Advertisement

ಮುಳ್ಳೂರು ಅಂಗನವಾಡಿ ಕೇಂದ್ರ: ಆರೋಗ್ಯವಂತ ಶಿಶು ಪ್ರದರ್ಶನ

11:08 PM Jul 11, 2019 | sudhir |

ಶನಿವಾರಸಂತೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಇಲಾಖೆ ಹಾಗೂ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಮುಳ್ಳೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Advertisement

ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಸಿ.ಎಸ್‌.ಸತೀಶ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಪೌಷ್ಟಿಕ ಆಹಾರ ಸೇವಿಸುವುದರ ಮೂಲಕವಾಗಿ ತಾಯಿ ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಮಗುವನ್ನು ಆರೋಗ್ಯಕರವಾಗಿ ಬೆಳೆಸುವುದರಲ್ಲಿ ತಾಯಿಯ ಪಾತ್ರ ಮುಖ್ಯವಾದದ್ದು ಈ ನಿಟ್ಟಿನಲ್ಲಿ ಗರ್ಭಿಣಿಯರು ತಾಯಿಂದಿಯರು ಉತ್ತಮ ಪೌಷ್ಟಿಕಾಂಶ ಒಳಗೊಂಡಿರುವ ಆಹಾರವನ್ನು ಸೇವಿಸಿ ತಾಯಿ ಮತ್ತು ಮಗು ಆರೋಗ್ಯವಂತರಾಗಿ ಜೀವನ ಸಾಗಿಸುವಂತೆ ಸಲಹೆ ನೀಡಿದರು.

ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸ್ವಾತಿ ಮಾಹಿತಿ ನೀಡಿ, ಗರ್ಭಿಣಿಯರು ಉತ್ತಮ ಪೌಷ್ಟಿಕ ಆಹಾರ ಸೇವನೆ ಮತ್ತು ಪೌಷ್ಠಿಕಾಂಶ ಇರುವ ಮಾತ್ರೆಗಳನ್ನು ಸೇವಿಸಿದರೆ ಶಿಶು ಆರೋಗ್ಯವಾಗಿ ಜನಿಸುತ್ತದೆ ಎಂದರು. ಗರ್ಭಿಣಿಯರು, ತಾಯಿಂದಿಯರು ಮೊದಲು ಆರೋಗ್ಯದತ್ತ ಗಮನ ಹರಿಸಬೇಕು, ಮಗುವಿಗೆ ತಾಯಿಯ ಎದೆಹಾಲು ಕುಡಿಸಬೇಕು ಇದ ರಿಂದ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಗರ್ಭಿಣಿ ಯರು ಹಾಗೂ ತಾಯಿಂದಿಯರು ಪೌಷ್ಠಿಕ ಆಹಾರ ಸೇವಿಸುವುದ್ದರಿಂದ ತಾಯಿಯ ಎದೆಹಾಲಿನಲ್ಲಿ ಪೌಷ್ಟಿಕಾಂಶ ಹೆಚ್ಚಿರುತ್ತದೆ ಈ ಉದ್ದೇಶದಿಂದ ತಾಯಿಂದಿಯರು ಮಗುವಿಗೆ 2 ವರ್ಷದ ವರೆಗೂ ಎದೆಹಾಲನ್ನು ಕೊಡಬೇಕಾಗುತ್ತದೆ ಹಾಗೂ ಒಂದು ಮಗುವಿನಿಂದ ಮತ್ತೂಂದು ಮಗುವಿಗೆ ಅಂತರವನ್ನು ಕಾಯ್ದಕೊಳ್ಳಬೇಕು ಇದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯವು ಉತ್ತಮಗೊಳ್ಳುತ್ತದೆ ಎಂದರು.

ಆಶಾ ಕಾರ್ಯಕರ್ತೆ ರೂಪ, ಮುಳ್ಳೂರು ಅಂಗನವಾಡಿ ಶಿಕ್ಷಕಿ ಜಯ, ನಿಡ್ತ ಗ್ರಾ.ಪಂ.ಸದಸ್ಯ ವಿಜ¿åಕುಮಾರ್‌ ಮುಂತಾದವರು ಇದ್ದರು. ನಿಡ್ತ ಗ್ರಾ.ಪಂ.ವ್ಯಾಪ್ತಿಯ 6 ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯ ತಾಯಿಂದಿಯರು ಮತ್ತು ಶಿಶುಗಳು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 3 ಆರೋಗ್ಯವಂತ ಶಿಶುಗಳಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next