Advertisement
ಈಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನುತೆರೆಯಲು ಪಾಲಿಕೆ ಮುಂದಾಗಿದೆ.ಕೊರೊನಾ ಅಲೆಯಲ್ಲಿ ಉಂಟಾದವೈದ್ಯಕೀಯ ಸೌಕರ್ಯಗಳ ಕೊರತೆಯಿಂದಬಿಬಿಎಂಪಿಸಾಕಷ್ಟುಸಮಸ್ಯೆಗಳನ್ನುಎದುರಿಸಿತ್ತು.ಇದುಮತ್ತೆಪುನಾರಾವರ್ತನೆಆಗಬಾರದು ಎಂಬ ಉದ್ದೇಶದಿಂದ ಪಾಲಿಕೆಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
Related Articles
Advertisement
28 ವಾರ್ಡ್ಗಳಲ್ಲಿ ಸ್ಪೆಷಾಲಿಟಿ ಆಸ್ಪತ್ರೆ: ನಗರದಲ್ಲಿಕೋವಿಡ್ ಎರಡನೇ ಅಲೆ ಸೃಷ್ಟಿಸಿದ ಅವಘಡಗಳುಹಾಗೂ ಮೂರನೇ ಅಲೆ ಆತಂಕದಿಂದ ಪಾಲಿಕೆಎಚ್ಚೆತ್ತುಕೊಂಡಿದೆ. ಮುಂದೆ ಎರಡನೇ ಅಲೆಯಲ್ಲಿನಡೆದಂತ ಘಟನೆಗಳು ಮರುಕಳಿಸದಂತೆ ಆರೋಗ್ಯವ್ಯವಸ್ಥೆಯನ್ನು ಭದ್ರಗೊಳಿಸಲು ನಿರ್ಧಾರಕೈಗೊಂಡಿದೆ. ಹೀಗಾಗಿ, ನಗರದ 28 ವಾರ್ಡ್‌ಗಳಲ್ಲಿಸ್ಪೆಷಾಲಿಟಿ ಆಸ್ಪತ್ರೆ (ಸೆಕೆಂಡರಿ ಹಾಸ್ಪಿಟಲ…) ತೆರೆಯಲುಉದ್ದೇಶಿಸಿದೆ.
ಜತೆಗೆ, ನಾಲ್ಕು ಕಡೆಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯುವ ಉದ್ದೇಶದಿಂದಒಂದು ಸಾವಿರ ಕೋಟಿ ರೂ. ಅನುದಾನಕ್ಕಾಗಿಪ್ರಸ್ತಾವನೆಯಲ್ಲಿ ಉಲ್ಲೇಖೀಸಿದೆ.ತಿಂಗಳಾಂತ್ಯದಲ್ಲಿ ಬಾಡಿಗೆಕಟ್ಟಡ ಪ್ರಾರಂಭ: ಪಾಲಿಕೆವ್ಯಾಪ್ತಿಯಲ್ಲಿ ಸ್ವಂತ ಕಟ್ಟಡ (ಆಸ್ಪತ್ರೆ)ನಿರ್ಮಾಣಸಾಧ್ಯವಾಗದಲ್ಲಿ ತುರ್ತಾಗಿ ಬಾಡಿಗೆ ಕಟ್ಟಡಗಳಲ್ಲಿಆರಂಭಿಸಲು ಪಾಲಿಕೆ ಚಿಂತಿಸಿದೆ. ಇದಕ್ಕೆ ಸಿದ್ಧತೆಯಲ್ಲಿಕೈಗೊಳ್ಳಲಾಗಿದೆ.
ಈಗಾಗಲೇ, 20 ಬಾಡಿಗೆಕಟ್ಟಡಗಳನ್ನು ಅಂತಿಮಗೊಳಿಸಲಾಗಿದ್ದು, ಜುಲೈತಿಂಗಳಾಂತ್ಯದಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ.ಉಳಿದಂತೆ,28 ಸ್ಪೆಷಾಲಿಟಿ ಆಸ್ಪತ್ರೆಗಳ ಪೈಕಿ ಈಗಾಗಲೇನಾಲ್ಕು ಆಸ್ಪತ್ರೆಗಳುಕಾರ್ಯ ನಿರ್ವಹಿಸುತ್ತಿದೆ. ಪಾಲಿಕೆವ್ಯಾಪ್ತಿಯ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಆಸ್ಪತ್ರೆತೆರೆಯಲು ಯೋಜನೆ ಸಿದ್ಧಪಡಿಸಲಾಗಿದೆ ಎಂದುಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
3ನೇ ಅಲೆ ತಡೆಗೆ ಅಗತ್ಯ ಕ್ರಮ: ಮೂರನೇ ಅಲೆಸಾಧ್ಯತೆ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಸಲಹೆಯನ್ನುಪಾಲಿಕೆ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರುತ್ತಿದೆ.ಅದರಂತೆ, ಕೊರೊನಾ ಸೋಂಕು ಹರಡದಂತೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಅನ್‌ಲಾಕ್‌ಜಾರಿಯಲ್ಲಿದ್ದರೂ ಕೋವಿಡ್ ಪರೀಕ್ಷೆ ಕಡಿಮೆಯಾಗಿಲ್ಲ. ದೆಹಲಿ ಹಾಗೂ ಮುಂಬೈ ನಗರಕ್ಕಿಂತಎರಡು ಪಟ್ಟು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.ಜತೆಗೆ, ಎರಡನೇ ಅಲೆಯಲ್ಲಿ ಆಗಿದ್ದ ಆಕ್ಸಿಜನ್‌ಸಮಸ್ಯೆ ಮರುಕಳಿಸದಂತೆ ಆಕ್ಸಿಜನ್ ಪ್ಲಾಂಟ್‌ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದುಮಾಹಿತಿ ನೀಡಿದ್ದಾರೆ.
ವಿಕಾಸ್ ಆರ್. ಪಿಟ್ಲಾಲಿ