Advertisement

ಮೂಳೂರು ಹೆದ್ದಾರಿಯಲ್ಲಿ  ಕುಸಿತ

02:09 PM Jul 11, 2018 | Harsha Rao |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಪೇಟೆಯಲ್ಲಿ ಸಂಜೆ ರಸ್ತೆಯ ಮಧ್ಯದಲ್ಲಿ ಕುಸಿತ ಸಂಭವಿಸಿದ್ದು, ವಾಹನ ಚಾಲಕರಲ್ಲಿ ಆತಂಕ ಮೂಡಿಸಿದೆ.

Advertisement

ಸ್ಥಳೀಯರ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯ ಎಂಜಿನಿಯರ್‌ ಚಂದ್ರಶೇಖರ್‌ ಅವರು, ರಾತ್ರಿಯೇ ಕಾಮಗಾರಿ ನಡೆಸಿ ದುರಸ್ತಿ ಮಾಡುತ್ತೇವೆ. ಹೆದ್ದಾರಿ ಸಂಚಾರಿಗಳಲ್ಲಿ ಆತಂಕ ಬೇಡ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next