ಮೂಲ್ಕಿ: ಐತಿಹಾಸಿಕವಾಗಿ ಹೆಸರು ಮಾಡಿರುವ ಮೂಲ್ಕಿ ಬ್ರಿಟಿಷರ ಕಾಲದಲ್ಲಿ ಅವಿಭಜಿತ ದ.ಕ.ಜಿಲ್ಲೆಯ ಪ್ರಮುಖ ತಾಣವಾಗಿದ್ದು, ಇಂತಹ ಪರಂಪರೆಯುಳ್ಳ ಇಲ್ಲಿನ ಜನತೆಯ ತಾಲೂಕು ಬೇಡಿಕೆಯನ್ನು ಸರಕಾರ ಕಡೆಗಣಿಸಿರುವುದು ಅತ್ಯಂತ ನೋವಿನ ವಿಷಯ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಅವರು ಹೊಸ ಅಂಗಣ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಇತಿಹಾಸವನ್ನು ಮುಂದಿಟ್ಟು ಕೊಂಡು ನಾವು ಬಹಳಷ್ಟು ಸಾಹಿತ್ಯ ಮತ್ತು ಸಾಮಾಜಿಕ ವಲಯದ ಕಾರ್ಯ ಕ್ರಮಗಳನ್ನು ಹೋರಾಟದ ರೂಪದಲ್ಲಿ ನಡೆಸಿ ಸರಕಾರಕ್ಕೆ ತಿಳಿಸುವ ಕೆಲಸ ಮಾಡ ಬೇಕು ಹಾಗೂ ತಾಲೂಕಿನ ಹೋರಾಟಕ್ಕೆ ಸಾಮೂಹಿಕವಾಗಿ ದುಡಿಯುವ ಅಗತ್ಯ ಇದೆ ಎಂದ ಅವರು, ಮೂಲ್ಕಿ ಅಭಿವೃದ್ಧಿಗೆ ತಾಲೂಕು ರಚನೆಯಾಗುವುದು ಅಗತ್ಯ ಎಂದರು.
ಈಗಾಗಲೇ ಮೂಲ್ಕಿಯಲ್ಲಿದ್ದ ಹಲವು ಸರಕಾರಿ ಕಚೇರಿಗಳು ಕಾಣೆಯಾಗಿವೆ. ಇನ್ನೂ ಮೌನವಾಗಿದ್ದರೆ ಎಲ್ಲವೂ ಮಾಯ ವಾಗುವ ಅಪಾಯವಿದೆ ಎಂದರು. ಸಾಮಾಜಿಕ ಮತ್ತು ಧಾರ್ಮಿಕ ವಲಯದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿ ರುವ ಉಮೇಶ್ ಕುಂದರ್ ಅವರನ್ನು ಹೊಸ ಅಂಗಣ ಪತ್ರಿಕೆ ವತಿಯಿಂದ ಸಮ್ಮಾನಿಸಲಾಯಿತು.
ಮೂಲ್ಕಿ ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಸಾಹಿತಿ ಎನ್.ಪಿ. ಶೆಟ್ಟಿ, ನಾಲ್ಕು ಪಟ್ಣ ಮೊಗವೀರ ಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್, ಉದ್ಯಮಿ ಸುರೇಶ್ ಬಂಗೇರ ಮುಂತಾದ ವರು ಅತಿಥಿಗಳಾಗಿದ್ದರು.
ಹೆಜಮಾಡಿ ಪಂಚಾಯತ್ ಮಾಜಿ ಅಧ್ಯಕ್ಷ ವಾಮನ ನಡಿಕುದ್ರು ಸ್ವಾಗತಿಸಿ ದರು. ರವಿಚಂದ್ರ ನಿರೂಪಿಸಿದರು. ಕಾರ್ಯಕ್ರಮ ಹರಿಶ್ಚಂದ್ರ ಪಿ. ಸಾಲ್ಯಾನ್ ವಂದಿಸಿದರು.