Advertisement

ಕೋಳಿ ಅಂಗಡಿ ಮಾಲೀಕರ ಪತ್ನಿಗೆ ಸೋಂಕು ದೃಢ; ಮೂಲ್ಕಿ ಕೆಎಸ್ ರಾವ್ ನಗರ ಸೀಲ್ ಡೌನ್

06:11 PM Jul 04, 2020 | keerthan |

ಮೂಲ್ಕಿ: ಇಲ್ಲಿನ ಕೆ ಎಸ್ ರಾವ್ ನಗರದ ಕೋಳಿ ಅಂಗಡಿ ಮಾಲೀಕರೊಬ್ಬರು ಪತ್ನಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ಪ್ರದೇಶದಲ್ಲಿ ಸೀ್ಲ್ ಡೌನ್ ಮಾಡಲಾಗಿದೆ.

Advertisement

ಮಹಿಳೆಗೆ ಕೋವಿಡ್ ಸೋಂಕು ಇರುವ ಬಗ್ಗೆ ಇಂದು ದೃಢವಾಗಿದೆ. ಕೆ ಎಸ್ ರಾವ್ ನಗರ ಜನವಸತಿ ಪ್ರದೇಶವಾದ ಕಾರಣ ಸೋಂಕಿತ ಮಹಿಳೆ ವಾಸವಿರುವ ಮನೆಯ ಸಂಪರ್ಕ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜನರಿಗೆ ಅಗತ್ಯ ಮಾಹಿತಿಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಕೋವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ಹಳೆಯಂಗಡಿಯಲ್ಲಿ ಜು.5 ಸೋಮವಾರದಿಂದ ಸ್ವಯಂ ಪ್ರೇರಿತವಾಗಿ ಪೇಟೆಯನ್ನು ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರಿಗೆ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next