Advertisement

ಬಹುಮುಖ ಪ್ರತಿಭೆಯ ಬಾಲ ಕಲಾವಿದ ಶ್ರೇಯಸ್‌

07:32 PM Mar 09, 2021 | Team Udayavani |

ಬಹುಮುಖ ಪ್ರತಿಭೆಯ ಶ್ರೇಯಸ್‌ ದುಬೈ ಕನ್ನಡ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ.  ದಕ್ಷಿಣ ಕನ್ನಡ ಬಂಟ್ವಾಳ ಮೂಲದ ಪ್ರಸಾದ್‌ ಮಹಾಲಿಂಗೇಶ್ವರ ಮತ್ತು ಶ್ರುತಿ ಅವರ ಮಗನಾಗಿರುವ ಶ್ರೇಯಸ್‌ ಶೈಕ್ಷಣಿಕವಾಗಿ ಮಾತ್ರವಲ್ಲದೇ ಪಠ್ಯೇತರ ಚುಟುವಟಿಕೆ ಗಳಲ್ಲಿಯೂ ಉತ್ತಮ ಸಾಧನೆಗಯ್ಯುತ್ತಿದ್ದಾರೆ.

Advertisement

ಬಾಲಿವುಡ್‌ ಮತ್ತು ಸಮಕಾಲೀನ ನೃತ್ಯ ತರಬೇತಿಯನ್ನು ಪಡೆಯುತ್ತಿರುವ ಶ್ರೇಯಸ್‌ ಉತ್ತಮ ವಾಗ್ಮಿ, ಅಭಿನಯ ಚತುರನೂ ಹೌದು. ಅಬುಧಾಬಿಯಲ್ಲಿ ನಡೆದ 2019ರ ಕನ್ನಡ ರಾಜ್ಯೋತ್ಸವದಲ್ಲಿ ಅದ್ಭುತ ಭಾಷಣ ಮಾಡಿ ಎಲ್ಲರ ಮನ ಸೆಳೆದಿರುವ ಈತ ಶಾರ್ಜಾ ಕರ್ನಾಟಕ ಸಂಘದ 17ನೇ ವಾರ್ಷಿಕೋತ್ಸವದಲ್ಲಿ ಕನ್ನಡ ಭಾಷೆಯಲ್ಲಿ ಚಿತ್ರದುರ್ಗದ ಐತಿಹಾಸಿ ವ್ಯಕ್ತಿ ಮದಕರಿ ನಾಯಕನ ಏಕಪಾತ್ರಾಭಿನಯದ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರನಾಗಿದ್ದಾನೆ.

ಪ್ರತಿಭಾವಂತ ಕಲಾವಿದನಾಗಿರುವ ಈತ ಯುಸಿ ಡಿನೋ ಆರ್ಟ್‌ ಅಚೀರ್ವಸ್‌ ಶಾರ್ಜಾದ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದು ಈಗಾಗಲೇ ಈತನ ಕಲಾಕೃತಿಗಳು ಯುಎಇಯಾದ್ಯಂತ ವಿವಿಧ ಕಲಾ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗಿದೆ.

ಉತ್ತಮ ಕ್ರಿಕೆಟ್‌ ಪಟು,  ಕ್ರಿಕೆಟ್‌ ವಿಶ್ಲೇಷಕನಾಗಿ ಆಗಿ  ಗಮನ ಸೆಳೆದಿರುವ ಶ್ರೇಯಸ್‌ ಶಾಲೆಯಲ್ಲಿ ಅಥ್ಲೀಟ್‌ ಟೆನಿಸ್‌ ಅಭ್ಯಾಸವನ್ನೂ ಮಾಡುತ್ತಿದ್ದಾನೆ.  ಯಂಗ್‌ ಸೈಂಟಿಸ್ಟ್‌, ಪ್ಲೇಟೋನ ಪ್ಲಾನೆಟ್‌ ಮತ್ತು ಫ‌ನ್‌ ರೊಬೊಟಿಕ್ಸ್‌ , ದುಬೈನಲ್ಲಿ ರೊಬೊಟಿಕ್ಸ್‌ ತರಗತಿ, ಕಾರ್ಯಾಗಾರಗಳಲ್ಲಿ ಭಾಗವಹಿಸಿರುವ ಈತ, ಶಾರ್ಜಾ ದೆಹಲಿ ಪ್ರೈವೇಟ್‌ ಶಾಲೆಯ 5ನೇ ತರಗತಿ ವಿದ್ಯಾರ್ಥಿ.  ಹೆಚ್ಚು ಅಂಕ ಗಳಿಸಿದ ಈತನ  ಸಾಧನೆಗಾಗಿ ದುಬೈ ಸರಕಾರ ಶಿಕ್ಷಣ ಮಂಡಳಿಯಿಂದ ನೀಡುವ ಪ್ರತಿಷ್ಠಿತ ಶೇಕ್‌ ಹಂದಾನ್‌ ಬಿನ್‌ ಮೊಹಮ್ಮದ್‌

ಬಿನ್‌ ಅಲ್‌ ಮಕ್ತಮ್‌ 2019- 20ನೇ  ಸಾಲಿನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಈತನು ಶಿಕ್ಷಣದಲ್ಲಿ  ಮಾಡಿದ  ಸಾಧನೆಯನ್ನು ಗುರುತಿಸಿ  ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ದುಬೈ ದಸರಾ ಕ್ರೀಡೋತ್ಸವ 2020ರಲ್ಲಿ ನೀಡುವ ಪ್ರತಿಭಾ  ಪುರಸ್ಕಾರ ನೀಡಿ ಸಮ್ಮಾನಿಸಿದ್ದಾರೆ.

Advertisement

 

ಹಾದಿಯ ಮಂಡ್ಯ,   ದುಬೈ

Advertisement

Udayavani is now on Telegram. Click here to join our channel and stay updated with the latest news.

Next