ಮೂಲ್ಕಿ : ಮುಖ್ಯಮಂತ್ರಿ ಕುಮಾರಸ್ವಾಮಿ ರವಿವಾರ 10.30ರ ಹೊತ್ತಿಗೆ ಕಾರ್ಕಳದಿಂದ ಮೂಲ್ಕಿ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಕಾರು ನಿಲ್ಲಿಸಿ ಮೂಲ್ಕಿ ಹೆದ್ದಾರಿಯ ಬಪ್ಪನಾಡು ದೇವಸ್ಥಾನದ ದ್ವಾರದ ಬಳಿ ಕಾಯುತ್ತಿದ್ದ ಮೂಲ್ಕಿಯ ಜೆಡಿ ಎಸ್ ಹಿರಿಯ ಕಾರ್ಯಕರ್ತರನ್ನು ಭೇಟಿ ಮಾಡಿದರು.
ಇದೇ ಜಾಗದಲ್ಲಿ ಈ ಹಿಂದೆ ಭೇಟಿ ಯಾದ ಕಾರ್ಯಕರ್ತರು ಮೂಲ್ಕಿ ತಾಲೂ ಕಿನ ಬಗ್ಗೆ ನೆನಪು ಮಾಡಿರುವುದನ್ನು ಮುಖ್ಯಮಂತ್ರಿಯವರಿಗೆ ನೆನಪಿಸಿ ಅಭಿನಂದನೆ ಸಲ್ಲಿಸಿದರು.
ಮೂಲ್ಕಿ ಬ್ಲಾಕ್ ಅಧ್ಯಕ್ಷ ಜೀವನ್ ಶೆಟ್ಟಿ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಇಕ್ಬಾಲ್ಅಹಮ್ಮದ್ ಮೂಲ್ಕಿ, ರಾಜ್ಯ ಉಪಾಧ್ಯಕ್ಷ ಹೈದರ್ ಪರ್ತಿಪಾಡಿ, ಬಪ್ಪನಾಡು ದೇವಸ್ಥಾನ ಆಡಳಿತೆ ಮೊಕ್ತೇಸರ ಮನೋಹರ ಶೆಟ್ಟಿ, ಜೆಡಿಎಸ್ ಸ್ಥಳೀಯ ಮುಖ್ಯಸ್ಥರಾದ ಜಯ ಪೂಜಾರಿ ಮಟ್ಟು, ರಂಜನ್ ಶೆಟ್ಟಿ, ನೂರುಲ್ಲ ಶೇಕ್, ಕುಮಾರ್ ಶೆಟ್ಟಿ ಕಿಲ್ಪಾಡಿ, ಅಬ್ದುಲ್ ರಜಾಕ್, ನಿಸಾರ್ ಅಹಮ್ಮದ್, ಉದಯ ಶೆಟ್ಟಿ ಆದಿಧನ್, ನೂತನ್ ಶೆಟ್ಟಿ, ಸಂಜಿತ್ ಶೆಟ್ಟಿ, ಸತೀಶ್ ಶೆಟ್ಟಿ, ವೇದವ್ಯಾಸ ಮುಂತಾದವರಿದ್ದರು.