Advertisement

ಮೂಲ್ಕಿ : ಬಾಲಪ್ರತಿಭಾ ಸ್ಪರ್ಧೆ ಪ್ರತಿಭಾ ಸೌರಭ 

10:45 AM Dec 03, 2017 | Team Udayavani |

ಮೂಲ್ಕಿ : ವಿದ್ಯಾರ್ಥಿ ದೆಸೆಯಲ್ಲಿಯೇ ನಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವ ಅವಕಾಶ ದೊರಕಿದರೆ ನಮ್ಮ ಬದುಕಿನ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ ಎಂದು ಮೂಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಹಾಸ್‌ ಹೆಗ್ಡೆ ಹೇಳಿದರು.

Advertisement

ಅವರು ಮೂಲ್ಕಿ ವಿಜಯ ಕಾಲೇಜಿನ ವಠಾರದಲ್ಲಿ ಪುನರೂರು ಪ್ರತಿಷ್ಠಾನ ಮತ್ತು ಜನವಿಕಾಸ ಕೇಂದ್ರದ ಆಶ್ರಯದಲ್ಲಿ ಮೂಲ್ಕಿ ಪರಿಸರದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಬಾಲಪ್ರತಿಭಾ ಸ್ಪರ್ಧೆ ಪ್ರತಿಭಾ ಸೌರಭ -2017ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿ, ಕಲೆ ಮತ್ತು ಪ್ರತಿಭೆಯಲ್ಲಿ ಅನುಕರಣೆ ಸಲ್ಲದು. ಅನುಭವ ಮತ್ತು ಸ್ವತಃ ಸಂಸ್ಕೃತಿಯ ಆರಾಧನೆಯ ಮೂಲಕ ಪ್ರತಿಭೆ ನಮ್ಮಲ್ಲಿ ಅನಾವರಣಗೊಂಡಾಗ ಮಾತ್ರ ಸೂಕ್ತ ಗೌರವ ಸಿಗಲು ಸಾಧ್ಯ ಎಂದರು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ಚರೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್‌.ಎಸ್‌. ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಜೀವನದಲ್ಲಿ ದೊರೆತ ಅವಕಾಶವನ್ನು ಸದುಪಯೋಗ ಉತ್ತಮ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ಮೂಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲ ಡಾ| ಕೆ.ನಾರಾಯಣ ಪೂಜಾರಿ ಮಾಹಿತಿ ನೀಡಿದರು. ಮೂಲ್ಕಿ ಕರ್ಣಾಟಕ ಬ್ಯಾಂಕಿನ ಮ್ಯಾನೇಜರ್‌ ಮಂಜುನಾಥ ರಾವ್‌, ಜನ ವಿಕಾಸ ಸಮಿತಿಯ ಅಧ್ಯಕ್ಷ ಪಿ.ಎಸ್‌. ಸುರೇಶ್‌ ರಾವ್‌, ಟ್ರಸ್ಟ್‌ನ ಕಾರ್ಯದರ್ಶಿ ಶ್ರೇಯಾ ಪುನರೂರು ವೇದಿಕೆಯಲ್ಲಿದ್ದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಸ್ವಾಗತಿಸಿದರು. ಸುಚಿತ್ರಾ ನಿರ್ವಹಿಸಿದರು. ಭಾಗ್ಯ ರಾಜೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next