Advertisement

ಮೂಳೂರು : ಗಾಂಜಾ ಮಾರಾಟಕ್ಕೆ ಯತ್ನ , ಇಬ್ಬರ ಸೆರೆ

09:15 AM Aug 22, 2019 | Team Udayavani |

ಕಾಪು: ಕೇರಳದಿಂದ ತಂದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸೊತ್ತು ಸಮೇತವಾಗಿ ಕಾಪು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Advertisement

ಕಾಪು ಮಲ್ಲಾರು ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಖಾಸಿಂ (55), ಮತ್ತೋರ್ವ ಉಚ್ಚಿಲ‌ ಸಮೀಪದ ನಿವಾಸಿ 16 ವರ್ಷದ ಬಾಲಾಪರಾಧಿ ಬಂಧಿತರು.

ಬಂಧಿತರಿಂದ ಒಂದೂವರೆ ಕಿ. ಗ್ರಾಂ. ಗಾಂಜಾ, 2 ಮೊಬೈಲ್, ತೂಕದ ಮಿಷನ್ ಸಹಿತ 56 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕೇರಳದ ಉಪ್ಪಳದಿಂದ ತಂದ ಗಾಂಜಾವನ್ನು ಮೂಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಈ ಬಗ್ಗೆ ಕಾಪು ಎಸ್ಸೈ ಜಯ ಕೆ. ಅವರಿಗೆ ದೊರಕಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ನಡೆಸಿದ್ದರು.

Advertisement

ಬಂಧಿತರ ಪೈಕಿ ಮಹಮ್ಮದ್ ಖಾಸಿಂನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತು ಬಾಲಾಪರಾಧಿಯನ್ನು ರಿಮಾಂಡ್ ಹೋಮ್ ಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next