ತುರ್ತು ಘೋಷಣೆಗಳನ್ನು ಹೊರಡಿಸಲಾಗಿದ್ದು, ಘಟನೆ ನಡೆದ ಸ್ಥಳದಿಂದ ದೂರವಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next