Advertisement
ಮೂಲ್ಕಿ ಪೊಲೀಸ್ ಠಾಣೆಗೆ ಮೂಲ್ಕಿ ನಗರ ಪಂಚಾಯತ್ ಹಾಗೂ ಹಳೆಯಂಗಡಿ, ಪಡುಪಣಂಬೂರು, ಕಿಲ್ಪಾಡಿ, ಅತಿಕಾರಿಬೆಟ್ಟು, ಬಳುRಂಜೆ, ಐಕಳ, ಕಿನ್ನಿಗೋಳಿ, ಮೆನ್ನಬೆಟ್ಟು, ಕೆಮ್ರಾಲ್, ಕಟೀಲು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯನ್ನು ಹೊಂದಿದೆ. ಇದರಲ್ಲಿ ಕಟೀಲು, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಕೆಲವೊಂದು ಗ್ರಾಮದ ಭಾಗ ಮಾತ್ರ ಬಜಪೆ ಹಾಗೂ ಸುರತ್ಕಲ್ ಠಾಣೆಗೆ ಸೇರಿಸಲ್ಪಟ್ಟಿದೆ.ಈ ಭಾಗದ 16 ಮತಗಟ್ಟೆಗಳನ್ನು ಮೂಲ್ಕಿ ಪೊಲೀಸ್ ಠಾಣೆಗೆ ಹೆಚ್ಚುವರಿಯಾಗಿ ವಹಿಸಲಾಗಿದ್ದು, ಒಟ್ಟು 63 ಮತದಾನದ ಕೇಂದ್ರಗಳನ್ನು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯು ಜಂಟಿಯಾಗಿ ವಿಂಗಡಿಸಿಕೊಂಡಿದೆ.
ಮೂಲ್ಕಿ ಠಾಣಾ ವ್ಯಾಪ್ತಿ ಒಟ್ಟು 63 ಮತದಾನ ಕೇಂದ್ರಗಳಲ್ಲಿ 17 ಮತದಾನ ಕೇಂದ್ರಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲ್ಪಟ್ಟಿದೆ. ಬಪ್ಪನಾಡು ಗ್ರಾಮದ ಮತಗಟ್ಟೆ ಸಂಖ್ಯೆ 01, ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯಕಾಡಿನ 118ರಿಂದ 121 (ಒಟ್ಟು 4), ಹಳೆಯಂಗಡಿಯ 146ರಿಂದ 151 (6), ಪಕ್ಷಿಕೆರೆ- ಕೆಮ್ರಾಲ್‌ನ 129 ಮತ್ತು 131 (2), ಅತಿಕಾರಿಬೆಟ್ಟಿನ 6 ಮತ್ತು 7 (2), ಕಿನ್ನಿಗೋಳಿ 102, ತಾಳಿಪಾಡಿ 104, ಪಡುಪಣಂಬೂರು 124, ಉಳೆಪಾಡಿ 14 (ಹೊಸದಾಗಿ ಸೇರ್ಪಡೆ) ಅತಿಸೂಕ್ಷ್ಮ ಮತಗಟ್ಟೆಯಾಗಿವೆ. ಉಳಿದ 46 ಮತಗಟ್ಟೆಗಳನ್ನು ಸಾಮಾನ್ಯ ಮತಕೇಂದ್ರಗಳಾಗಿ ಗುರುತಿಸಲಾಗಿದೆ. ಅತಿ ಸೂಕ್ಷ್ಮಕೇಂದ್ರದಲ್ಲಿ ಸೇನಾಪಡೆ
ಮೂಲ್ಕಿ ಠಾಣಾ ವ್ಯಾಪ್ತಿಯ 17 ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಕೆಎಸ್‌ಆರ್‌ಪಿ ಪೊಲೀಸರನ್ನು ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸಿಬಂದಿ ಸಹಿತ ನಿಯೋಜಿಸಲಾಗುತ್ತದೆ.
Related Articles
Advertisement
ಹೆಚ್ಚುವರಿ ಕೇಂದ್ರ ಅರೆ ಸೇನಾ ಪಡೆ(ಸಿಪಿಎಂಎಫ್) ಯೋಧರ ನಿಯೋಜನೆಯನ್ನು ಎಲ್ಲೂ ಬಳಸಲಾಗುವುದಿಲ್ಲ. ಆದರೆ ಕೆ.ಎಸ್. ರಾವ್ ನಗರ ಹಾಗೂ ಹಳೆಯಂಗಡಿ ವ್ಯಾಪ್ತಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಬಳಸುವ ಸಾಧ್ಯತೆ ಇದೆ.
ಮೂಲ್ಕಿ ಠಾಣೆಯಲ್ಲಿ ಓರ್ವ ಸಿಐ, ಎಸ್‌ಐ-2, ಎಎಸ್‌ಐ-4, ಎಚ್‌ಸಿ-14, 32 ಸಿಬಂದಿ ಸಹಿತ ಹೆಚ್ಚುವರಿಯವಾಗಿ ನಿಯೋಜನೆಯಲ್ಲಿರುವವರು ವಿವಿಧ ಜವಾಬ್ದಾರಿಯನ್ನು ಹಂಚಿಕೊಳ್ಳಲಿದ್ದಾರೆ. ಇವರೊಂದಿಗೆ ಹೋಮ್‌ಗಾರ್ಡ್‌ಗಳನ್ನು ಎಲ್ಲ ಮತದಾನ ಕೇಂದ್ರಗಳ ಸುರಕ್ಷೆಗೆ ನಿಯೋಜಿಸಲಾಗುತ್ತದೆ.
ಸುರಕ್ಷೆಗೆ ಆದ್ಯತೆಈಗಾಗಲೇ ಎಲ್ಲ ಮತಗಟ್ಟೆಗಳ ಮಾಹಿತಿ ಪಡೆದುಕೊಂಡು ಕೇಂದ್ರಕ್ಕೆ ಯಾವ ರೀತಿಯ ರಕ್ಷಣೆ ಬೇಕು ಹಾಗೂ ಸಿಬಂದಿ ನಿಯೋಜನೆಗೆ ಸಜ್ಜಾಗಿದ್ದೇವೆ. ಮತದಾರರು ಸುರಕ್ಷಿತವಾಗಿ ಮತದಾನ ಮಾಡುವ ಹಾಗೂ ಯಾವುದೇ ರೀತಿಯಲ್ಲೂ ಕಾನೂನನ್ನು ಮೀರಿ ನಡೆಯದ ರೀತಿಯಲ್ಲಿ ರಕ್ಷಣೆ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ.
- ಪಿ.ಎಂ. ಸಿದ್ದರಾಜು,
ಸಿಐ, ಮೂಲ್ಕಿ ಪೊಲೀಸ್ ಠಾಣೆ - ನರೇಂದ್ರ ಕೆರೆಕಾಡು