Advertisement

ಮೂಲ್ಕಿ ಗ್ರಾಹಕನ ಸೋಗಿನಲ್ಲಿ ಬಂದು ಮಹಿಳೆಯ ಸರಗಳ್ಳತನ! ದೃಶ್ಯ ಸಿಸಿ ಕೆಮರಾದಲ್ಲಿ ಸೆರೆ

08:29 PM Jul 22, 2020 | sudhir |

ಮೂಲ್ಕಿ : ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಅಂಗಡಿಯಲ್ಲಿದ್ದ ಮಹಿಳೆಯ ಸರ ಕಳ್ಳತನ ಮಾಡಿದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಕಾರ್ನಾಡ್ ಚರಂತಿಪೇಟೆ ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದ್ದು ಇದೀಗ ಕಳ್ಳತನದ ದೃಶ ಪಕ್ಕದ ಕಟ್ಟಡದಲ್ಲಿರುವ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

Advertisement

ಕಪ್ಪುಬಣ್ಣದ ಆಕ್ಟಿವಾ ಸ್ಕೂಟರ್ ನಲ್ಲಿ ಬಂದ ಯುವಕ ಅಂಗಡಿ ಪಕ್ಕದಲ್ಲಿ ಸ್ಕೂಟರ್ ನಿಲ್ಲಿಸಿ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಹೋಗಿ ಮಹಿಳೆಯ ಕತ್ತಿನಲ್ಲಿದ್ದ ಒಂದು ಪವನ್ ತೂಕದ ಚಿನ್ನದ ಸರ ಎಳೆದು ಕ್ಷಣ ಮಾತ್ರದಲ್ಲೇ ಪರಾರಿಯಾಗಿದ್ದಾನೆ.

ಇವೆಲ್ಲಾ ದೃಶ್ಯಾವಳಿಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದುವು ಮೂಲ್ಕಿ ಪೊಲೀಸರು ಕಳ್ಳನ ಹುಡುಕಾಟಕ್ಕೆ ಬಲೆ ಬಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next