ಸುಂದರವಾರ ತ್ವಚೆ ಹೊಂದುವುದು ಎಲ್ಲರ ಆಸೆ. ಆದರೆ ಮಲಿನಗೊಂಡ ವಾತಾವರಣ, ಸರಿಯಾದ ಆರೈಕೆ ಮಾಡದಿರುವುದು, ಜೀವನಶೈಲಿಯಿಂದ ತ್ವಚೆ ಹೊಳಪು ಕಳೆದುಕೊಂಡಿರುತ್ತದೆ. ತ್ವಚೆಯ ಯಾವುದೇ ಸಮಸ್ಯೆಗೂ ನೈಸರ್ಗಿಕ ಮನೆಮದ್ದುಗಳು ಸುಲಭ ಪರಿಹಾರ. ನೈಸರ್ಗಿಕ ವಿಧಾನಗಳನ್ನು ಬಳಸಿ ತ್ವಚೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇಂತಹ ನೈಸರ್ಗಿಕ ಮನೆ ಮದ್ದುಗಳಲ್ಲಿ ಒಂದು ಮುಲ್ತಾನಿ ಮಿಟ್ಟಿ.
ಬಳಕೆ ಹೇಗೆ
· ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಶ್ರೀಗಂಧದ ಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಹಚ್ಚಿ 15ರಿಂದ 20 ನಿಮಿಷ ಹಾಗೇ ಬಿಟ್ಟು ನೀರಿನಿಂದ ತೊಳೆದುಕೊಳ್ಳಬೇಕು.
· ಒಂದು ಚಮಚ ಮುಲ್ತಾನಿ ಮಿಟ್ಟಿ, ಅರ್ಧ ಚಮಚ ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಮುಖವನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಈ ಪೇಸ್ಟ್ ಹಚ್ಚಿ 15 ನಿಮಿಷ ಕಾಲ ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಚರ್ಮಕ್ಕೆ ಮೊಶ್ಚಿರೈಸ್ ದೊರಕುವುದು.
· 2 ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಶ್ರೀಗಂಧ ಹುಡಿ ಹಾಗೂ ಅರ್ಧ ಚಮಚ ಅರಿಶಿನ ಹುಡಿ ಮಿಶ್ರಣ ಮಾಡಿದ ಬಳಿಕ ಅದನ್ನು ಅರ್ಧ ಚಮಚ ಟೊಮೇಟೊ ರಸದೊಂದಿಗೆ ಪೇಸ್ಟ್ ತಯಾರಿಸಿಕೊಳ್ಳಿ. ಅನಂತರ ಮುಖಕ್ಕೆ ಹಚ್ಚಿಕೊಂಡು 10-15 ನಿಮಿಷ ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಪ್ರಯೋಜನಗಳು
· ಎಣ್ಣೆಯುಕ್ತ ಚರ್ಮಕ್ಕೆ ಉತ್ತಮ
· ಮೊಡವೆಗಳ ನಿವಾರಣೆ
· ಚರ್ಮದ ವಿನ್ಯಾಸ ಸುಧಾರಣೆ
· ಬಿಸಿಲಿನ ಸುಟ್ಟ ಕಲೆಗಳು ಶಮನ
· ನೈಸರ್ಗಿಕ ಕಾಂತಿ
· ಕಲೆ ಮತ್ತು ಗಾಯದ ಕಲೆ ತೆಗೆಯುವುದು
· ಚರ್ಮ ಮೃದುವಾಗಿಸುವುದು
· ಮೊಡವೆಗಳ ಕಲೆ ನಿವಾರಣೆ