Advertisement
ಏನಿದು ಹರಳೆಣ್ಣೆ?ಹರಳೆ ಬೀಜವನ್ನು ಹುರಿದು ಅದರಿಂದ ತಯಾರಾಗುವ ಎಣ್ಣೆಯಾಗಿದೆ. ಸಾಮಾನ್ಯವಾಗಿ ರಾಸಾಯನಿಕ ವಿಧಾನದಿಂದಲೂ ಇದನ್ನು ತಯಾರಿಸಲು ಸಾಧ್ಯವಿದ್ದು ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ವಿಧಾನ ಸೂಕ್ತವೆನ್ನ ಬಹುದು.
ಇದರಲ್ಲಿನ ಅಂಡಿ ಸೈಲೆನಿಕ್ ಆಮ್ಲ ತ್ವಚೆಯ ತೊಂದರೆಗಳನ್ನು ಸರಿಪಡಿಸಿ ಹೊಳಪುಳ್ಳ, ಕಲೆಯಿಲ್ಲದ ತ್ವಚೆಯನ್ನು ನಿಮ್ಮದಾಗಿಸಬಹುದು. ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರ ನಿವಾರಕ ಗುಣವು ತ್ವಚೆಯ ಸುಕ್ಕನ್ನು ನಿವಾರಿಸುತ್ತದೆ. ಮೂಳೆ ಸಮಸ್ಯೆ ನಿವಾರಿಸಲು ಓಲಿಕ್, ಲಿನೋಲಿಕ್, ರಿಸಿನೋಲಿಕ್ ಆಮ್ಲವು ಮೂಳೆ ಸಮಸ್ಯೆ, ಸಂಧಿವಾತ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಹರಳೆಣ್ಣೆಯನ್ನು ಕೊಂಚ ಬಿಸಿ ಮಾಡಿ ನೋವು ಉಂಟಾದ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯು ವುದು ಇಲ್ಲವೇ ಸ್ನಾನ ಮಾಡುವುದರಿಂದ ಸಮಸ್ಯೆ ನಿವಾರಿಸಲು ಸಾಧ್ಯವಿದೆ. ಸೊಂಪಾದ ಕೇಶಕ್ಕೂ ಬೇಕು
ಯಾರಾದರೂ ಹಿರಿಯರಲ್ಲಿ ಒಮ್ಮೆ ಅವರ ಕಾಲದ ಕೇಶ ಕಾಂತಿಗೆ ಏನು ಬಳಕೆ ಮಾಡುತ್ತಿದ್ದರು ಎಂದು ಕೇಳಿದರೆ ಬರುವ ಉತ್ತರ ಹರಳೆಣ್ಣೆಯೆಂದು. ತಲೆ ಕೂದಲ ಬೇರಿಗೆ ತಾಕುವವರೆಗೂ ಎಣ್ಣೆ ಮಸಾಜ್ ಮಾಡಿ ಅರ್ಧಗಂಟೆಯ ಬಳಿಕ ತಲೆಕೂದಲನ್ನು ತೊಳೆಯಬೇಕು. ಇದರಲ್ಲಿ ಅಂಟಿನ ಗುಣವಿರುವುದರಿಂದ ತೊಳೆಯುವುದು ಕಷ್ಟವಾದರೂ ಕೂದಲ ಆರೈಕೆಗೆ ಇದೊಂದು ಉತ್ತಮ ವಿಧಾನವೆನ್ನಬಹುದು. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುವುದಲ್ಲದೆ ಸಿಲ್ಕಿ ಸೊಂಪಾದ ಕೂದಲು ನಿಮ್ಮದಾಗುತ್ತದೆ.
Related Articles
ಇದನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶವನ್ನು ದೂರಮಾಡಿ ಉತ್ತಮ ಜೀರ್ಣಕ್ರಿಯೆ ಪ್ರಾಪ್ತಿಯಾಗುತ್ತದೆ. ಇಂದು ಮಲಬದ್ಧತೆ ಸಮಸ್ಯೆ ಕಾಡಿದಾಗ ಇಂಗ್ಲಿಷ್ ಮೆಡಿಸಿನ್ ಮೊರೆಹೋಗುತ್ತಿದ್ದಾರೆ.ಬದಲಿಗೆ ಹರಳೆಣ್ಣೆಯ ನೈಸರ್ಗಿಕ ಗುಣದಿಂದಲೂ ಈ ಸಮಸ್ಯೆ ನಿವಾರಣೆ ಸಾಧ್ಯವಿದ್ದು ಒಮ್ಮೆ ಈ ಕುರಿತು ಚಿಂತಿಸಬೇಕಾಗಿದೆ.
Advertisement
- ರಾಧಿಕಾ, ಕುಂದಾಪುರ