Advertisement

ಭಾರತದ ಬಹು ಸಂಸ್ಕೃತಿ ಅಪಾಯದಲ್ಲಿದೆ

06:22 AM Mar 10, 2019 | |

ಬೆಂಗಳೂರು: ಭಾರತದ ಬಹು ಸಂಸ್ಕೃತಿ ಅಪಾಯದಲ್ಲಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಮಂಥನ ಸಂಸ್ಥೆ ನಗರದ ಸೇಂಟ್‌ ಜೋಸೆಫ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಇತರ ದೇಶಗಳು ಭಾರತದ ಬಹು ಸಂಸ್ಕೃತಿ ಯನ್ನು ಅಳವಡಿಸಿಕೊಳ್ಳುತ್ತಿವೆ . ಆದರೆ ಭಾರತದಲ್ಲಿ ಏಕ ಸಂಸ್ಕೃತಿ ವ್ಯವಸ್ಥೆ ಜಾರಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು. ಯಾರದೋ ಮನೆಯಲ್ಲಿ ದನದ ಮಾಂಸ ಇದೆ ಎಂದು ಅವರನ್ನು ನಡು ಬೀದಿಯಲ್ಲಿ ಹೊಡೆದು ಕೊಲ್ಲುವ ವ್ಯವಸ್ಥೆ ಭಾರತಕ್ಕೆ ಅತ್ಯಂತ ಅಪಾಯಕಾರಿ ಎಂದು ಹೇಳಿದರು.

ದೇಶ ಆರ್ಥಿಕವಾಗಿಯೂ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಜಿಡಿಪಿ ಕೂಡ ನಕಲಿಯಾಗಿದೆ. ನಿರುದ್ಯೋಗ ಸಮಸ್ಯೆ, ಉತ್ಪಾದನೆ ಕುಂಠಿತವಾಗಿದೆ. ದೇಶ ವಿರೋಧಿ ಎನ್ನುವ ವ್ಯವಸ್ಥೆಯೂ ಕೆಟ್ಟದಾಗಿದ್ದು, ನಕ್ಷಲಿಸಂ,

-ಭಯೋತ್ಪಾದನೆ ದೇಶ ವಿರೋಧಿ ಚಟುವಟಿಕೆಗಳು ಆದರೆ, ಸರ್ಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವುದೇ ದೇಶ ವಿರೋಧಿ ಚಟುವಟಿಕೆ ಎಂಬ ಭಾವನೆ ಮೂಡಿಸುತ್ತಿರುವುದು ದುರದೃಷ್ಟಕರ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ್ರೋಹಿ ಎನ್ನುವ ಕಾನೂನಿಗೆ ಸ್ಪಷ್ಟ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next