ಮುಂಬೈ: ಮಹಾರಾಷ್ಟ್ರ ಮುಂಬೈ- ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ಹಲವು ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಎಕ್ಸ್ ಪ್ರೆಸ್ ವೇ ನ ಖಲಾಪುರ್ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ. ಟ್ರಕ್ಕೊಂದು ಎರಡು ಕಾರುಗಳಿಗೆ ಮತ್ತು ಒಂದು ಗೂಡ್ಸ್ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದೆ. ಅಪಘಾತದ ರಭಸಕ್ಕೆ ವಾಹನಗಳು ನಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ನವೀ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಜೊತೆ ಸೇವೆ ಸಲ್ಲಿಸುತ್ತಿದ್ದ ವೈದ್ಯ ವೈಭವ್ ಜಂಜಾರೆ ಮತ್ತು ಕುಟುಂಭಿಕರು ಮೃತರಾಗಿದ್ದಾರೆ. ವೈಭವ್ ಅವರು ಪತ್ನಿ, ತಾಯಿ ಮತ್ತು ಮಗಳೊಂದಿಗೆ ಕಾರಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ:ವ್ಯಾಪಿಸುತ್ತಿದೆ ವಂಚಕರ ಜಾಲ! ನಕಲಿ ಫೇಸ್‌ಬುಕ್, ಟ್ವಿಟರ್ ಖಾತೆ ಬಗ್ಗೆ ಇರಲಿ ಎಚ್ಚರ
Related Articles
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ: ಟೂಲ್‌ಕಿಟ್ ರಚಿಸಿದ್ದೇ ದಿಶಾ, ನಿಕಿತಾ, ಶಂತನು! ಟೆಲಿಗ್ರಾಂ ಮೂಲಕ ಥನ್‌ಬರ್ಗ್‌ಗೆ ರವಾನೆ