Advertisement
ಕಾರ್ತಿಕ್ ಪೂಜಾರಿ ತನ್ನ ತಾಯಿ ಹಾಗೂ ಅಜ್ಜಿಯ ಜತೆಗೆ ವಾಸವಿದ್ದು ಕೆಲವು ತಿಂಗಳಿನಿಂದ ಚಿತ್ರದುರ್ಗದ ಸಂಬಂಧಿಯೋರ್ವರ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿ ದುಡಿಯುತ್ತಿದ್ದರು. ಮೂಲ್ಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಕಾರ್ತಿಕ್‌ಗೆ ಮೂಡುಬಿದಿರೆಯ ಬಾಲಕಿ ಶರಣ್ಯಾ ಜತೆಗೆ ಪ್ರೇಮಾಂಕುರವಾಗಿತ್ತು. ಆದರೆ ಅಪ್ರಾಪ್ತ ವಯಸ್ಕರಾದ ಹಿನ್ನೆಲೆಯಲ್ಲಿ ವಿವಾಹಕ್ಕೆ ಅವಕಾಶ ಆಗಿರಲಿಲ್ಲ. ಈ ನಡುವೆ ಮನೆಮಂದಿ ಮೂಲ್ಕಿಯ ಅಜ್ಜಿ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಶರಣ್ಯಾಳನ್ನು ಮೂಡುಬಿದಿರೆಯ ಮನೆಗೆ ಕರೆದೊಯ್ದಿದ್ದರು ಹಾಗೂ ಕಾರ್ತಿಕ್ ಚಿತ್ರದುರ್ಗಕ್ಕೆ ತೆರಳಿದ್ದರು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಶರಣ್ಯಾ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದರು. ಶನಿವಾರ ಊರಿಗೆ ಬಂದಿದ್ದ ಕಾರ್ತಿಕ್ ಕೂಡ ಈ ಘಟನೆಯಿಂದ ಮನನೊಂದು ಆತ್ಮಹತ್ಯೆ ಎಸಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.
Advertisement
Mulki ಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯತಮನೂ ಆತ್ಮಹತ್ಯೆ
12:40 AM May 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.